Asianet Suvarna News Asianet Suvarna News

ಇಶ್ರತ್‌ ಜಹಾನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಮೋದಿ ವಿಚಾರಣೆ?

ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ತನಿಖಾಧಿಕಾರಿಗಳು ಗೌಪ್ಯವಾಗಿ ವಿಚಾರಣೆ ನಡೆಸಿದ್ದರು ಎಂಬ ಕುತೂಲಕಾರಿ ವಿಷಯವನ್ನು ಪ್ರಕರಣದ ಆರೋಪಿ, ನಿವೃತ್ತ ಐಪಿಎಸ್‌ ಅಧಿಕಾರಿ ಡಿ.ಜಿ. ವಂಜಾರಾ ಬಹಿರಂಗಪಡಿಸಿದ್ದಾರೆ.

Ishrat Jahan Encounter Case

ಅಹಮದಾಬಾದ್‌: ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ತನಿಖಾಧಿಕಾರಿಗಳು ಗೌಪ್ಯವಾಗಿ ವಿಚಾರಣೆ ನಡೆಸಿದ್ದರು ಎಂಬ ಕುತೂಲಕಾರಿ ವಿಷಯವನ್ನು ಪ್ರಕರಣದ ಆರೋಪಿ, ನಿವೃತ್ತ ಐಪಿಎಸ್‌ ಅಧಿಕಾರಿ ಡಿ.ಜಿ. ವಂಜಾರಾ ಬಹಿರಂಗಪಡಿಸಿದ್ದಾರೆ.

ಮೋದಿ ಗುಜರಾತ್‌ ಸಿಎಂ ಆಗಿದ್ದಾಗ ಈ ವಿಚಾರಣೆ ನಡೆದಿತ್ತು. ಆದರೆ ಪ್ರಕರಣದ ಕಡತದಲ್ಲಿ ಇಂತಹ ವಿಷಯ ದಾಖಲಿಸಿಲ್ಲ ಎಂದು ಅವರು ಹೇಳಿದ್ದಾರೆ. ವಿಶೇಷ ಸಿಬಿಐ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯೊಂದರಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ಪ್ರಕರಣದ ಕಡತದಲ್ಲಿರುವ ಎಲ್ಲ ಅಂಶಗಳು ಮತ್ತು ದೋಷಾರೋಪ ಪಟ್ಟಿಸಂಪೂರ್ಣ ಸಂಯೋಜಿಸಲ್ಪಟ್ಟದ್ದು ಮತ್ತು ಸೃಷ್ಟಿಸಲ್ಪಟ್ಟದ್ದು. ಹೀಗಾಗಿ ಪ್ರಕರಣದ ಕಡತದಲ್ಲಿರುವ ಎಲ್ಲ ಅಂಶಗಳು ಸುಳ್ಳು ಮತ್ತು ಹೆಣೆಯಲ್ಪಟ್ಟಕಟ್ಟುಕತೆ.

ಅಲ್ಲದೆ, ಇದರಲ್ಲಿ ಅರ್ಜಿದಾರನಿಗೆ ಸಂಬಂಧಿಸಿದ ಯಾವುದೇ ವಿಚಾರಣಾರ್ಹ ಸಾಕ್ಷ್ಯಗಳಿಲ್ಲ ಎಂದು ವಂಜಾರಾ ಹೇಳಿದ್ದಾರೆ. ಪ್ರಕರಣದಿಂದ ಕೈಬಿಡುವಂತೆ ಕೋರಿದ ವಂಜಾರಾರ ಈ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯಿಸುವಂತೆ ಸಿಬಿಐಗೆ ವಿಶೇಷ ನ್ಯಾಯಮೂರ್ತಿ ಜೆ.ಕೆ. ಪಾಂಡ್ಯಾ ನೋಟಿಸ್‌ ಜಾರಿಗೊಳಿಸಿದ್ದಾರೆ.

2004 ಜೂ.15ರಂದು ಅಹಮದಾಬಾದ್‌ ಹೊರ ವಲಯದಲ್ಲಿ ಇಶ್ರತ್‌ ಜಹಾನ್‌ ಮತ್ತು ಇತರ ಕೆಲವರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇದೊಂದು ನಕಲಿ ಎನ್‌ಕೌಂಟರ್‌ ಎಂಬ ಆಪಾದನೆಯಿದೆ.

Follow Us:
Download App:
  • android
  • ios