Asianet Suvarna News Asianet Suvarna News

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮತ್ತೊಂದು ಕರ್ಮಕಾಂಡ ಬಯಲು: ಸರ್ಕಾರದ ಗಮನಕ್ಕೆ ತಾರದೆ ಆಪ್ತರಿಗೆ ಉನ್ನತ ಹುದ್ದೆ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಹೆಸರು ಮಾಡಿದಕ್ಕಿಂತ ಅಕ್ರಮ, ಅನಾಚಾರಗಳಿಂದಲೇ ಸುದ್ದಿಯಾಗಿದ್ದೇ ಜಾಸ್ತಿ. ಈಗ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಕಿಮ್ಸ್ ನಿರ್ದೇಶಕ ಡಾ.ದತ್ತಾತ್ರೇಯ ಭಂಟ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾನೂನು ಬಾಹಿರವಾಗಿ ತಮ್ಮ ಆಪ್ತರಿಗೆ ಹುದ್ದೆ ಕರುಣಿಸಿದ ಆರೋಪ ಕೇಳಿ ಬಂದಿದೆ.

KIMS scam has been exposed

ಹುಬ್ಬಳ್ಳಿ(ಅ.18): ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಹೆಸರು ಮಾಡಿದಕ್ಕಿಂತ ಅಕ್ರಮ, ಅನಾಚಾರಗಳಿಂದಲೇ ಸುದ್ದಿಯಾಗಿದ್ದೇ ಜಾಸ್ತಿ. ಈಗ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಕಿಮ್ಸ್ ನಿರ್ದೇಶಕ ಡಾ.ದತ್ತಾತ್ರೇಯ ಭಂಟ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾನೂನು ಬಾಹಿರವಾಗಿ ತಮ್ಮ ಆಪ್ತರಿಗೆ ಹುದ್ದೆ ಕರುಣಿಸಿದ ಆರೋಪ ಕೇಳಿ ಬಂದಿದೆ.

ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿರುವಂತೆ  ಕಿಮ್ಸ್ 'ನಲ್ಲೂ ಇದುವರೆಗೂ ಒಬ್ಬರೇ ವೈದ್ಯಕೀಯ ಅಧೀಕ್ಷಕಕರು  ಕೆಲಸ ಮಾಡುತ್ತಿದ್ದರು.ಆದ್ರೇ ಇದೀಗ ಡಾ.ಭಂಟ್ ಆರು ಜನರನ್ನು ಕಿಮ್ಸ್ ಅಧೀಕ್ಷಕ ಹುದ್ದೆ ನೇಮಕ ಮಾಡಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಸರ್ಕಾರದ ಗಮನಕ್ಕೆ ತಾರದೆ ತಮ್ಮ ಆಪ್ತರಿಗೆ ಉನ್ನತ ಹುದ್ದೆ ಕರುಣಿಸಿದ್ದಾರಂತೆ‌. ಕಿಮ್ಸ್ ಅಧೀಕ್ಷಕರಾಗಿ ನಿವೃತ್ತಿ ಹೊಂದಿದ ಡಾ.ಶಿವಪ್ಪ ಅನೂರುಶಟ್ರ್, ಅವರನ್ನು ಸರ್ಕಾರದ ಅನುಮತಿ ಇಲ್ಲದೆ ಅಕ್ರಮವಾಗಿ ಒಂದು ವರ್ಷದ ಅವಧಿಗೆ ಹಂಗಾಮಿ ಅಧೀಕ್ಷಕ ಹುದ್ದೆ ಕರುಣಿಸಿ, ಸೇವೆಯಲ್ಲಿ ಮುಂದುವರೆಸಿದ್ದಾರೆ.ಇನ್ನು ಡಾ. ರಾಮಲಿಂಗಪ್ಪ ಅವರಿಗೆ ಪ್ರಭಾರ ಅಧೀಕ್ಷಕ ರಾಗಿ ನೇಮಿಸಲಾಗಿದೆ.

ಡೆಪ್ಯುಟಿ ಅಧೀಕ್ಷಕ ಹುದ್ದೆಗಳಿಗೆ ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ, ಹಾಗೂ ಸಹಾಯಕ ಅಧೀಕ್ಷಕ ಹುದ್ದೆಗೆ  ಕಿರಿಯ ಪ್ರಾಧ್ಯಾಪಕರನ್ನು ನಿಯೋಜಿಸಲಾಗಿದೆ. ಈ ಹುದ್ದೆ ಜೊತೆ ಸರ್ಕಾರದ ಎಲ್ಲ ಸೌಲಭ್ಯ ಗಳನ್ನು  ಕರುಣಿಸಲಾಗಿದೆ.  ಈ ಬಗ್ಗೆ ಡಾ.ಭಂಟ್ ಅವರನ್ನ ಕೇಳಿದ್ರೆ, ನನಗೆ ಬೇಕಾಗಿತ್ತು ನೇಮಿಸಿಕೊಂಡಿದ್ದಾಗಿ ಉಢಾಫೆ ಉತ್ತರ ನೀಡುತ್ತಾರೆ.

Follow Us:
Download App:
  • android
  • ios