news
By Suvarna Web Desk | 03:12 PM June 19, 2017
ಇದು ಕಾಶ್ಮೀರವಲ್ಲ, ಯೋಗಿಯ ಉತ್ತರ ಪ್ರದೇಶ!

Highlights

ಜನರ ಗುಂಪೊಂದು ಪೊಲೀಸರನ್ನೇ ಬರ್ಬರವಾಗಿ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದೆ.

ಘಟನೆಯ ವಿವರ:

ಕಾನ್ಪುರದ ಆಸ್ಪತ್ರೆಯಲ್ಲಿ ಸಿಬ್ಬಂದಿಯೊಬ್ಬ ಚಿಕಿತ್ಸೆಗೆ ಬಂದಿದ್ದ ವಿದ್ಯಾರ್ಥಿನಿಗೆ ಅರೆಗುಳಿ ಇಂಜೆಕ್ಷನ್ ನೀಡಿ ಅತ್ಯಾಚಾರವೆಸಗಿದ್ದಾನೆ. ಇದರಿಂದ ಕೋಪೋದ್ರಿಕತರಾದ ಜನರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ  ಪೊಲೀಸರು ಜನರಿಗೆ ಭರವಸೆ ನೀಡಿದರೂ ಜನರು ಪ್ರತಿಭಟನೆ ಮುಂದುವರೆಸಿದ್ದಾರೆ.  ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳದು ಪೊಲೀಸರು ಲಾಠಿಪ್ರಯೋಗಕ್ಕೆ ಮುಂದಾಗಿದ್ದಾರೆ, ಅದಕ್ಕೆ ಪ್ರತಿಯಾಗಿ ಪ್ರತಿಭಟನಾಕಾರರು ಕಲ್ಲೆಸೆಯಲು ಆರಂಭಿಸಿದ್ದಾರೆ. ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರಿಗೆ ಗುಂಪು ಥಳಿಸಿದ್ದಾರೆ, ಓರ್ವ ಪೊಲೀಸ್ ಅಧಿಕಾರಿ ಗಂಬೀರವಾಗಿ ಗಾಯಗೊಂಡಿದ್ದಾರೆನ್ನಲಾಗಿದೆ. 

ಫೋಟೋ ಕೃಪೆ: ಉಮಂಗ್ ಮಿಶ್ರಾ ಟ್ವೀಟರ್ ಖಾತೆ/ ಜನತಾ ಕಾ ರಿಪೋ

Show Full Article


Recommended


bottom right ad