Asianet Suvarna News Asianet Suvarna News

ಪಿರಿಯಡ್ಸ್ ನೋವಿಗೆ ಸ್ಪಂದಿಸಿದ ಸ್ನೇಹಿತ, ರೈಲ್ವೆ ಇಲಾಖೆಗೆ ಧನ್ಯವಾದ

ಮಹಿಳೆಯರಿಗೆ ತಿಂಗಳ ಪಿರಿಯಡ್ಸ್ ಎಂಬುದು ನಿಸರ್ಗದತ್ತವಾದ ಕ್ರಿಯೆ. ಮುಟ್ಟಿನ ನೋವಿನ ತೊಂದರೆ ಅನುಭವಿಸುತ್ತಿದ್ದ ಮಹಿಳೆಯ ನೆರವಿಗೆ ತಕ್ಷಣ ಧಾವಿಸಿದ ಭಾರತೀಯ ರೈಲ್ವೆಗೆ ಒಂದು ಧನ್ಯವಾದ ಹೇಳುವುದು ಪ್ರತಿಯೊಬ್ಬನ ಕರ್ತವ್ಯವಾಗುತ್ತದೆ. ಏನಿದು ಸಿನಿಮೀಯ ಮಾದರಿ ಘಟನೆ? 

Man Tweets Indian Railways Seeking Help For Female Passenger On Period Receives Help
Author
Bengaluru, First Published Jan 16, 2019, 9:12 PM IST

ಬೆಂಗಳೂರು[ಜ.16] ಬೆಂಗಳೂರಿನಿಂದ ಬಳ್ಳಾರಿಗೆ ಹೊಸಪೇಟೆ ರೈಲು ಪ್ರಯಾಣ ಆರಂಭಿಸಿತ್ತು. ಬೆಂಗಳೂರನ್ನು ರಾತ್ರಿ 10.15ಕ್ಕೆ ಬಿಟ್ಟ ರೈಲು ಬಳ್ಳಾರಿ ಕಡೆ ಹಳಿಯಲ್ಲಿ ಸಾಗುತ್ತಿತ್ತು.

ಯಶವಂತಪುರ ಸ್ಟೇಶನ್ ದಾಟುತ್ತಿದ್ದಂತೆ ಕಲಬುರಗಿ ಮೂಲದ ವಿಶಾಲ್ ಖಾನಾಪುರೆ ಎಂಬುವರು ಟ್ವೀಟ್‌ ಒಂದನ್ನು ಮಾಡುತ್ತಾರೆ. ಭಾರತೀಯ ರೈಲ್ವೆ ಮತ್ತು ರೈಲ್ವೆ ಸಚಿವ ಪಿಯೂಶ್ ಗೋಯಲ್ ಹ್ಯಾಂಡಲ್‌ಗೆ ಟ್ವೀಟ್ ಮಾಡುವ ಖಾನಾಪುರೆ, ನನ್ನ ಸ್ನೇಹಿತರೊಬ್ಬರಿಗೆ ಸಹಾಯ ಬೇಕಿದ್ದು ಪ್ಯಾಡ್ ಮತ್ತು ನೋವು ನಿವಾರಕ ಮಾತ್ರೆ ಕಳಿಸಿಕೊಡಿ ಎಂದು ಕೇಳುತ್ತಾರೆ. ಅಲ್ಲದೆ ಮಹಿಳೆಗೆ ಸಂಬಂಧಿಸಿ ಟಿಕೆಟ್ ನಂಬರ್, ಪಿಎಲ್‌ಆರ್ ನಂಬರ್ ಎಲ್ಲವನ್ನು ಟ್ವೀಟ್‌ನಲ್ಲಿ ಉಲ್ಲೇಖಿಸುತ್ತಾರೆ.

ಪಿರಿಯಡ್ಸ್ ವೇಳೆ ಕಾಡೋ ಸ್ತನ ನೋವಿಗೆ ಚಿಂತೆ ಬೇಡ...

ಇದಾದ ಒಂದು ಸ್ವಲ್ಪ ಸಮಯದಲ್ಲಿ ಅಂದರೆ 11.06ಕ್ಕೆ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಯನ್ನು ಸಂಪರ್ಕಿಸುವ ಅಧಿಕಾರಿಗಳು ಆಕೆಗೆ ಏನೇನು ಅಗತ್ಯವಿದೆ ಎಂದು ತಿಳಿದುಕೊಳ್ಳುತ್ತಾರೆ.

ಹೊಸಪೇಟೆ ರೈಲು ಅರಸಿಕೇರೆ ತಲುಪುವ ವೇಳೆಗೆ ಅಲ್ಲಿಗೆ ಆಗಮಿಸಿದ್ದ ಮೈಸೂರು ಡಿವಿಸನ್ ಅಧಿಕಾರಿಗಳು ಆಕೆಗೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ನೀಡುತ್ತಾರೆ.

ಈ ರೀತಿಯ ಸಮಸ್ಯೆ ಎದುರಾದಾಗ ಟ್ವೀಟ್ ಮೂಲಕ ಜತೆಗೆ 138ಗೆ ಕರೆ ಮಾಡುವ ಮೂಲಕ ತಿಳಿಸಬಹುದು ಎಂಬುದನ್ನು ಹೇಳಿ ತೆರಳುತ್ತಾರೆ. ಕೋಲ್ಕತ್ತಾ ಮೂಲದ ಸಂಸ್ಥೆಯೊಂದು ಆ್ಯಪ್ ಸಹ ಅಭಿವೃದ್ಧಿ ಮಾಡಿದ್ದು ವೆಂಡಿಂಗ್ ಮಶಿನ್ ಎಲ್ಲಿದೆ ಎಂಬ ಗುರುತನ್ನು ನೀಡುತ್ತಿದೆ. ಬಂಧನ್ ಸ್ಯಾನಿಟರಿ ಪ್ಯಾಡ್ ಆಪ್ ಎಂಬ ಹೆಸರಿನ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂಬ ಮಾಹಿತಿಯನ್ನು ನೀಡಲಾಗುತ್ತದೆ.

ಕೇಳ್ರಪ್ಪೋ ಇನ್ಮೇಲೆ ರೈಲು ಹೊರಡುವ 20 ನಿಮಿಷ ಮೊದ್ಲು ನಿಲ್ದಾಣದಲ್ಲಿ ಇರ್ಬೇಕು!

ಒಟ್ಟಿನಲ್ಲಿ ಭಾರತೀಯ ರೈಲ್ವೆ ಸ್ಪಂದಿಸಿದ ರೀತಿಗೆ ಅಭಿನಂದನೆ ಮತ್ತು ಧನ್ಯವಾದ ಹೇಳಲೇಬೇಕು. ತಂತ್ರಜ್ಞಾನದ ನೆರವನ್ನು ಪಡೆದುಕೊಂಡು ಇಂಥ ಸಂಗತಿಗಳು ಎದುರಾದಾಗ ಪರಿಹಾರ ಸಹ ಪಡೆದುಕೊಳ್ಳಬಹುದು ಎಂಬುದನ್ನು ಈ ಪ್ರಕರಣ ಹೇಳುತ್ತಿದೆ.

Follow Us:
Download App:
  • android
  • ios