Asianet Suvarna News Asianet Suvarna News

ಬಾಬರಿ ಮಸೀದಿ ಧ್ವಂಸ ಪ್ರಕರಣ: ನ್ಯಾಯಾಲಯಕ್ಕೆ ಶರಣಾದ ಕಲ್ಯಾಣ್ ಸಿಂಗ್!

ಅಯೋಧ್ಯಾ ಬಾಬರಿ ಮಸೀದಿ ಧ್ವಂಸ ಪ್ರಕರಣ| ಸಿಬಿಐ ನ್ಯಾಯಾಲಯದ ಮುಂದೆ ಶರಣಾದ ಕಲ್ಯಾಣ್ ಸಿಂಗ್| ಕಲ್ಯಾಣ್ ಸಿಂಗ್, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ| ಅಯೋಧ್ಯೆಯ ಸಿಬಿಐ ವಿಶೇಷ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಮುಂದೆ ಶರಣಾಗತಿ ಅರ್ಜಿ|  2 ಲಕ್ಷ ರೂ. ಬಾಂಡ್‌ನ ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು| ರಾಜಸ್ಥಾನಕ್ಕೆ ಹೊಸ ರಾಜ್ಯಪಾಲ ನೇಮಕ ಹಿನ್ನೆಲೆ| ಸಾಂವಿಧಾನಿಕ ಹುದ್ದೆಯಿಂದ ಕೆಳಗಿಳಿದ ಕಲ್ಯಾಣ್ ಸಿಂಗ್| 

Kalyan Singh Surrenders Before CBI Court In Ayodhya Case
Author
Bengaluru, First Published Sep 27, 2019, 7:06 PM IST

ಲಕ್ನೋ(ಸೆ.27): ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ, ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.  

ಅಯೋಧ್ಯೆಯ ಸಿಬಿಐ ವಿಶೇಷ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಮುಂದೆ ಶರಣಾಗತಿ ಅರ್ಜಿಯೊಂದಿಗೆ ಕಲ್ಯಾಣ್ ಸಿಂಗ್ ಹಾಜರಾದರು. ಬಳಿಕ ನ್ಯಾಯಾಲಯ ಐಪಿಸಿ 153 (ಎ), 153(ಬಿ), 295 ಸೆಕ್ಷನ್‌ಗಳಡಿ ಆರೋಪ ದಾಖಲಿಸಿಕೊಂಡು 2 ಲಕ್ಷ ರೂ. ಬಾಂಡ್‌ನ ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಿತು.

ರಾಜಸ್ಥಾನಕ್ಕೆ ಹೊಸ ರಾಜ್ಯಪಾಲರ ನೇಮಕವಾಗಿದ್ದು, ಕಲ್ಯಾಣ್ ಸಿಂಗ್ ತಮ್ಮ ಸಾಂವಿಧಾನಿಕ ಹುದ್ದೆಯ ಕರ್ತವ್ಯದಿಂದ ಮುಕ್ತರಾಗಿದ್ದಾರೆ. ಹೀಗಾಗಿ ಸೆ.27r ಒಳಗಾಗಿ ಅವರನ್ನು ಹಾಜರುಪಡಿಸಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು. 

1992ರ ಡಿಸೆಂಬರ್ 6 ರಂದು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದಾಗ ಕಲ್ಯಾಣ್ ಸಿಂಗ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಕಲ್ಯಾಣ್ ಸಿಂಗ್ ಜೊತೆಗೆ ಎಲ್ ಕೆ ಅಡ್ವಾಣಿ, ಉಮಾ ಭಾರತಿ, ಸಾಧ್ವಿ ರಿತಾಂಭಾ, ಮಹಾಂತ್ ನೃತ್ಯ ಗೋಪಾಲ್ ದಾಸ್ ಮತ್ತು ಮುರಳಿ ಮನೋಹರ್ ಜೋಶಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಕಲ್ಯಾಣ್ ಸಿಂಗ್ ಹೊರತುಪಡಿಸಿ ಉಳಿದ ಎಲ್ಲ ಬಿಜೆಪಿ ಮುಖಂಡರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

Follow Us:
Download App:
  • android
  • ios