Asianet Suvarna News Asianet Suvarna News

ಕಾರ್ಮಿಕರ ಹಿತ ಕಾಯಲು ಮುಂದಾದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿಗೆ ವರ್ಗ!

ಕಾರ್ಮಿಕರ ಹಿತ ಕಾಯಲು ಹೋಗಿದ್ದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಎತ್ತಂಗಡಿ| ರೋಹಿಣಿ ಸಿಂಧೂರಿ ಜಾಗಕ್ಕೆ ಕೆ.ಜಿ. ಶಾಂತರಾಮ್ ನಿಯೋಜಿಜಿಸಿದ ರಾಜ್ಯ ಸರ್ಕಾರ| 7000 ಕೋಟಿ ರು. ಹಣ ಡೈವರ್ಟ್ ಮಾಡಲು ಒಪ್ಪದಕ್ಕೆ ರೋಹಿಣಿ ಸಿಂಧೂರಿ ಅವರನ್ನು ಮಾಡಿಸಲಾಗಿದೆ ಎನ್ನುವ ಬಲವಾದ ಆರೋಪ

Karnataka govt transfers IAS officer Rohini Sindhuri
Author
Bengaluru, First Published Sep 23, 2019, 3:09 PM IST

ಬೆಂಗಳೂರು, (ಸೆ.23): ರಾಜ್ಯದಲ್ಲಿ ಭ್ರಷ್ಟಾಚಾರ ಹತ್ತಿಕ್ಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಂತಹ ರಾಜ್ಯದ ಪ್ರಾಮಾಣಿಕ ದಕ್ಷ ಅಧಿಕಾರಿಗಳಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ. ಆದ್ರೆ ಇಲ್ಲಿ ಕಾರ್ಮಿಕರ ಹಿತ ಕಾಯಲು ಹೋಗಿದ್ದ ಪ್ರಮಾಣಿಕ ದಕ್ಷ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಿಕ್ಕಿದ್ದು ವರ್ಗಾವಣೆ ಭಾಗ್ಯ.

ಹೌದು..ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಸ್ಥಾನದಿಂದ ರೋಹಿಣಿ ಸಿಂಧೂರಿ ಅವರನ್ನು ಸದ್ದಿಲ್ಲದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಖಡಕ್ ಡಿಸಿ, ಜನ ಮೆಚ್ಚಿದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ

ರೋಹಿಣಿ ಸಿಂಧೂರಿ ಜಾಗಕ್ಕೆ ಕೆ.ಜಿ. ಶಾಂತರಾಮ್ ಅವರನ್ನು ನಿಯೋಜಿಸಿ ಇಂದು (ಸೋಮವಾರ) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ವರ್ಗಾವಣೆ ಹಿಂದೆ ಕಾಂಟ್ರಾಕ್ಟರ್ಸ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

ಕಾರ್ಮಿಕರ ಕಲ್ಯಾಣ ನಿಧಿಯಲ್ಲಿರು ಸುಮಾರು 7000 ಕೋಟಿ ರು. ಹಣ ಡೈವರ್ಟ್ ಮಾಡಲು ಒಪ್ಪದಕ್ಕೆ ರೋಹಿಣಿ ಸಿಂಧೂರಿ ಅವರನ್ನು ಎತ್ತಂಗಡಿ ಮಾಡಿಸಲಾಗಿದೆ ಎನ್ನುವ ಬಲವಾದ ಆರೋಪಗಳು ಕೇಳಿಬಂದಿವೆ.

ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ: ರೋಹಿಣಿ ಸಿಂಧೂರಿ ಸಮ್ಮತಿ

ಭ್ರಷ್ಟಾಚಾರಕ್ಕೆ ಅಡ್ಡಿಯಾಗಿದ್ದ ರೋಹಿಣಿ ಸಿಂಧೂರಿಯನ್ನು ಎತ್ತಂಗಡಿಯೇನೋ ಮಾಡಿಲಾಗಿದೆ. ಆದ್ರೆ ಓರ್ವ ದಕ್ಷ, ಪ್ರಮಾಣಿಕ ಅಧಿಕಾರಿ ಎಂದೇ ಖ್ಯಾತಿ ಪಡೆದುಕೊಂಡಿರುವ ಇವರಿಗೆ ಯಾವುದೇ ಸ್ಥಾನ ನೀಡದೇ ದಿಢೀರ್ ವರ್ಗಾವಣೆ ಮಾಡಿರುವುದು ಎಷ್ಟು ಸರಿ..? ಅಷ್ಟೊಂದು ಅವಸರವಾದರೂ ಏನಿತ್ತು? 

ಪ್ರಾಮಾಣಿಕ ದಕ್ಷ ಅಧಿಕಾರಿಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ವಿನಃ ಈ ರೀತಿ ಪ್ರಮಾಣಿಕ ಅಧಿಕಾರಿಗೆ ಹುದ್ದೆ ನೀಡದೇ ಎತ್ತಂಗಡಿ ಮಾಡಿರುವುದು ತೀರಾ ಕೀಳುಮಟ್ಟದ ಕೆಲಸ.

Karnataka govt transfers IAS officer Rohini Sindhuri

Follow Us:
Download App:
  • android
  • ios