Asianet Suvarna News Asianet Suvarna News

ಮಮತಾ ಹೋರಾಟಕ್ಕೆ ಇವರೆಲ್ಲ ಬೆಂಬಲ ಕೊಡಲು ಕಾರಣವೇನು?

ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರಕಾರದ ನಡುವೆ ತಿಕ್ಕಾಟ ಆರಂಭಕ್ಕೆ ಸಿಬಿಐ ಪ್ರಕರಣ ಬಹುದೊಡ್ಡ ವೇದಿಕೆಯಾಗಿದೆ. ಈ ನಡುವೆ ದೇಶದ ಅನೇಕ ಪಕ್ಷಗಳ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಮಹಾಘಟಬಂಧನ್ ಇಲ್ಲಿಂದಲೇ ಆರಂಭ ಎಂಬ ಮಾತು ಕೇಳಿದೆ.

Kolkata Police-CBI clash The Start of Mahagathbandhan
Author
Bengaluru, First Published Feb 4, 2019, 4:39 PM IST

ಕೋಲ್ಕತಾ(ಫೆ.04) ಪಶ್ಚಿಮ ಬಂಗಾಳ ಸಿಎಂ ಮಮತಾ ಧರಣಿ ಕೂತೇ ಇದ್ದಾರೆ. ಕಾಂಗ್ರೆಸ್ ಆದಿಯಾಗಿ ದೇಶದ ಅನೇಕ ಪಕ್ಷಗಳು ಬೆಂಬಲ ನೀಡಿವೆ. ಮುಂದಿನ ಲೋಕಸಭಾ ಚುನಾವಣೆ ಎದುರಿನಲ್ಲಿ ಇರುವಾಗ  ಈ ವಿಚಾರ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಹಾಗಾದರೆ ಯಾವ ಯಾವ ಪಕ್ಷಗಳು ಬೆಂಬಲ ನೀಡಿವೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್,  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜಮ್ಮು ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ, ಲಾಲು ಪ್ರಸಾದ್ ಯಾದವ್, ಅಖಿಲೇಶ್ ಯಾದವ್, ಚಂದ್ರಬಾಬು ನಾಯ್ಡು  ಮಮತಾ ಹೋರಾಟಕ್ಕೆ  ಬೆಂಬಲ ನೀಡಿದ್ದಾರೆ.

ಸಿಬಿಐ ಅಧಿಕಾರಿಗಳನ್ನೇ ಬಂಧಿಸಿದ್ರಾ ಪೊಲೀಸರು..ಹೈಡ್ರಾಮಾ

ಇನ್ನು ಕರ್ನಾಟಕದಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ. ಪ್ರಜಾಪ್ರಭುತ್ವ ಉಳಿವಿನ ನಿಮ್ಮ ಹೋರಾಟದೊಂದಿಗೆ ಇರುತ್ತೇವೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆ ಎದುರಾಗುವ ಸಂದರ್ಭ ಇಂಥದ್ದೊಂದು ಪ್ರಕರಣ ಎದುರಾಗಿದ್ದು ಯಾವ ಪಕ್ಷಗಳು ರಾಜಕಾರಣದ ಲಾಭಕ್ಕೆ ಇಳಿಯದೇ ಸುಮ್ಮನೆ ಕೂರುವುದಿಲ್ಲ. ಒಟ್ಟಿನಲ್ಲಿ ಮೋದಿ ವಿರೋಧಿಗಳು ಒಂದಾಗುವ ಹೆಜ್ಜೆ ಇಡಲು ಈ ಪ್ರಕರಣ ಒಂದರ್ಥದಲ್ಲಿ ಕಾರಣವಾಗಿದೆ.

ಮಮತಾ ನಡೆಯ ಹಿಂದಿನ ಅಸಲೀ ಉದ್ದೇಶ ಬೇರೆಯೇ!

 

Follow Us:
Download App:
  • android
  • ios