Asianet Suvarna News Asianet Suvarna News

12 ಹೊಸ ತಾಲೂಕು ರಚನೆಗೆ ಅಸ್ತು... ನಿಮ್ಮ ಜಿಲ್ಲೆಗೂ ಗಿಫ್ಟ್ ಬಂತಾ?

ರಾಜ್ಯ ಬಜೆಟ್ ನಲ್ಲಿ 4 ಹೊಸ ತಾಲೂಕು ರಚನೆ ಮಾಡುವ ಘೋಷಣೆ ಮಾಡಿದ್ದ ರಾಜ್ಯ ಸರಕಾರ ಇದೀಗ 12 ತಾಲೂಕುಗಳ ರಚನೆಗೆ ಅಸ್ತು  ಎಂದಿದೆ. ಯಾವ ಜಿಲ್ಲೆಯಲ್ಲಿ ಹೊಸ ತಾಲೂಕುಗಳು ರಚನೆಯಾಗಲಿವೆ? ಅಲ್ಲಿಗೆ ರಾಜ್ಯದಲ್ಲಿ ಒಟ್ಟು ಎಷ್ಟು ತಾಲೂಕುಗಳಾಗಿವೆ ಎಂದು ತಿಳಿಯಲು ಓದಿ ಈ ಸುದ್ದಿ.

Karnataka government announces 12-new-taluks-to-be-formed 2019-20
Author
Bengaluru, First Published Feb 28, 2019, 10:12 PM IST

ಬೆಂಗಳೂರು (ಫೆ.28): ಹೊಸದಾಗಿ 12 ತಾಲೂಕುಗಳ ರಚನೆಗೆ ರಾಜ್ಯ ಸರಕಾರ ಅಧಿಕೃತ ಆದೇಶ ನೀಡಿದೆ. ಹೊಸ ತಾಲೂಕುಗಳ ಪಟ್ಟಿ ಇಲ್ಲಿದೆ. ವಿವಿಧ ಸಮಿತಿಗಳ ಶಿಫಾರಸು ಆಧರಿಸಿ ಹೊಸ ತಾಲೂಕುಗಳ ರಚನೆಯಾಗಿದೆ.

ಕಂದಾಯ ಇಲಾಖೆಗೆ ಹೊಸ ತಾಲೂಕುಗಳ ಬಗ್ಗೆ ತಿಳಿವಳಿಕೆ ನೀಡಲಾಗಿದ್ದು ಆಡಳಿತಾತ್ಮಕ ಕಚೇರಿ ತೆರೆಯಲು ಸೂಚಿಸಲಾಗಿದೆ. ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಾಗಲಕೋಟೆಯ ತೇರದಾಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸವನ್ನು ಈ ಆದೇಶ ಒಳಗೊಂಡಿದೆ.

4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?

ರಾಮನಗರ ಜಿಲ್ಲೆ - ಹಾರೋಹಳ್ಳಿ, 
ಚಿಕ್ಕಬಳ್ಳಾಪುರ ಜಿಲ್ಲೆ - ಚೇಳೂರು
ಬಾಗಲಕೋಟ ಜಿಲ್ಲೆ - ತೇರದಾಳ 
ಚಿಕ್ಕಮಗಳೂರು - ಕಳಸ
ಕೊಡಗು ಜಿಲ್ಲೆ - ಪೊನ್ನಂಪೇಟೆ
ಕೊಡಗು ಜಿಲ್ಲೆ - ಕುಶಾಲನಗರ
ವಿಜಯಪುರ ಜಿಲ್ಲೆ -ಅಲಮೇಲ
ದಕ್ಷಿಣ ಕನ್ನಡ ಜಿಲ್ಲೆ - ಮುಲ್ಕಿ 
ದಕ್ಷಿಣ ಕನ್ನಡ ಜಿಲ್ಲೆ - ಉಲ್ಲಾಳ 
ಮೈಸೂರು ಜಿಲ್ಲೆ - ಸಾಲಿಗ್ರಾಮ
ಹಾಸನ ಜಿಲ್ಲೆ - ಶಾಂತಿಗ್ರಾಮ
ಬೆಳಗಾವಿ ಜಿಲ್ಲೆ - ಯರಗಟ್ಟಿ

 

Follow Us:
Download App:
  • android
  • ios