Asianet Suvarna News Asianet Suvarna News

ಇನ್ಫಿ ಮೂರ್ತಿ ಜೀವನಚರಿತ್ರೆ ಬೆಳ್ಳಿ ತೆರೆಗೆ!

ಇನ್ಫಿ ಮೂರ್ತಿ ಜೀವನಚರಿತ್ರೆ ಬೆಳ್ಳಿ ತೆರೆಗೆ ! ನಿರ್ದೇಶಕ ಸಂಜಯ್ ತ್ರಿಪಾಠಿ ನಿರ್ದೇಶನ | ಹಲವು ಸುತ್ತಿನ ಚರ್ಚೆ ಬಳಿಕ ಚಿತ್ರಕ್ಕೆ ಮೂರ್ತಿ ಸಮ್ಮತಿ

Infosys co-founder Narayana Murthy's biopic come on screen soon
Author
Bengaluru, First Published Jan 18, 2019, 8:49 AM IST

ನವದೆಹಲಿ (ಜ. 18): ಖ್ಯಾತನಾಮ ಉದ್ಯಮಿಗಳ ಕುರಿತ ಜೀವನಚರಿತ್ರೆ ಕುರಿತು ಪುಸ್ತಕಗಳು ಬರುವುದು ಸಾಮಾನ್ಯ. ಆದರೆ ಅವು ಬೆಳ್ಳಿತೆರೆಗೆ ಬರುವುದು ತೀರಾ ಅಪರೂಪ. ಅಂಥದ್ದರಲ್ಲಿ, ಮಾಹಿತಿ ತಂತ್ರಜ್ಞಾನ ದೈತ್ಯ ಇನ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಅವರ ಜೀವನ ಕುರಿತ ಚಲನಚಿತ್ರವೊಂದರ ತಯಾರಿಗೆ ಸಿದ್ಧತೆಗಳು ನಡೆದಿವೆ.

ಖ್ಯಾತ ನಿರ್ದೇಶಕ ಸಂಜಯ್ ತ್ರಿಪಾಠಿ, ಮೂರ್ತಿ ಅವರ ಜೀವನ ಕುರಿತ ಚಲನಚಿತ್ರಕ್ಕೆ ಚಿತ್ರಕಥೆ ಬರೆದಿದ್ದು, ಚಿತ್ರದ ನಿರ್ದೇಶನವನ್ನೂ ಮಾಡಲಿದ್ದಾರೆ ಎನ್ನಲಾಗಿದೆ. ಹಲವರಿಗೆ ಜೀವನಸ್ಪೂರ್ತಿಯಾಗಿರುವ ಮೂರ್ತಿ ಅವರ ಜೀವನದ ಕಥೆಯನ್ನು ಬೆಳ್ಳಿ ತೆರೆಗೆ ತರುವ ಆಶಯ ಹೊಂದಿದ್ದ ತ್ರಿಪಾಠಿ, ಸುಮಾರು 7-8 ತಿಂಗಳ ಹಿಂದೆ ಈ ಬಗ್ಗೆ ಎನ್ ಆರ್‌ಎನ್ ಅವರನ್ನು ಮೊದಲ ಬಾರಿ ಸಂಪರ್ಕಿಸಿದ್ದರು. ಬಳಿಕ ನಡೆದ ಹಲವು ಸುತ್ತಿನ ಮಾತುಕತೆಯ ಬಳಿಕ, ಚಿತ್ರದಲ್ಲಿ ಯಾವುದೇ ರೀತಿಯಲ್ಲೂ ವಾಸ್ತವಾಂಶವನ್ನು ತಿರುಚಬಾರದು ಎಂಬ ಕಟ್ಟಪ್ಪಣೆಯೊಂದಿಗೆ ಮೂರ್ತಿ ತಮ್ಮ ಜೀವನದ ಕಥೆಯನ್ನು ಬೆಳ್ಳಿತೆರೆಗೆ ತರಲು ಒಪ್ಪಿಕೊಂಡರು ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ.

ತ್ರಿಪಾಠಿ ಈಗಾಗಲೇ 30 ಪುಟಗಳ ಚಿತ್ರಕಥೆಯನ್ನು ಮೂರ್ತಿ ಅವರಿಗೆ ಸಲ್ಲಿಸಿದ್ದಾರೆ. ಈ ಚಿತ್ರಕಥೆಯ ಕುರಿತು ಮೂರ್ತಿ ಅವರು ಅನುಮೋದನೆ ನೀಡಿದ ಬಳಿಕ, ನಟರ ಆಯ್ಕೆ ಸೇರಿದಂತೆ ಇತರೆ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಮಹಾವೀರ್ ಜೈನ್ ಚಿತ್ರದ ನಿರ್ಮಾಪಕರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

1990 ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಟರ್ನಿಂಗ್ ಪಾಯಿಂಟ್’ ಎಂಬ ವೈಜ್ಞಾನಿಕ ಕಾರ್ಯಕ್ರಮದ ಮೂಲದ ಜನಪ್ರಿಯಾಗಿದ್ದ ತ್ರಿಪಾಠಿ, 2013 ರಲ್ಲಿ ‘ಕ್ಲಬ್ 60’ ಎಂಬ ಹಿಂದಿ ಸಿನೆಮಾವನ್ನೂ ನಿರ್ಮಿಸಿದ್ದರು. ಇನ್ನು ಶಾಲಾ ಶಿಕ್ಷಕರೊಬ್ಬರ ಪುತ್ರನಾಗಿದ್ದ ಮೂರ್ತಿ ಐಐಟಿ ಕಾನ್ಪುರದಲ್ಲಿ ಪದವಿ ಪಡೆದ ಬಳಿಕ, ಪುಣೆಯಲ್ಲಿ ಪತ್ನಿ ಕಂಪ್ಯೂಟರ್ಸ್‌ನಲ್ಲಿ ಕೆಲಸಕ್ಕೆ ಸೇರಿದ್ದರು.

ಬಳಿಕ ಪುಣೆಯ ತಮ್ಮ ಮನೆಯಲ್ಲೇ ಕೆಲ ಸ್ನೇಹಿತರ ಜೊತೆಗೂಡಿ ಇನ್ಫೋಸಿಸ್ ಎಂಬ ಸಂಸ್ಥೆ ಹುಟ್ಟುಹಾಕಿದ್ದರು. ಇದಕ್ಕಾಗಿ ಅವರು ಪತ್ನಿಯಿಂದಲೇ 10,000 ರು. ಸಾಲ ಪಡೆದಿದ್ದರು. ಮುಂದೆ ಕಂಪನಿ ಜಗದ್ವಿಖ್ಯಾತಿ ಪಡೆದಿದ್ದು ಇದೀಗ ಇತಿಹಾಸ.

Follow Us:
Download App:
  • android
  • ios