news
By Suvarna Web Desk | 12:53 PM October 12, 2017
(Video)ನಿಮ್ಮಲ್ಲಿ ಚೈನಾ ಮೇಡ್ ಮೊಬೈಲ್ ಇದ್ರೆ ಎಚ್ಚರ:  ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗುತ್ತೆ ಮೊಬೈಲ್

Highlights

ಇಲ್ಲಿನ ಟೌನ್‌'ಹಾಲ್‌ ಸರ್ಕಲ್‌ನಲ್ಲಿರುವ ಮೊಬೈಲ್‌ ಅಂಗಡಿಯಲ್ಲಿ  ರೆಡ್ಮಿ ನೋಟ್‌ 4 ಮೊಬೈಲ್‌ವೊಂದು ಸ್ಫೋಟಗೊಂಡ ಘಟನೆ ಗುರುವಾರ ನಡೆದಿದೆ.

ತುಮಕೂರು(ಅ.12): ಇಲ್ಲಿನ ಟೌನ್‌'ಹಾಲ್‌ ಸರ್ಕಲ್‌ನಲ್ಲಿರುವ ಮೊಬೈಲ್‌ ಅಂಗಡಿಯಲ್ಲಿ  ರೆಡ್ಮಿ ನೋಟ್‌ 4 ಮೊಬೈಲ್‌ವೊಂದು ಸ್ಫೋಟಗೊಂಡ ಘಟನೆ ಗುರುವಾರ ನಡೆದಿದೆ.

ಗ್ರಾಹಕರೊಬ್ಬರು ಸ್ಕ್ರೀನ್‌ಗಾರ್ಡ್‌ ಹಾಕಿಸಿಕೊಳ್ಳಲೆಂದು ಹೊಸ ರೆಡ್ಮಿಮೊಬೈಲನ್ನು ಅಂಗಡಿಯಾತನ ಬಳಿ ನೀಡಿದ್ದಾರೆ. ಅಂಗಡಿಯಾತ ಮೊಬೈಲ್‌ ಬಿಚ್ಚಿ ಇಡುತ್ತಿದ್ದಂತೆ ಸ್ಫೋಟಗೊಂಡಿದ್ದು ಭಾರಿ ಹೊಗೆ ಕಾಣಿಸಿಕೊಂಡಿದೆ. ಅದೃಷ್ಟವಷಾತ್‌ ಯಾರೊಬ್ಬರಿಗೂ ಗಾಯವಾಗಿಲ್ಲ.

ದೃಶ್ಯಗಳು ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.  ಚೀನಾ ಕಂಪೆನಿಯ  ರೆಡ್‌ಮಿ ನೋಟ್‌ 4 ಮೊಬೈಲನ್ನು ಇತ್ತೀಚೆಗೆ ಭಾರಿ ಸಂಖ್ಯೆಯಲ್ಲಿ ಜನರು ಬಳಕೆ ಮಾಡುತ್ತಿದ್ದು, ಘಟನೆಯಿಂದ ಆತಂಕಿತರಾಗಿದ್ದಾರೆ. ಬೆಂಗಳೂರಿನಲ್ಲೂ ಜುಲೈ ತಿಂಗಳಿನಲ್ಲಿ ರೆಡ್‌ ಮಿ ನೋಟ್‌ 4 ಮೊಬೈಲೊಂದು ಸಿಮ್‌ ಹಾಕುತ್ತಿದ್ದಾಗಲೇ ಬ್ಲಾಸ್ಟ್‌ ಆಗಿತ್ತು. 

 

Show Full Article


Recommended


bottom right ad