Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಮತ್ತೊಂದು #MeTooಕಾಂಡ; ರಾಹುಲ್ ಗಾಂಧಿ ಆಪ್ತನ ವಿರುದ್ಧ ದೂರು!

ಪಕ್ಷದ ಐಟಿ ಸೆಲ್‌ ಸದಸ್ಯನೊಬ್ಬನ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾಗಿ, ಮುಖಭಂಗಕ್ಕೊಳಗಾಗಿರುವ ಕಾಂಗ್ರೆಸ್‌ಗೆ ಇದೀಗ ಮತ್ತೊಂದು ಮುಜುಗರ ತರುವಂತಹ ಪ್ರಕರಣ ದಾಖಲಾಗಿದೆ. ರಾಹುಲ್ ಗಾಂಧಿ ಆಪ್ತ, ಕರ್ನಾಟಕ ಮೂಲದ ವ್ಯಕ್ತಿ ವಿರುದ್ಧ ಮಹಿಳೆಯೊಬ್ಬಳು ಅಂತಹದ್ದೇ ಆರೋಪ ಮಾಡಿದ್ದಾಳೆ.

 

 

MeToo Against Rahul Gandhi Aide Nikhil Alva FIR Lodged By Neighbor
Author
Bengaluru, First Published Dec 17, 2018, 8:42 PM IST

ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕಾಂಗ್ರೆಸ್ ಐಟಿ ಸೆಲ್‌ನೊಳಗಿನ ‘ಲೈಂಗಿಕ ಕಿರುಕುಳ’ ಪ್ರಕರಣದ ಬಳಿಕ ಇದೀಗ ಮತ್ತೊಬ್ಬ ಕೈ ನಾಯಕನ ವಿರುದ್ಧ ಅಂತಹದ್ದೇ ಆರೋಪ ಕೇಳಿಬಂದಿದೆ.

ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ಪುತ್ರ, ರಾಹುಲ್ ಗಾಂಧಿ ಆಪ್ತ ನಿಖಿಲ್ ಆಳ್ವ ವಿರುದ್ಧ ಅದೇ ರೆಸಿಡೆನ್ಶಿಯಲ್ ಕಾಲನಿಯ ಮಹಿಳೆಯೊಬ್ಬಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ.

ಕಳೆದ ಡಿ.04ರಂದು ದಾಖಲಾಗಿರುವ FIR ಪ್ರತಿ MyNation ಗೆ ಸಿಕ್ಕಿದ್ದು, ಗುರುಗ್ರಾಮದಲ್ಲಿ ವಾಸವಾಗಿರುವ ನಿಖಿಲ್ ತನಗೆ ಅಶ್ಲೀಲ ಮೇಲ್ ಗಳನ್ನು ಕಳುಹಿಸಿದ್ದಾನೆ ಎಂದು 47 ವರ್ಷ ಪ್ರಾಯದ ಆ ಮಹಿಳೆ ದೂರಿದ್ದಾಳೆ.

MeToo Against Rahul Gandhi Aide Nikhil Alva FIR Lodged By Neighbor

ಆದರೆ, ಆರೋಪಗಳನ್ನು ನಿಖಿಲ್ ಆಳ್ವ ಅಲ್ಲಗಳೆದಿದ್ದಾರೆ. ರೆಸಿಡೆನ್ಶಿಯಲ್ ವೆಲ್ಫೇರ್ ಅಸೋಸಿಯೇಶನ್ (RWA)ನಲ್ಲಿ ಹಣಕಾಸು ಅವ್ಯವಾಹಾರ ನಡೆದಿರುವ ಬಗ್ಗೆ  ದೂರನ್ನು ಸಲ್ಲಿಸಿದ 2 ದಿನಗಳ ಬಳಿಕ ಆಕೆ ಇಂತಹ ತಪ್ಪು ದೂರನ್ನು ದಾಖಲಿಸಿದ್ದಾಳೆ, ಎಂದು ಆಳ್ವಾ ಹೇಳಿದ್ದಾರೆ.

MeToo Against Rahul Gandhi Aide Nikhil Alva FIR Lodged By Neighbor

ಆಳ್ವ ವಿರುದ್ಧ ಭಾರತೀಯ ದಂಡ ಸಂಹಿತೆಯನ್ವಯ ಸೆ. 354, ಸೆ. 509 ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

ಕರ್ನಾಟಕದವರಾದ ಮಾರ್ಗರೆಟ್ ಆಳ್ವಾ ಉತ್ತರ ಕನ್ನಡ (ಕೆನರಾ) ಕ್ಷೇತ್ರದ ಸಂಸದರಾಗಿ, ರಾಜಸ್ಥಾನ, ಉತ್ತರಾಖಂಡದ ರಾಜ್ಯಪಾಲೆಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ: ದೆಹಲಿ ಪೊಲೀಸ್ ಚಾರ್ಜ್‌ಶೀಟ್‌ನಲ್ಲಿ ರಮ್ಯಾ ಹೆಸರು!

ಕಳೆದ ಜು.03ರಂದು ಸೋಶಿಯಲ್ ಮೀಡಿಯಾ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು, ಕಾಂಗ್ರೆಸ್ ನಾಯಕನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದರು.  

ಕೆಲಸದ ವೇಳೆ ಚಿರಾಗ್ ಪಟ್ನಾಯಕ್ ಎಂಬಾತ ಹಿಂದಿನಿಂದ ಬಂದು ತಮ್ಮನ್ನು ಮುಟ್ಟುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದನ್ನೇ ಆತ ತನ್ನ ಕಾಯಕ ಮಾಡಿಕೊಂಡಿದ್ದ ಎಂದು ಸಂತ್ರಸ್ತ ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಫಾರೂಕ್ ಅಳಿಯ, ಸೇನಾಧಿಕಾರಿ, ಕಿರಿಯ ಎಂಪಿ ಪೈಲಟ್ ಜೀವನಗಾಥೆಯಿದು!

ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಪತ್ರ ಬರೆದಿದ್ದ ಆ ಮಹಿಳೆ, ಪಕ್ಷದ ಸೋಶಿಯಲ್ ಮಿಡಿಯಾ ಸೆಲ್‌ನಲ್ಲಿ ನಡೆಯುತ್ತಿರುವ ಇಂತಹ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದರು. ಅಲ್ಲದೇ ಈ ಕುರಿತು ಕಾಂಗ್ರೆಸ್ ಸೋಶಿಯಲ್ ಮಿಡಿಯಾ ಸೆಲ್‌ನ ಮುಖ್ಯಸ್ಥೆ ದಿವ್ಯ ಸ್ಪಂದನ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದರು. 

 

Follow Us:
Download App:
  • android
  • ios