Asianet Suvarna News Asianet Suvarna News

ಜಾರ್ಖಂಡ್‌ ವಿಧಾನಸಭೆಗೆ ನ.30- To ಡಿ.23 ಚುನಾವಣೆ: ಆಯೋಗ!

ಜಾರ್ಖಂಡ್‌ ವಿಧಾನಸಭೆಗೆ ನ.30- To ಡಿ.23 ಚುನಾವಣೆ| ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಸುನೀಲ್ ಅರೋರಾ ಮಾಹಿತಿ| ಜಾರ್ಖಂಡ್ ನ ಒಟ್ಟು 81 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು ಐದು ಹಂತಗಳಲ್ಲಿ ಮತದಾನ| ನವೆಂಬರ್ 30 ರಿಂದ ಡಿಸೆಂಬರ್ 20ರವರೆಗೂ ಈ ಐದು ಹಂತಗಳ ಮತದಾನ| ಡಿಸೆಂಬರ್ 23ರಂದು ಮತ ಎಣಿಕೆ ಕಾರ್ಯ ಮತ್ತು ಫಲಿತಾಂಶ ಪ್ರಕಟಣೆ|

Jharkhand Election Will Be Held In 5 Phases From November 30
Author
Bengaluru, First Published Nov 1, 2019, 6:08 PM IST

ನವದೆಹಲಿ(ನ.01): ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಮುಗಿಸಿ ಉಸ್ಸೆಂದು ಕುಳಿತಿದ್ದವರಿಗೆ ಕೇಂದ್ರ ಚುನಾವಣಾ ಆಯೋಗ ಮತ್ತೆ ಬುಲಾವ್ ನೀಡಿದೆ. ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಆಯೋಗ ದಿನಾಂಕ ಘೋಷಣೆ ಮಾಡಿದೆ.

ಚುನಾವಣಾ ಆಯೋಗದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಜಾರ್ಖಂಡ್ ನ ಒಟ್ಟು 81 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು ಐದು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಹೇಳಿದ್ದಾರೆ. 

‘ಒಂದು ದೇಶ ಒಂದು ಚುನಾವಣೆ’ : ಜಾರಿಯಾದಲ್ಲಿ ಹಲವು ಸರ್ಕಾರಗಳ ಅಧಿಕಾರವಧಿ ಕಡಿತ

ನವೆಂಬರ್ 30 ರಿಂದ ಡಿಸೆಂಬರ್ 20ರವರೆಗೂ ಈ ಐದು ಹಂತಗಳ ಮತದಾನ ನಡೆಯಲಿದ್ದು, ಡಿಸೆಂಬರ್ 23ರಂದು ಮತ ಎಣಿಕೆ ಕಾರ್ಯ ಮತ್ತು ಫಲಿತಾಂಶ ಪ್ರಕಟವಾಗಲಿದೆ ಎಂದು ಅರೋರಾ ಮಾಹಿತಿ ನೀಡಿದ್ದಾರೆ.

ಜಾರ್ಖಂಡ್‌ನ 19 ಜಿಲ್ಲೆಗಳು ನಕ್ಸಲ ಪೀಡಿತ ಪ್ರದೇಶಗಳಾಗಿರುವುದರಿಂದ 5 ಹಂತಗಳಲ್ಲಿ ಮತದಾನ ನಡೆಸಲು ನಿರ್ಧರಿಸಲಾಗಿದೆ.  ನವೆಂಬರ್ 30ರಂದು ಮೊದಲ ಹಂತ, ಡಿಸೆಂಬರ್ 7 ರಂದು ಎರಡನೇ ಹಂತ, ಡಿಸೆಂಬರ್ 12 ರಂದು ಮೂರನೇ ಹಂತ, ಡಿಸೆಂಬರ್  16 ರಂದು ನಾಲ್ಕನೇ ಹಂತ ಹಾಗೂ ಡಿಸೆಂಬರ್ 20 ರಂದು ಐದನೇ ಹಂತದ ಮತದಾನ ನಡೆಯಲಿದೆ.

ಯಾರು ಏನೇ ಅಂದ್ರೂ ಮತದಾನಕ್ಕೆ ಬ್ಯಾಲೆಟ್ ಶೀಟ್ ಬಳಕೆ ಇಲ್ಲ: ಆಯೋಗ ಸ್ಪಷ್ಟನೆ

ಡಿಸೆಂಬರ್ 23ಕ್ಕೆ ಮತ ಎಣಿಕೆ ಕಾರ್ಯ ಹಾಗೂ ಫಲಿತಾಂಶ ಪ್ರಕಟಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

Follow Us:
Download App:
  • android
  • ios