Asianet Suvarna News Asianet Suvarna News

ಶ್ರೀಮಂತ ಪತಿಗಷ್ಟೇ ಸನ್ಯಾಸತ್ವ, ಪತ್ನಿಗೆ ಇಲ್ಲ

ಬರೋಬ್ಬರಿ 100 ಕೋಟಿ ರು. ಮೌಲ್ಯದ ಆಸ್ತಿ ಮತ್ತು 3 ವರ್ಷದ ಮಗುವನ್ನು ತೊರೆದು ಜೈನ ದೀಕ್ಷೆಗೆ ಮುಂದಾಗಿದ್ದ ಉತ್ತರಪ್ರದೇಶದ ದಂಪತಿ ಪೈಕಿ ಸುಮೀತ್ ರಾಥೋರ್ ಅವರಿಗೆ ಮಾತ್ರವೇ ಜೈನ ದೀಕ್ಷೆ ನೀಡಲಾಗಿದೆ.

Monkhood Granted To Only Husband

ಸೂರತ್: ಬರೋಬ್ಬರಿ 100 ಕೋಟಿ ರು. ಮೌಲ್ಯದ ಆಸ್ತಿ ಮತ್ತು 3 ವರ್ಷದ ಮಗುವನ್ನು ತೊರೆದು ಜೈನ ದೀಕ್ಷೆಗೆ ಮುಂದಾಗಿದ್ದ ಉತ್ತರಪ್ರದೇಶದ ದಂಪತಿ ಪೈಕಿ ಸುಮೀತ್ ರಾಥೋರ್ ಅವರಿಗೆ ಮಾತ್ರವೇ ಜೈನ ದೀಕ್ಷೆ ನೀಡಲಾಗಿದೆ.

ಸುಮೀತ್ ಅವರ ಪತ್ನಿ ಅನಾಮಿಕ ರಾಥೋರ್ ಅವರಿಗೆ ಕಾನೂನಿನ ತೊಡಕಿನ ಕಾರಣ ಸನ್ಯಾಸತ್ವ ನಿರಾಕರಿಸಲಾಗಿದೆ.

ಗುಜರಾತ್‌ನ ಸೂರತ್‌ನಲ್ಲಿರುವ ಸುಧಾಮಾರ್ಗಿ ಜೈನ ಆಚಾರ್ಯ ರಾಮ್‌ಲಾಲ್ ಜಿ ಮಹಾರಾಜ್ ಸಮ್ಮುಖದಲ್ಲಿ ಸುಮೀತ್ ಅವರು ಶನಿವಾರ ಸನ್ಯಾಸ ದೀಕ್ಷೆ ಪಡೆದರು.

ಈ ದಂಪತಿಗೆ ಇಭ್ಯಾ ಎಂಬ ಮೂರು ವರ್ಷದ ಹೆಣ್ಣು ಮಗುವಿದೆ. ಇಬ್ಬರೂ ಜೈನ ದೀಕ್ಷೆ ಪಡೆದು ಸನ್ಯಾಸಿಗಳಾದರೆ, ಮಗುವಿನ ಜವಾಬ್ದಾರಿ ಹೊರುವವರು ಯಾರು ಎಂಬ ಜಿಜ್ಞಾಸೆ ಮೂಡಿತ್ತು.

ಮಗುವನ್ನು ಒಂಟಿಯಾಗಿ ಬಿಟ್ಟು ದಂಪತಿ ಸನ್ಯಾಸಿ ದೀಕ್ಷೆಯ ನಿರ್ಧಾರಕ್ಕೆ ದೇಶಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿತ್ತು.

ಅಲ್ಲದೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕಾನೂನು ತೊಡಕುಗಳು ಮುಗಿಯುವವರೆಗೂ ಅನಾಮಿಕ ಅವರಿಗೆ ಜೈನ ದೀಕ್ಷೆ ಬೋಧಿಸದಿರುವ ನಿರ್ಧಾರ ಕೈಗೊಳ್ಳಲಾಯಿತು.

Follow Us:
Download App:
  • android
  • ios