Asianet Suvarna News Asianet Suvarna News

ಭಾರತೀಯ ಅಧಿಕಾರಿಗಳನ್ನು ಮತ್ತೆ ಅವಮಾನಿಸಿದ ಪಾಕ್!

ಲಾಹೋರ್ ಫರೂಖಾಬಾದ್ ಗುರುದ್ವಾರ ಸಚ್ಛಾ ಸೌಧ! ಯಾತ್ರಾರ್ಥಿಗಳನ್ನು ಭೇಟಿ ಮಾಡಲು ತೆರಳಿದ್ದ ಭಾರತೀಯ ಅಧಿಕಾರಿಗಳು! ಭಾರತೀಯ ಅಧಿಕಾರಿಗಳನ್ನು ಮತ್ತೆ ಅವಮಾನಿಸಿದ ಪಾಕಿಸ್ತಾನ! ಭಾರತೀಯ ಅಧಿಕಾರಿಗಳಿಗೆ ಪ್ರವೇಶ ನಿರಾಕರಿಸಿದ ಪಾಕ್ ಅಧಿಕಾರಿಗಳು

Indian Officials Kept Away From Sikh Pilgrims in Pakistan
Author
Bengaluru, First Published Nov 23, 2018, 2:45 PM IST

ಲಾಹೋರ್(ನ.23): ಭಾರತೀಯ ಯಾತ್ರಾರ್ಥಿಗಳನ್ನು ಭೇಟಿ ಮಾಡುವ ಸಲುವಾಗಿ ಲಾಹೋರ್‌ನ ಫರೂಖಾಬಾದ್‌ನಲ್ಲಿರುವ ಗುರುದ್ವಾರ ಸಚ್ಛಾ ಸೌಧಕ್ಕೆ ತೆರಳುತ್ತಿದ್ದ ಭಾರತೀಯ ಅಧಿಕಾರಿಗೆ ಪಾಕಿಸ್ತಾನ ಮತ್ತೊಮ್ಮೆ ಅವಮಾನಿಸಿದೆ. 

ನಾನ್ಕಾನ ಸಾಹಿಬ್ ಹಾಗೂ ಗುರುದ್ವಾರ ಸಚ್ಛಾ ಸೌಧಲಲ್ಲಿ ಸಿಕ್ಖ್ ಸಮುದಾಯದವರು ಶ್ರೀ ಗುರು ನಾನಕ್ ದೇವ್ ಅವರ 550ನೇ ಜನ್ಮದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದು, ಇದರ ನಡುವೆಯೇ ಇಸ್ಲಾಮಾಬಾದ್‌ನ ಭಾರತೀಯ ರಾಯಭಾರಿ ಅಧಿಕಾರಿಗಳಾದ ರಂಜಿತ್ ಸಿಂಗ್ ಹಾಗೂ ಸುನಿಲ್ ಕುಮಾರ್ ಅವರಿಗೆ ಪಾಕಿಸ್ತಾನ ಅವಮಾನಿಸಿದೆ.

ಗುರುದ್ವಾರಕ್ಕೆ ತೆರಳುತ್ತಿದ್ದ ಭಾರತೀಯ ಅಧಿಕಾರಿಗಳಿಗೆ ಅನುಮತಿ ನಿರಾಕರಣೆ: 

ಭಾರತ ಹಾಗೂ ಇಡೀ ವಿಶ್ವದಲ್ಲಿ ಸಾಕಷ್ಟು ಗುರುದ್ವಾರಗಳಿವೆ. ಆದರೆ, ಎಲ್ಲಿಯೂ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ನಮಗೆ ಈ ರೀತಿ ಆಗುತ್ತಿರುವುದು ಇದೇ ಮೊದಲು, ಗುರುದ್ವಾರಕ್ಕೆ ತೆರಳುತ್ತಿದ್ದ ವೇಳೆ ನಮ್ಮನ್ನು ಪಾಕಿಸ್ತಾನ ಅಧಿಕಾರಿಗಳು ತಡೆಹಿಡಿದರು. ಇದು ಗುರುದ್ವಾರದ ಪಾವಿತ್ರ್ಯತೆಯನ್ನು ನಾಶ ಮಾಡಿದಂತಾಗುತ್ತದೆ. ಎಂದು ಭಾರತೀಯ ರಾಯಭಾರಿ ಅಧಿಕಾರಿಗಳು ಹೇಳಿದ್ದಾರೆ. 

ಗುರುದ್ವಾರದ ಬಳಿ ಬಂದ ಬಳಿಕ ಅಧಿಕಾರಿಗಳನ್ನು ಪಾಕಿಸ್ತಾನ ಅಧಿಕಾರಿಗಳು ತಡೆಹಿಡಿದಿದ್ದಾರೆ. ಸಾಮಾನ್ಯ ಯಾತ್ರಾರ್ಥಿಗಳಂತೆಯೇ ತಮ್ಮನ್ನೂ ಒಳ ಪ್ರವೇಶಿಸಲು ಬಿಡುವಂತೆ ತಿಳಿಸಿದರೂ, ಪಾಕಿಸ್ತಾನ ಅಧಿಕಾರಿಗಳು ಕೇಳಿಲ್ಲ. 

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಎಂಪಿಎ ರಮೇಶ್ ಸಿಂಗ್ ಆರೋರ ಹಾಗೂ ತಾರಾ ಸಿಂಗ್, ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ನಾವಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. 
 

Follow Us:
Download App:
  • android
  • ios