Asianet Suvarna News Asianet Suvarna News

ಜ. 20 ರಿಂದ ಬ್ಯಾಂಕುಗಳಲ್ಲಿ ಉಚಿತ ಸೇವೆ ಇರಲ್ಲ, ಎಲ್ಲದಕ್ಕೂ ಬೀಳಲಿದೆ ಶುಲ್ಕ!

ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2018 ಜನವರಿ 20 ರಿಂದ ಉಚಿತ ಸೇವೆ ನೀಡುವುದನ್ನು ನಿಲ್ಲಿಸಲಿವೆ ಎಂಬ ಸುದ್ದಿಯೊಂದು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸುದ್ದಿ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಸಾರ್ವಜನಿಕ ಬ್ಯಾಂಕುಗಳು ಉಚಿತ ಸೇವೆಯನ್ನು ನಿಲ್ಲಿಸಲಿರುವುದು ನಿಜವೇ ಎಂದು ಇದರ ಸತ್ಯಾಸತ್ಯತೆಯನ್ನು ತಿಳಿಯ ಹೊರಟಾಗ ಇದರ ಅಸಲಿ ಕತೆ ಬಯಲಾಯಿತು. ಏಕೆಂದರೆ ಸಾರ್ವಜನಿಕ ಬ್ಯಾಂಕುಗಳು ಜನವರಿ ೨೦ರಿಂದ ಉಚಿತ ಸೇವೆಯನ್ನು ನಿಲ್ಲಿಸಲಿವೆ ಎಂಬ ಸುದ್ದಿಯನ್ನು ಬ್ಯಾಂಕ್‌ಗಳ ಸಂಘವು(ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್) ನಿರಾಕರಿಸಿದೆ.

Janaury 20 Onwards there is no Free Service in Bank

ಬೆಂಗಳೂರು (ಜ.12): ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2018 ಜನವರಿ 20 ರಿಂದ ಉಚಿತ ಸೇವೆ ನೀಡುವುದನ್ನು ನಿಲ್ಲಿಸಲಿವೆ ಎಂಬ ಸುದ್ದಿಯೊಂದು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ  ಸುದ್ದಿ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಸಾರ್ವಜನಿಕ ಬ್ಯಾಂಕುಗಳು ಉಚಿತ ಸೇವೆಯನ್ನು ನಿಲ್ಲಿಸಲಿರುವುದು ನಿಜವೇ ಎಂದು ಇದರ ಸತ್ಯಾಸತ್ಯತೆಯನ್ನು ತಿಳಿಯ ಹೊರಟಾಗ ಇದರ ಅಸಲಿ ಕತೆ ಬಯಲಾಯಿತು. ಏಕೆಂದರೆ ಸಾರ್ವಜನಿಕ ಬ್ಯಾಂಕುಗಳು ಜನವರಿ ೨೦ರಿಂದ ಉಚಿತ ಸೇವೆಯನ್ನು ನಿಲ್ಲಿಸಲಿವೆ ಎಂಬ ಸುದ್ದಿಯನ್ನು ಬ್ಯಾಂಕ್‌ಗಳ ಸಂಘವು(ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್) ನಿರಾಕರಿಸಿದೆ.

ಇಂತಹ ಯಾವುದೇ ಕ್ರಮಗಳನ್ನು  ತೆಗೆದುಕೊಂಡಿಲ್ಲ ಎಂದು ಐಬಿಎ ಸ್ಪಷ್ಟೀಕರಣ ನೀಡಿದೆ. ಅಲ್ಲದೆ ಸಾರ್ವಜನಿಕರು ಇಂತಹ ವಿಷಯಗಳ ಕುರಿತು ಜಾಗರೂಕರಾಗಿರಬೇಕು. ಇಂತಹ ವದಂತಿಗಳು ಹರಡದಂತೆ ಎಚ್ಚರ ವಹಿಸಬೇಕು. ಈ ವದಂತಿಯು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದ್ದು, ಈ ಕುರಿತ ಯಾವುದೇ ಮಾರ್ಗಸೂಚಿಗಳನ್ನೂ ಆರ್‌ಬಿಐ ನೀಡಿಲ್ಲ ಎಂದಿದೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿ ಆಧಾರ ರಹಿತವಾದದ್ದು, ಸಾರ್ವಜನಿಕ  ಬ್ಯಾಂಕುಗಳು ತಮ್ಮ ಉಚಿತ ಸೇವೆಯನ್ನು ನಿಲ್ಲಿಸಲಿವೆ ಎಂಬ ಯಾವುದೇ ಪ್ರಸ್ತಾಪ ಬಂದಿಲ್ಲ’ ಎಂದು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಸ್ಪಷ್ಟೀಕರಣ ನೀಡಿದೆ. ಹಾಗಾಗಿ ಜನವರಿ 20 ರಿಂದ ಬ್ಯಾಂಕುಗಳು ಉಚಿತ ಸೇವೆಯನ್ನು ನಿಲ್ಲಿಸಲಿವೆ ಎಂಬ ಸುದ್ದಿ ಸುಳ್ಳು ಎಂಬಂತಾಯಿತು.

 

Follow Us:
Download App:
  • android
  • ios