Asianet Suvarna News Asianet Suvarna News

ಅತ್ತೆ-ಅಳಿಯ ಕುಚ್ ಕುಚ್ ಸಂಬಂಧ, ಮಾತು ಕೇಳದ್ದಕ್ಕೆ ಕೊಂದ ಶಾರುಖ್ ಖಾನ್

ಲವರ್ ಹತ್ಯೆ ಮಾಡಿದ ಪ್ರಕರಣ/ ಅತ್ತೆ-ಳಿಯನ ನಡುವೆ ಪ್ರೇಮಾಂಕುರ/ ಅತ್ತೆಯನ್ನು ಹತ್ಯೆ ಮಾಡಿದ ಅಳಿಯ ಶಾರುಖ್ ಖಾನ್/ ಮೂರು ವರ್ಷಗಳಿಂದ ಲಿವಿಂಗ್ ಟುಗೆದರ್‌ ನಲ್ಲಿದ್ದ ಜೋಡಿ

Indian Woman killed by Son-in-Law who was Her Lover
Author
Bengaluru, First Published Oct 22, 2019, 5:46 PM IST

ಭೋಪಾಲ್(ಅ. 22)  ಇದೊಂದು ವಿಚಿತ್ರ ರಿಯಲ್ ಸ್ಟೋರಿ.. ಮಹಿಳೆಯೊಬ್ಬರನ್ನು ಆಕೆಯ ಲವರ್ ಹತ್ಯೆ ಮಾಡಿದ್ದಾನೆ. ಅರೇ ಇದರಲ್ಲೇನು ವಿಚಿತ್ರ ಎಲ್ಲ ಕೊಲೆಗಳಂತೆಯೇ ಈ ಸುದ್ದಿಯೂ ಅಂದುಕೊಳ್ಳಬೇಡಿ. ಇಲ್ಲೊಂದು ಟ್ವಿಸ್ಟ್ ಇದೆ. ಮಹಿಳೆಯ ಅಳಿಯ ಅಂದರೆ ಮಗಳ ಗಂಡನೇ ಆಕೆಯ ಲವರ್!

ಅಕ್ಟೋಬರ್ 20  ಭೋಪಾಲ್ ನಲ್ಲಿ ನಡೆದ ಘಟನೆ ಇದೀಗ ಪ್ರಾಮುಖ್ಯ ಪಡೆದುಕೊಂಡಿದೆ. ಅಶೋಕ ಗಾರ್ಡನ್ ಅಶೋಕಾ ವಿಹಾರ್ ಕಾಲೋನಿಯಲ್ಲಿ ಪ್ರಕರಣ ನಡೆದಿದೆ.

ಶಹೀನ್ ಎಂಬ ಮಹಿಳೆಯನ್ನು ಶಾರುಖ್ ಖಾನ್ ಎಂಬಾತ ಹತ್ಯೆ ಮಾಡಿದ್ದಾನೆ. ಗಂಡನಿಂದ ದೂರವಾಗಿದ್ದ ಶಹೀನ್ ಶಾರುಖ್ ಖಾನ್ ಜತೆಗೆ ಕಳೆದ ಮೂರು ವರ್ಷಗಳಿಂದ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಒಂದೇ ಮನೆಯಲ್ಲಿ ವಾಸವಿದ್ದರು.

ಮೆಟ್ರೋ ಲಿಫ್ಟ್ ನಲ್ಲಿಯೇ ಸರಸ-ಸಲ್ಲಾಪ, ಚುಂಬನ

ಶಾರುಖ್ ಖಾನ್ ಶಹೀನ್ ಅವರ ಮಗಳನ್ನು ವಿವಾಹವಾಗಿದ್ದರು. ಇದಾದ ಮೇಲೆ ಖಾನ್ ಮತ್ತು ಶಹೀನ್ ಒಬ್ಬರಿಗೊಬ್ಬರು ಆಕರ್ಷಣೆಗೆ ಒಳಗಾಗಿದ್ದಾರೆ.

ಇವರಿಬ್ಬರ ಸಂಬಂಧವನ್ನು ಕುಟುಂಬದ ಉಳಿದ ಸದಸ್ಯರು ವಿರೊಧಿಸಿದ್ದಾರೆ. ಇದರ ಪರಿಣಾಮ ಎಂಬಂತೆ ಇಬ್ಬರು ಅಶೋಕ ಗಾರ್ಡನ್ ಬಳಿಯ ಆಪಾರ್ಟ್ ಮೆಂಟ್ ಗೆ ಮೂವ್ ಆಗಿದ್ದಾರೆ.

ಶಹೀನ್ ಕೊಲೆಯಾಗುವ ಮುನ್ನ ಇಬ್ಬರ ನಡುವೆ ದೊಡ್ಡ ವಾಕ್ಸಮರ್ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ ಶಹೀನ್ ಅವರನ್ನು ವೇಶ್ಯಾವಾಟಿಕೆ ಆರೋಪದ ಮೇಲೆಯೂ ಬಂಧನ ಮಾಡಲಾಗಿತ್ತು. ವೇಶ್ಯಾವಾಟಿಕೆ ಅಡ್ಡೆಯನ್ನು ನಡೆಸುತ್ತಿದ್ದಾಳೆ ಎಂಬ ಆರೋಪವೂ ಕೇಳಿಬಂದಿದ್ದು ಜೈಲಿನಲ್ಲಿ ಅನೇಕ ದಿನ ಕಳೆದಿದ್ದಳು.

ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಈ ವೇಶ್ಯಾವಾಟಿಕೆ ವಿಚಾರವೇ ಪ್ರಮುಖ ಕಾರಣ ಎನ್ನಲಾಗಿದೆ. ನೀನು ಇದನ್ನು ಬಂದ್ ಮಾಡು ಎಂದು ಶಾರುಖ್ ಹೇಳಿದ್ದು ಶಹೀನ್ ಅವರನ್ನು ಕೆರಳಿಸಿದೆ.

 

Follow Us:
Download App:
  • android
  • ios