Asianet Suvarna News Asianet Suvarna News

ಬೆಂಗಳೂರಿನಿಂದ - ಮಣಿಪಾಲಕ್ಕೆ ಫ್ಲೈ ಬಸ್‌ ಸೇವೆ

ಬೆಂಗಳೂರಿನಿಂದ ಮಣಿಪಾಲಕ್ಕೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಶೀಘ್ರದಲ್ಲೇ ಕೆಎಸ್ ಆರ್ ಟಿಸಿ ಫ್ಲೈ ಬಸ್ ಸೇವೆಯನ್ನು ಆರಂಭ ಮಾಡುತ್ತಿದೆ. 

KSRTC To Start Another Flybus Service Between Bangalore To Manipal
Author
Bengaluru, First Published Dec 23, 2018, 11:02 AM IST

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌)- ಮಣಿಪಾಲ ಮಾರ್ಗದಲ್ಲಿ ಜ.3ರಿಂದ ಒಂದು ಫ್ಲೈ ಬಸ್‌ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ. 

ಈ ಬಸ್‌ ಕೆಐಎಎಲ್‌ನಿಂದ ರಾತ್ರಿ 10ಕ್ಕೆ ಹೊರಟು ಬೆಳಗ್ಗೆ 6.45ಕ್ಕೆ ಮಣಿಪಾಲ ತಲುಪಲಿದೆ. ಮಣಿಪಾಲದಿಂದ ರಾತ್ರಿ 8.15ಕ್ಕೆ ಹೊರಟು ಬೆಳಗ್ಗೆ 6ಕ್ಕೆ ಕೆಐಎಎಲ್‌ ತಲುಪಲಿದೆ. ಈ ಬಸ್‌ನಲ್ಲಿ ವಯಸ್ಕರ ಪ್ರಯಾಣ ದರ .1250 ನಿಗದಿಪಡಿಸಲಾಗಿದೆ. 

ಅಂತೆಯೇ ಕೆಐಎಎಲ್‌-ಮಡಿಕೇರಿ ಮಾರ್ಗದಲ್ಲಿ ಸಂಚರಿಸುವ ಫ್ಲೈ ಬಸ್‌ಗಳನ್ನು ಜ.3ರಿಂದ ಮೈಸೂರಿನ ಇಸ್ಫೋಸಿಸ್‌ ಕ್ಯಾಂಪಸ್‌ ಬಳಿ ಪಿಕ್‌ಅಪ್‌ಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.

Follow Us:
Download App:
  • android
  • ios