Asianet Suvarna News Asianet Suvarna News

ಶೇ.10 ಮೀಸಲು: ಸೋಶಿಯಲ್ ಮೀಡಿಯಾ ಭರ್ಜರಿ ರಿಯಾಕ್ಷನ್

ಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇಲ್ಜಾತಿಯ ಬಡವರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದಕ್ಕೆ ಸೋಶಿಯಲ್ ಮೀಡಿಯಾ ತನ್ನದೆ ಪ್ರತಿಕ್ರಿಯೆ ನೀಡಿದೆ.

Modi govt announces 10 per cent quota for general category Social Media Reaction
Author
Bengaluru, First Published Jan 7, 2019, 5:09 PM IST

ನವದೆಹಲಿ, (ಜ.7): 2019ರ ಲೋಕಸಭಾ ಚುನಾವಣೆಗೂ ಮುನ್ನವೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಬಡವರಿಗೆ ಬಂಪರ್ ಉಡುಗೊರೆಯೊಂದನ್ನು ನೀಡಿದೆ. ಮೇಲ್ವರ್ಗದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೂ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಜನವರಿ 8 - 9 ರಂದು ಭಾರತ್ ಬಂದ್ : ಏನಿರುತ್ತೆ..? ಏನಿರಲ್ಲ..?

ಫೇಸ್‌ಬುಕ್, ಟ್ವಿಟರ್‌ನಲ್ಲಿ ತರೆವಾರಿ ರಿಯಾಕ್ಷನ್‌ಗಳು ಬಂದಿವೆ. ಜಾತಿ ಆಧಾರಿತ ಮೀಸಲಾತಿಗಿಂತ ಇದೆ ಮೇಲು.. ನರೇಂದ್ರ ಮೋದಿ ಅವರಿಂದ ಇಂಥದ್ದೊಂದು ದಿಟ್ಟ ಕ್ರಮ ನಿರೀಕ್ಷೆ ಮಾಡಿದ್ದೆವು. ಮೋದಿ ಸರ್ಕಾರದಿಂದ ಐತಿಹಾಸಿಕ ನಡೆ. ಮೋದಿ ಸರ್ಕಾರದ ಈ ನಡೆಯಿಂದ 2019 ರ ಲೋಕಸಭಾ ಚುನಾವಣೆಯ ದಿಕ್ಕು ಬದಲಾಗಬಹುದು ಎಂಬ ಪ್ರತಿಕ್ರಿಯೆಗಳು ಬಂದಿವೆ.

ಮೇಲ್ಜಾತಿ ಬಡವರಿಗೂ ಉದ್ಯೋಗದಲ್ಲಿ ಮೀಸಲಾತಿ, ಮೋದಿ ಘೋಷಣೆ..!

ಮುಸ್ಲಿಮರು ಸಹ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು 8 ಲಕ್ಷ ರೂ. ಆದಾಯಕ್ಕಿಂತ ಕೆಳಗಿರುವವರು ಈ ವ್ಯಾಪ್ತಿಗೆ ಬರುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಒಂದಿಷ್ಟು ಪ್ರತಿಕ್ರಿಯೆ ನೋಡಿಕೊಂಡು ಬನ್ನಿ...

 

 

Follow Us:
Download App:
  • android
  • ios