Asianet Suvarna News Asianet Suvarna News

ಮಂಗ್ಳೂರಲ್ಲಿ ಸಿದ್ಧವಾಯ್ತು ಚಾಣಕ್ಯ ಪಂಚಸೂತ್ರ.. ಕ್ಲಿಕ್ ಆದರೆ ವಿರೋಧಿಗಳು ನೀರ್ನಾಮ!

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಂಗಳೂರಿಗೆ ಬಂದು ಬಿಜೆಪಿ ನಾಯಕರ ಸಭೆ ಮಾಡಿ ತೆರಳಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಹೇಗೆ ಹೆಚ್ಚಿನ ಸ್ಥಾನ ಗೆಲ್ಲಬೇಕು ಎಂಬ ಸೂತ್ರವನ್ನು ಹಾಕಿಟ್ಟು ಹೋಗಿದ್ದಾರೆ. ಹಾಗಾದರೆ ಅಮಿತ್ ಶಾ ಕೊಟ್ಟ ಸೂಚನೆಯೇನು? ಇಲ್ಲಿದೆ ಮಾಹಿತಿ

Lok Sabha Election 2019 BJP National President Amit Shah Strategy 5 points
Author
Bengaluru, First Published Nov 16, 2018, 4:46 PM IST

ಮಂಗಳೂರು[ನ.16]  ಅಮಿತ್ ಶಾ ಮಂಗಳೂರಿನಲ್ಲಿ ಸಭೆ ನಡೆಸಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಯಾವ ಅಸ್ತ್ರಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಿ ತೆರಳಿದ್ದಾರೆ. ಅಮಿತ್ ಶಾ ಪ್ರಕಾರ ಬಿಜೆಪಿ ಪ್ರಚಂಡ ಜಯಭೇರಿ ಬಾರಿಸುವುದರೊಂದಿಗೆ ಕೇರಳದಲ್ಲೂ ಹಕ್ಕು ಸಾಧಿಸಬೇಕು ಎಂಬುದು ಶಾ ಲೆಕ್ಕಾಚಾರ

ಅಮಿತ್ ಶಾ ಹೇಳಿರುವ ಸೂತ್ರಗಳು ಏನು?

1. ರಾಮಮಂದಿರ: ರಾಮಮಂದಿರ ನಿರ್ಮಾಣ ವಿಚಾರವನ್ನು ಜೀವಂತವಾಗಿ ಕಾಪಾಡಿಕೊಳ್ಳುವುದು. ಒಂದು ವೇಳೆ ನಿರ್ಮಾಣಕ್ಕೆ ಸಂಬಂಧಿಸಿ ಸುಗ್ರಿವಾಜ್ಞೆ ಜಾರಿಯಾದರೆ ಜನರಿಗೆ ಭಾವನಾತ್ಮಕವಾಗಿ ವಿಚಾರ ಹಂಚುವುದು.

2. ಅಯ್ಯಪ್ಪ ಸ್ವಾಮಿ ಹೋರಾಟ: ಸುಪ್ರೀಂ ಕೋರ್ಟ್ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರು ಪ್ರವೇಶ ಮಾಡಬಹುದು ಎಂದೂ ಹೇಳಿದ್ದರೂ ಪ್ರವೇಶದ ವಿರುದ್ಧವಾಗಿರುವ ಜನರು ಮತ್ತು ಮಹಿಳೆಯರನ್ನು ಸೆಳೆಯುವುದು.. ಜತೆಗೆ ಕರ್ನಾಟಕದಲ್ಲಿರುವ ಅಯ್ಯಪ್ಪ ಭಕ್ತರ ಮೇಲೆಯೂ ಪ್ರಭಾವ ಬೀರುವುದು.

3. ಯುವ ನಾಯಕರಿಗೆ ಮಣೆ: ವಿಶೇಷವಾಗಿ ಕರ್ನಾಟಕದ ಬಿಜೆಪಿಯಲ್ಲಿ ಬದಲಾವಣೆಯಾದರೂ ಅಚ್ಚರಿಇಲ್ಲ. ಒಬ್ಬರಿಗೆ ಒಂದೆ ಹುದ್ದೆ, ನಿವೃತ್ತಿ ವಯಸ್ಸು ಈ ಬಗೆಯ ವಿಚಾರ ಇಟ್ಟುಕೊಂಡು ಕರ್ನಾಟಕ ಬಿಜೆಪಿಯಲ್ಲಿ ಯುವಕರಿಗೆ ಆದ್ಯತೆ ಸಿಗಬಹುದು.

ಬಿಜೆಪಿಗೆ ಬಿಎಸ್  ವೈ ನಾಯಕತ್ವ ಬೇಕಿಲ್ಲ

4. ಸಂಘ ನಿಷ್ಠರಿಗೆ ಆದ್ಯತೆ: ಜಾತಿ,, ಕೋಮು  ಆಧಾರದ ರಾಜಕಾರಣ ಬದಿಗಿಟ್ಟು ಸಂಘ ನಿಷ್ಠರಾಗಿರುವವರಿಗೆ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಿ ರಾಜ್ಯ ಸುತ್ತಾಡುವಂತೆ ಮಾಡಬಹುದು.

5.ಗೋ ಸಾಗಾಟ ವಿಚಾರ: ಕರವಾವಳಿ ಭಾಗವನ್ನು ಗಮನದಲ್ಲಿ ಇಟ್ಟುಕೊಂಡು ಅಕ್ರಮ ಗೋ ಸಾಗಾಟಕ್ಕೆ ಬ್ರೇಕ್ ಹಾಕುವುದು ಈ ವಿಚಾರವನ್ನು ಜನರಿಗೆ ತಿಳಿಸುವುದು.

Follow Us:
Download App:
  • android
  • ios