news
By Suvarna Web Desk | 08:42 PM August 08, 2017
ನಾವಿಬ್ರು ಗೆಳೆಯರಲ್ಲ ಎಂದಿದ್ರು ದರ್ಶನ್! ಕಿಚ್ಚ-ದರ್ಶನ್ ಈಗ ದೋಸ್ತಿಗಳಾ? ಒಂದಾಗೋಕೆ ಕಾರಣವಾದ ವ್ಯಕ್ತಿ ಯಾರು?

Highlights

ಆದ್ರೆ  ಕೆಲ ತಿಂಗಳುಗಳ ಹಿಂದಷ್ಟೆ ಛಾಲೆಂಜಿಂಗ್ ಸ್ಟಾರ್​ದರ್ಶನ್ ನಾನು ದರ್ಶನ್ ಗೆಳೆಯರೇ ಅಲ್ಲ. ನಮ್ಮ ಸ್ನೇಹ ಕಡಿದುಹೋಗಿ 2 ವರ್ಷ ಆಯ್ತು. ನಾವೇನಿದ್ರು ಒಂದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡೊ ಇಬ್ಬರು ಕಲಾವಿದರಷ್ಟೆ ಎಂದು ಸ್ನೇಹಕ್ಕೆ ಎಳ್ಳೂ ನೀರು ಬಿಟ್ಟಿದ್ದರು.

ಸ್ಯಾಂಡಲ್​ವುಡ್ ಟಾಕ್​  ಆಫ್ ದ ಟೌನ್ ಇದೇ  ಆಗಿದೆ. ದರ್ಶನ್ ಸುದೀಪ್ ಮತ್ತೆ ಒಂದಾದ್ರಂತೆ ನಿಜಾನಾ?

ಹೀಗಂತ ಇಡೀ ಇಂಡಸ್ಟ್ರಿ ಕಿಚ್ಚ ದಚ್ಚು ಅಭಿಮಾನಿಗಳು ಮಾತಾಡಿಕೊಳ್ತಿದ್ದಾರೆ. ಸಿಸಿಎಲ್​ನಲ್ಲಿ ಒಟ್ಟಿಗೆ ಫೀಲ್ಡಿಗಿಳಿದು  ಬ್ಯಾಟ್ ಬೀಸಿ , ಫೀಲ್ಡಲ್ಲಿ ಕುಚಿಕು ಗೆಳೆಯರಾಗಿ ಎಂಜಾಯ್ ಮಾಡಿದ ಗೆಳೆಯರು. ಬುಲೆಟ್ ಗ್ಯಾಂಗ್ ಕಟ್ಟಿ ಒಟ್ಟಿಗೆ ತಿರುಗಾಡಿದ್ದ ದೋಸ್ತಿಗಳು. ದರ್ಶನ್ ಸಂಗೊಳ್ಳಿ ರಾಯಣ್ಣ ಸಕ್ಸಸ್ ಸಂಭ್ರಮದಲ್ಲಿ ಒಟ್ಟಿಗೆ ಕೂತು ಕಿಚ್ಚ ದರ್ಶನ್ ಸಂಭ್ರಮ ಹಂಚಿಕೊಂಡಿದ್ದರು.

ಈ ಸೂಪರ್ ಸ್ಟಾರ್​ಗಳ ಫ್ರೆಂಡ್​ಶಿಪ್​ ನೋಡಿ ಎರಡು ದೃವಗಳೆ ಚಿತ್ರರಂಗದಲ್ಲಿ ಒಂದಾಗಿವೆ ಅಂತ ಅಭಿಮಾನಿಗಳು ಹಬ್ಬ ಮಾಡಿದ್ದವು . ಆದ್ರೆ  ಕೆಲ ತಿಂಗಳುಗಳ ಹಿಂದಷ್ಟೆ ಛಾಲೆಂಜಿಂಗ್ ಸ್ಟಾರ್​ದರ್ಶನ್ ನಾನು ದರ್ಶನ್ ಗೆಳೆಯರೇ ಅಲ್ಲ. ನಮ್ಮ ಸ್ನೇಹ ಕಡಿದುಹೋಗಿ 2 ವರ್ಷ ಆಯ್ತು. ನಾವೇನಿದ್ರು ಒಂದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡೊ ಇಬ್ಬರು ಕಲಾವಿದರಷ್ಟೆ ಎಂದು ಸ್ನೇಹಕ್ಕೆ ಎಳ್ಳೂ ನೀರು ಬಿಟ್ಟಿದ್ದರು.

ಆದರೆ ಕಿಚ್ಚ ಸುದೀಪ್ ಇದಕ್ಕೆ ಪ್ರತಿಕ್ರಿಯಿಸಲೇ ಇಲ್ಲ. ಆದರೆ ಈಗ ದರ್ಶನ್ ಅಭಿನಯಿಸುತ್ತಿರುವ 50 ನೇ ಸಿನಿಮಾ ಕುರುಕ್ಷೇತ್ರ ಚಿತ್ರಕ್ಕೂ ದರ್ಶನ್​ಗೂ ಶುಭಾಶಯ ಕೋರಿ, ಟ್ವೀಟ್ ಮಾಡೊ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಟ್ವಿಟ್ಟರ್​ ನಲ್ಲಿ ಕಿಚ್ಚ ಸುದೀಪ್ ಕನ್ನಡದಲ್ಲಿ ಬಿಗ್ ಬಜೆಟ್ ಸಿನಿಮಾ​ ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ ಅವರಿಗೂ ಇಡೀ ಚಿತ್ರತಂಡಕ್ಕೂ ನನ್ನ ಶುಭಾಷಯಗಳು. ಹಾಗೇ ದರ್ಶನ್ ಕೆರಿಯರ್​ನಲ್ಲಿ ಈ ಚಿತ್ರ ಮತ್ತೊಂದು ಮೈಲಿಗಲ್ಲಾಗಲಿದೆ, ದರ್ಶನ್​ ಒಬ್ಬರೇ ಈ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಧ್ಯ ಎಂದು ಬಣ್ಣಿಸಿದ್ದಾರೆ. ಕಿಚ್ಚ ಹೀಗೆ ಬರೆದು ಕೊಳ್ಳಲು ಕಾರಣವಾಗಿದ್ದು ಕುರುಕ್ಷೇತ್ರ ಸಿನಿಮಾದ ಅದ್ದೂರಿ ಮುಹೂರ್ತ.

ಕುರುಕ್ಷೇತ್ರ ಮುಹೂರ್ತ ನಡೆದ ಒಂದು ದಿನದ ನಂತರ ಕಿಚ್ಚ ಹೀಗೆ ಬರೆದು ಕೊಂಡಿರುವುದು  ಕಿಚ್ಚ ಮತ್ತು ದರ್ಶನ್ ಅಭಿಮಾನಿಗಳಿಗೆ ಖುಷಿ ನೀಡಿದೆ. ದರ್ಶನ್ ಟ್ವಿಟ್ಟರ್​ನಲ್ಲಿ ಕಿಚ್ಚನನ್ನ ಅನ್​ಫಾಲೋ ಮಾಡಿದ್ದಾರೆ. ಆದರೆ ಕಿಚ್ಚ ಇಂದಿಗೂ ದರ್ಶನ್ ಟ್ವಿಟ್ಟರ್ ಫಾಲೋಯರ್. ಸುದೀಪ್ ದರ್ಶನ್ ಮತ್ತೆ ಒಂದಾದರೆ, ಇವರಿಬ್ಬರೂ ಸೇರಿ ಸಿನಿಮಾ ಮಾಡಿದರೆ ಹೇಗಿರುತ್ತೆ ಎಂದು ಅಭಿಮಾನಿಗಳು ಹೊಸ ಕನಸು ಕಾಣೋಕೆ ಶುರುಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್​ದರ್ಶನ್ ಹಳೆಯ ಕಹಿ ಮರೆತು ಮತ್ತೆ ಸುದೀಪ್ ಜೊತೆ ಸ್ನೇಹದಿಂದ ಇರ್ತಾರಾ ಅನ್ನೋದೆ ಸದ್ಯದ ಪ್ರಶ್ನೆ.

ವರದಿ: ಸುಗುಣ, ಸುವರ್ಣ ನ್ಯೂಸ್

Show Full Article


Recommended


bottom right ad