Asianet Suvarna News Asianet Suvarna News

ಮೋದಿ-ಶಾ ನೇತೃತ್ವದಲ್ಲಿ ನಾಳೆ ರಾಷ್ಟ್ರೀಯ ಕಾರ್ಯಕಾರಿಣಿ; ಮಹತ್ತರ ಘೋಷಣೆ ಸಾಧ್ಯತೆ

ರಾಜಧಾನಿ ದೆಹಲಿಯಲ್ಲಿ ಒಂದು ದಿನದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ತಾಳಕತೊರಾ ಕ್ರೀಡಾಂಗಣದಲ್ಲಿ ನಾಳೆ ಬೆಳಿಗ್ಗೆ ಆರಂಭವಾಗಲಿದ್ದು ಬೆಳಿಗ್ಗೆ ಅಮಿತ್ ಶಾ ಉದ್ಘಾಟನಾ ಭಾಷಣ ಮಾಡಲಿದ್ದಾರೆ.  ಸಂಜೆ ಪ್ರಧಾನಿ ನರೇಂದ್ರ ಮೋದಿ ಸಮಾರೋಪ ಭಾಷಣ ಮಾಡಲಿದ್ದಾರೆ.

National Level BJP Core Committe Meeting in Delhi

ನವದೆಹಲಿ (ಸೆ. 24): ರಾಜಧಾನಿ ದೆಹಲಿಯಲ್ಲಿ ಒಂದು ದಿನದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ತಾಳಕತೊರಾ ಕ್ರೀಡಾಂಗಣದಲ್ಲಿ ನಾಳೆ ಬೆಳಿಗ್ಗೆ ಆರಂಭವಾಗಲಿದ್ದು ಬೆಳಿಗ್ಗೆ ಅಮಿತ್ ಶಾ ಉದ್ಘಾಟನಾ ಭಾಷಣ ಮಾಡಲಿದ್ದಾರೆ.  ಸಂಜೆ ಪ್ರಧಾನಿ ನರೇಂದ್ರ ಮೋದಿ ಸಮಾರೋಪ ಭಾಷಣ ಮಾಡಲಿದ್ದಾರೆ.

ನೋಟು ರದ್ಧತಿ ಮತ್ತು ಜಿ ಎಸ್ ಟಿ ಜಾರಿಯ ನಂತರ ಕುಸಿಯುತ್ತಿರುವ ಆರ್ಥಿಕತೆಗೆ ಚೈತನ್ಯ ನೀಡಲು ಕೆಲ ದೊಡ್ಡ ಯೋಜನೆಗಳ ಘೋಷಣೆಗಳನ್ನು ಮೋದಿ ಮಾಡಬಹುದು ಎಂಬ ನಿರೀಕ್ಷೆ ಇದೆ. ಬಹುತೇಕ ಮೊದಲ ಬಾರಿ ಪ್ರಧಾನಿ ಮೋದಿ ಕಾರ್ಯಕಾರಿಣಿ ಯಲ್ಲಿ ಮಾಡುವ ಭಾಷಣವನ್ನು ದೇಶದ ಜನರಿಗೆ ಲೈವ್ ತೋರಿಸಲು ತಯಾರಿ ಮಾಡಲಾಗಿದ್ದು ಏನಾದರೂ ಹೊಸ ಹೊಸ ಯೋಜನೆ  ಪ್ರಕಟಿಸಬಹುದು ಎಂದು ಹೇಳಲಾಗುತ್ತಿದೆ.

24 ಗಂಟೆ 365 ದಿನ್ ವಿದ್ಯುತ್

ದೇಶದ ಪ್ರತಿ ಮನೆಗೂ 24 ಗಂಟೆ ವಿದ್ಯುತ್ ಪೂರೈಸುವ ಹೊಸ ಯೋಜನೆ ಮೋದಿ ಪ್ರಕಟಿಸುವ ಸಾಧ್ಯತೆಗಳಿದ್ದು ಸೌಭಾಗ್ಯ ಎಂದು ಇದಕ್ಕೆ ಹೆಸರಿಡುವ ಸಾಧ್ಯತೆಗಳಿವೆ. ಉದ್ಯೋಗ ಹೆಚ್ಚು ಮಾಡುವ ದ್ರಷ್ಟಿಯಿಂದ ಸರ್ಕಾರವೇ ಹತ್ತು ಸಾವಿರ ಕೋಟಿ ಹಣವನ್ನು ಖರ್ಚು ಮಾಡುವ ಸಾಧ್ಯತೆಯಿದ್ದು ಆರ್ಥಿಕ ಇಲಾಖೆ ಇದಕ್ಕೆ ಅಂತಿಮ ಸ್ವರೂಪ್ ನೀಡುತ್ತಿದೆ.                       

ರೈತರಿಗೆ ಸಬ್ಸಿಡಿ ಹೆಚ್ಚಳ                       

ಜಿ’ಎಸ್’ಟಿ ಬಂದ ನಂತರ ಗ್ರಾಮೀಣ ಆರ್ಥಿಕತೆ ಮುರಿದು ಬಿದ್ದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರೈತರಿಗೆ ಕೊಡುಗೆಗಳ ಮಹಾಪೂರ ನೀಡಲಿದ್ದಾರೆ.  ಹೀಗೆ ಸಂಜೆ ಮೋದಿ ಸಾಹೇಬರು ಕಾರ್ಯಕರಿಣಿಯಲ್ಲಿ ಕೆಲ ಯೋಜನೆ ಪ್ರಕಟಿಸುವುದರ ಜೊತೆಗೆ 2019 ರ ಚುನಾವಣೆ ತಯಾರಿಗೆ ಮೋದಿ ಮತ್ತು ಅಮಿತ್ ಶಾ ರೋಡ್ ಮ್ಯಾಪ್ ಅನ್ನು ಘೋಷಿಸಿದ್ದಾರೆ.                         

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಿಂತ ಮೊದಲು ಇದು ಕೊನೆ ಕಾರ್ಯಕಾರಿಣಿ ಆಗಲಿದ್ದು ಚುನಾವಣಾ ತಯಾರಿಗೆ ಬಿಜೆಪಿ ನಾಯಕರನ್ನು ಸಜ್ಜು ಗೊಳಿಸುವ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿದೆ.                    

Follow Us:
Download App:
  • android
  • ios