Asianet Suvarna News Asianet Suvarna News

ಪೋರ್ನ್ ನಿಷೇಧ ಸಾಧ್ಯವೇ ಇಲ್ಲ, ಸರ್ಕಾರಕ್ಕೆ ಸೈಟ್‌ಗಳ ಸವಾಲ್! ಕಾರಣ..

ಕೆಲ ಅಶ್ಲೀಲ ವೆಬ್ ಸೈಟ್ ಗಳು ಕಳೆದ ವಾರದಿಂದ ಬಂದ್ ಆದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಮಾರ್ದನಿಸಿತ್ತು. ಆದರೆ ಬೇರೊಂದು ದಾರಿಯಲ್ಲಿ ತೆರೆದುಕೊಳ್ಳುತ್ತಿದೆ ಎಂಬ ಸುದ್ದಿಯೂ ಸತ್ಯವಾಗಿತ್ತು. ಹಾಗಾದರೆ ಪೋರ್ನ್ ಬ್ಯಾನ್ ಸಂಬಂಧ ಆಡಳಿತ ಮತ್ತೆ ಮತ್ತೆ ಎಡವುತ್ತಿರುವುದೆಲ್ಲಿ? ವಾಸ್ತವಿಕ ಸ್ಥಿತಿ ಏನಿದೆ?

Indian government attempt to ban porn will most likely fail real causes
Author
Bengaluru, First Published Oct 30, 2018, 5:51 PM IST

ನವದೆಹಲಿ(ಅ.26)   827 ಪೋರ್ನ್​ ವೆಬ್​ಸೈಟ್​ಗಳಿಗೆ ಬ್ಯಾನ್ ಪಟ್ಟಿ ನೀಡಲಾಗಿದೆ. ಉತ್ತರಾಖಂಡ್ ಹೈಕೋರ್ಟ್ ಆದೇಶದ ಮೇರೆಗೆ ಅಶ್ಲೀಲತೆ ಹೊಂದಿರುವ 827 ಪೋರ್ನ್​ ವೆಬ್​ಸೈಟ್​ಗಳನ್ನು ಬ್ಲಾಕ್​ ಮಾಡುವಂತೆ ಇಂಟರ್​ನೆಟ್​ ಸೇವೆ ಒದಗಿಸುವ ಕಂಪನಿಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ಪ್ರಮುಖ ಬ್ರೌಸರ್ ಗಳನ್ನು ಹೊರತುಪಡಿಸಿ ಮತ್ತೊಂದು ಕಡೆ ಓಪನ್ ಆಗುತ್ತಿರುವುದನ್ನು ಹಲವರು ಬಲ್ಲವರಾಗಿದ್ದರು. ಹಾಗಾದರೆ ಕಟ್ಟುನಿಟ್ಟಿನ  ಆದೇಶ ಪಾಲನೆ ಯಾಕಾಗುತ್ತಿಲ್ಲ?

ಇದೇ ಮೊದಲಲ್ಲ:  2015ರ  ಆಗಸ್ಟ್ ನಲ್ಲಿಯೇ ಸುಪ್ರೀಂ ಕೋರ್ಟ್ ಆದೇಶದಂತೆಯೇ ಪೋರ್ನ್ ವೆಬ್ ತಾಣಗಳನ್ನು ಭಾರತದಲ್ಲಿ ಬಂದ್ ಮಾಡಲು ಟೆಲಿಕಾಂ ಇಲಾಖೆ ಮುಂದಾಗಿತ್ತು. ಮಕ್ಕಳನ್ನು ಫೋರ್ನೋಗ್ರಫಿಗೆ ಬಳಸಿಕೊಳ್ಳಲಾಗುತ್ತಿದೆ, ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರ ಮಾರಾಟ ಜಾಲವೇ ದೇಶದಲ್ಲಿ ಹುಟ್ಟಿಕೊಂಡಿದೆ ಎಂಬ ಆರೋಪಗಳು ಕೇಳಿ ಬಂದ ನಂತರ ಕೇಂದ್ರ ಸರಕಾರ ಎಲ್ಲ ಸೈಟ್ ಗಳ ನಿಷೇಧಕ್ಕೆ ಮುಂದಾಗಿತ್ತು. ಆದರೆ ಪರ-ವಿರೋಧದ ಅಭಿಪ್ರಾಯದ ನಂತರ ಕೆಲವು ಸೈಟ್ ಗಳ ನಿಷೇಧ ಮಾಡಲಾಗಿತ್ತು.

ಪೋರ್ನ್.. ಅಲ್ಲಿ ಓಪನ್ ಆಗದಿದ್ದರೇನು.. ಇಲ್ಲಿ ಆಗ್ತಿದೆ!

ಈ ಬಾರಿ ಏನು ಕಾರಣ: ಅಶ್ಲೀಲ ಚಿತ್ರ ನೋಡಿ ಪ್ರಭಾವಿತರಾದ ವ್ಯಕ್ತಿ ಉತ್ತರಾಖಂಡದ ರಾಜಧಾನಿ ಡೆಹರಾಡೂನ್ ನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ-ವಿಚಾರಣೆ ನಂತರ ಪೋರ್ನ್ ಬ್ಯಾನ್ ಮಾಡಲು ನ್ಯಾಯಾಲಯ ಹೇಳಿತ್ತು.

ನಾವು ಹೆದರಲ್ಲ: ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದ ಅಶ್ಲೀಲ ವೆಬ್ ತಾಣವೊಂದು ಭಾರತದ ಬಳಕೆದಾರರಿಗೆ ಸಂಬಂಧಿಸಿ ಟ್ವೀಟ್ ಮಾಡಿ ಲಿಂಕ್ ವೊಂದನ್ನು ಕೂಡ ಶೇರ್ ಮಾಡಿ ಇಲ್ಲಿಗೆ ಪ್ರವೇಶ ಮಾಡಬಹುದು ಎಂದು ಸೂಚಿಸಿತ್ತು. ಈ ಬಗ್ಗೆ ಮಾತನಾಡಿದ್ದ ಪೋರ್ನ್ ಹಬ್ ಸಂಸ್ಥೆಯ ಉಪಾಧ್ಯಕ್ಷ ಕೋರಿ ಪ್ರೈಸ್, ಸರಕಾರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕುವ ಬದಲು ನಮ್ಮನ್ನು ಬಲಿಪಶು ಮಾಡುತ್ತಿದೆ ಎಂದು ಆರೋಪಿಸಿದ್ದರು.

ಪೋರ್ನ್ ಬ್ಯಾನ್, ಸೋಶಿಯಲ್ ಮೀಡಿಯಾ ರಿಯಾಕ್ಷನ್.. ಅಬ್ಬಬ್ಬಾ!

ಪರಿಹಾರ ಸೂತ್ರ ಏನು?: ಭಾರತದಲ್ಲಿ ಆಯ್ಕೆ ಸ್ವಾತಂತ್ರ್ಯ ಮುಕ್ತವಾಗಿದೆ. ಹಾಗಾಗಿ ಒತ್ತಡದ ಮೂಲಕ ಬ್ಯಾನ್ ಮಾಡುವುದು ಇಂದಿನ ಜಾಯಮಾನದಲ್ಲಿ ಅಸಾಧ್ಯ. ಯುವ ಜನರನ್ನು ಇದು ದಾರಿ ತಪ್ಪಿಸುತ್ತಿದೆ ಎಂಬುದೇ ಸತ್ಯವಾಗಿದ್ದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ತಜ್ಞರು ಹೇಳುತ್ತಾರೆ.

 

Follow Us:
Download App:
  • android
  • ios