Asianet Suvarna News Asianet Suvarna News

ಮೋದಿ ಮೀಸಲು ಮೊದಲು ಪ್ರಕಟ ಮಾಡಿದ್ದು ಏಷ್ಯಾನೆಟ್ ನ್ಯೂಸ್

ಮೇಲ್ವರ್ಗದ ಬಡವರಿಗೆ ಉದ್ಯೋಗ ಅವಕಾಶದಲ್ಲಿ ಶೇ. 10 ರಷ್ಟು ಮೀಸಲು ನೀಡಲು ಕೇಂದ್ರದ ಮೋದಿ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಆದರೆ ಮೋದಿ ಸರಕಾರ ಈ ದಿಟ್ಟ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮೈ ನೇಶನ್ 2018ರ ಸಪ್ಟೆಂಬರ್‌ನಲ್ಲಿಯೇ ವರದಿ ಮಾಡಿತ್ತು.

Modi mulls quota for upper caste poor the news broken in September first by asianetnews com
Author
Bengaluru, First Published Jan 7, 2019, 10:04 PM IST

ನವದೆಹಲಿ[ಜ.07] ಮೋದಿ ಸರಕಾರ ಮೇಲ್ವರ್ಗದ ಬಡವರಿಗೆ ಮೀಸಲು ನೀಡುವ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮೈನೇಶನ್ ಮೂರು ತಿಂಗಳ ಹಿಂದೆಯೇ ವರದಿ ಮಾಡಿತ್ತು. ಅದೇ ಮಾಹಿತಿ ಇಂದು ನಿಜವಾಗಿದೆ.

ಒಂದು ಕಡೆ ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9 ರಂದು ಭಾರತ್ ಬಂದ್‌ಗೆ ಕರೆ ನೀಡಿವೆ. ಈ ನಡುವೆ ಸಂಸತ್ತಿನಲ್ಲಿ ಮೇಲ್ವರ್ಗದ ಬಡವರಿಗೆ ಮೀಸಲು ನೀಡುವ ಐತಿಹಾಸಿಕ ಮಸೂದೆ ಮಂಡನೆಯಾಗಲಿದೆ. ದೇಶದ ಕೆಲವು ಕಡೆ ಈಗಾಗಲೇ ದಲಿತ ಸಂಘಟನೆಗಳು ಮೋದಿ ಸರ್ಕಾರದ ಕ್ರಮ ಖಂಡಿಸಿವೆ. ಲಾಭ ನಷ್ಟದ ವಿಚಾರಗಳು ಸಂಸತ್‌ನಲ್ಲಿ ಚರ್ಚೆಯಾಗಲಿವೆ

ಮೇಲ್ಜಾತಿ ಬಡವರಿಗೂ ಉದ್ಯೋಗದಲ್ಲಿ ಮೀಸಲಾತಿ, ಮೋದಿ ಘೋಷಣೆ..!

ಸೋಮವಾರ ನವದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ನಾಳೆ ಅಂದರೆ ಮಂಗಳವಾರ ಸಂಸತ್ ನಲ್ಲಿ ಈ ಐತಿಹಾಸಿಕ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಲಿದೆ. ಈ ಮಸೂದೆ ಜಾರಿಗೆ ಬಂದರೆ ಉನ್ನತ ವರ್ಗಗಳಾದ ಜಾಟ್, ಗುಜ್ಜಾರ್, ರಜಪೂತ್, ಬನಿಯಾ, ಬ್ರಾಹ್ಮಣ ಸಮುದಾಯಕ್ಕೆ ಅನುಕೂಲವಾಗಲಿದೆ.

ಬಂದ್‌ನಿಂದ ರಾಜ್ಯಕ್ಕಾದ ನಷ್ಟವೆಷ್ಟು ಗೊತ್ತಾ?

ಈ ಮೀಸಲಾತಿಗೆ ಇರುವ ಕೆಲ ಷರತ್ತುಗಳು 
* ಶೇ.10ರಷ್ಟು ಮೀಸಲಾತಿ ಪಡೆಯಬೇಕಿದ್ದರೆ ಅವರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕೆಳಗಿರಬೇಕು. 
* 5 ಎಕರೆ ಭೂಮಿ, 1000 ಚದುರ ಅಡಿಗಿಂತ ಕಡಿಮೆ ವಿಸ್ತೀರ್ಣ  ಮನೆ ಹೊಂದಿರಬೇಕು.

Follow Us:
Download App:
  • android
  • ios