Asianet Suvarna News Asianet Suvarna News

ಕಾವೇರಿ ವಿಚಾರಣೆ ಅಂತ್ಯ; ಅಂತಿಮ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್'ನಲ್ಲಿ 2 ತಿಂಗಳ ಕಾಲ ನಡೆದ ವಿಚಾರಣೆ ಅಂತ್ಯಗೊಂಡಿದೆ.  ಸುಪ್ರೀಂಕೋರ್ಟ್​ ಮುಖ್ಯ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿದ್ದು ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.

Karnataka gets Drawback in Cauvery Issue in Supreme Court

ಬೆಂಗಳೂರು( ಸೆ.20): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್'ನಲ್ಲಿ 2 ತಿಂಗಳ ಕಾಲ ನಡೆದ ವಿಚಾರಣೆ ಅಂತ್ಯಗೊಂಡಿದೆ.  ಸುಪ್ರೀಂಕೋರ್ಟ್​ ಮುಖ್ಯ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿದ್ದು ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.

ವರ್ಷಕ್ಕೆ 192 ಟಿಎಂಸಿ ನೀರು ಬಿಡುವಂತೆ ನ್ಯಾಯಾಧೀಕರಣ ಆದೇಶಿಸಿತ್ತು. ಕಾವೇರಿ ನಿರ್ವಹಣಾ ಮಂಡಳಿ ವಿರೋಧಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. 2 ತಿಂಗಳ ಕಾಲ ನಡೆದ ವಿಚಾರಣೆ ಅಂತ್ಯಗೊಂಡಿದೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಆಗಬೇಕು ಎಂಬುದು ನಮ್ಮ ಅಭಿಪ್ರಾಯ.  ಕೃಷ್ಣಾ, ನರ್ಮದಾ ನದಿ ನೀರು ಹಂಚಿಕೆ ಪ್ರಕರಣದಲ್ಲೂ ನಿರ್ವಹಣಾ ಮಂಡಳಿಗಳನ್ನು ರಚಿಸಿದ್ದೇವೆ. ಹಾಗೆಯೇ ಕಾವೇರಿಯಲ್ಲೂ  ನಿರ್ವಹಣಾ ಮಂಡಳಿ ಮಾಡುತ್ತೇವೆ. ಸಂಸತ್​ಗೆ ಕಾವೇರಿ ನಿರ್ವಹಣಾ ಮಂಡಳಿ ಸರ್ವೋಚ್ಛ  ಅಧಿಕಾರವಿದೆ ಎಂದು ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.  

ನಿರ್ವಹಣಾ ಮಂಡಳಿಯಿಂದ ಕರ್ನಾಟಕಕ್ಕೇನು ತೊಂದರೆ?

ಕಾವೇರಿ ನಿರ್ವಹಣಾ ಮಂಡಳಿ ಆಸ್ತಿತ್ವಕ್ಕೆ ಬಂದರೆ ಕರ್ನಾಟಕಕ್ಕೆ ದೊಡ್ಡ ಆಪತ್ತು ಕಾದಿದೆ. ಕಾವೇರಿ ನದಿ ಮೇಲಿನ ಹಕ್ಕನ್ನು ಕರ್ನಾಟಕ ಸಂಪೂರ್ಣ ಕಳೆದುಕೊಳ್ಳುತ್ತದೆ.

-ಕಾವೇರಿ ಮೇಲಿನ ಹಕ್ಕು ಸ್ವಾಮ್ಯವನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳುತ್ತದೆ.

-ಕಾವೇರಿ ಕೊಳ್ಳದ ಜಲಾಶಯಗಳ ಮೇಳೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಹಿಡಿತವಿರುತ್ತದೆ.

-ಕೇಂದ್ರ ನೀರಾವರಿ ಆಯೋಗದ (CWC) ನಿಯಂತ್ರಣಕ್ಕೆ ಹೋಗುತ್ತದೆ.

-ನೀರು ಹರಿಸುವ ತೀರ್ಮಾನವನ್ನು ನಿರ್ವಹಣಾ ಮಂಡಳಿಯೇ ಕೈಗೊಳ್ಳುತ್ತೆದೆ.

-ಈ ಮಂಡಳಿಯ ಅಧ್ಯಕ್ಷರು, ಸದಸ್ಯರನ್ನು ಕೇಂದ್ರ ಸರ್ಕಾರ ನೇಮಿಸುತ್ತದೆ.

ರಾಜ್ಯಗಳ ಪ್ರತಿನಿಧಿಗಳಿದ್ದರೂ ತಮಿಳುನಾಡಿನದ್ದೇ ಪ್ರಾಬಲ್ಯವಿರುತ್ತದೆ.

-ನ್ಯಾಯಾಧೀಕರಣದ ಸೂತ್ರದಂತೆ ನೀರು ಹಂಚಿಕೆಯಾದರೆ ಕರ್ನಾಟಕಕ್ಕೆ ಆಪತ್ತು ಇಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಗಳೂ ಇವೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯಿಂದ ತಮಿಳುನಾಡಿಗೆ ಹೆಚ್ಚಿನ ಬಲ ಬರುತ್ತದೆ.

 

 

Follow Us:
Download App:
  • android
  • ios