Asianet Suvarna News Asianet Suvarna News

ವರ ಟಾಯ್ಲೆಟ್‌ ಸೆಲ್ಫೀ ತೆಗೆಸಿಕೊಂಡರೆ ವಧುವಿನ ಖಾತೆಗೆ 51 ಸಾವಿರ ರು.!

ವರ ಟಾಯ್ಲೆಟ್‌ ಸೆಲ್ಫೀ ತೆಗೆಸಿಕೊಂಡರೆ ವಧುವಿನ ಖಾತೆಗೆ 51 ಸಾವಿರ ರು.!| ಮಧ್ಯಪ್ರದೇಶ ಸರ್ಕಾರದ ವಿಶಿಷ್ಟಯೋಜನೆ

In Madhya Pradesh a loo selfie ritual before wedding rites
Author
Bangalore, First Published Oct 11, 2019, 9:31 AM IST

ಭೋಪಾಲ್‌[ಅ.11]: ಮದುವೆಗೂ ಮುನ್ನ ವಧು- ವರರು ಸುಂದರ ಸ್ಥಳಗಳಲ್ಲಿ ಫೋಟೋಶೂಟ್‌ ಮಾಡಿಸಿಕೊಳ್ಳುತ್ತಾರೆ. ಆದರೆ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮದುವೆ ಗಂಡು ಟಾಯ್ಲೆಟ್‌ನಲ್ಲಿ ನಿಂತು ಸೆಲ್ಫೀ ಅಥವಾ ಪೋಟೋ ತೆಗೆಸಿಕೊಳ್ಳಬೇಕು. ಹೀಗೆ ಮಾಡಿದರೆ ಸರ್ಕಾರ ಮುಖ್ಯಮಂತ್ರಿ ಕನ್ಯಾವಿವಾಹ್‌/ ನಿಖಾ ಯೋಜನೆಯ ಅಡಿ ವಧುವಿನ ಖಾತೆಗೆ 51 ಸಾವಿರ ರು. ಜಮಾ ಮಾಡುವ ಯೋಜನೆ ರೂಪಿಸಿದೆ.

ಅಧಿಕಾರಿಗಳು ಪ್ರತಿ ಮನೆಗೂ ಹೋಗಿ ಶೌಚಾಲಯ ಇದೆಯೇ ಎಂದು ತಪಾಸಣೆ ಮಾಡಲು ಸಾಧ್ಯವಾಗದೇ ಇರುವ ಕಾರಣಕ್ಕೆ ವರನಿಂದ ಟಾಯ್ಲೆಟ್‌ ಸೆಲ್ಫಿಗೆ ಬೇಡಿಕೆ ಇಟ್ಟಿದ್ದಾರೆ. ಇದು ಕೇವಲ ಗ್ರಾಮೀಣ ಭಾಗಗಳಿಗಷ್ಟೇ ಅಲ್ಲ. ಭೋಪಾಲ್‌ ನಗರ ಪಾಲಿಕೆ ಕೂಡ ಇದೇ ಕ್ರಮ ಕೈಗೊಂಡಿದೆ.

ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ವಧುವಿನ ಖಾತೆಗೆ ಸರ್ಕಾರ ಮೂರು ಕಂತಿನಲ್ಲಿ ಒಟ್ಟು 51 ಸಾವಿರ ರು. ನೀಡಲಿದೆ. ಇದರಲ್ಲಿ 43 ಸಾವಿರ ರು.ಗಳನ್ನು ಬ್ಯಾಂಕ್‌ ಖಾತೆಗೆ ಹಾಕಲಾಗುತ್ತದೆ. 5 ಸಾವಿರ ರು.ನ ಮದುವೆ ಉಡುಗೊರೆ ಹಾಗೂ ಮದುವೆಯ ದಿನದಂದು 3 ಸಾವಿರ ರು. ನಗದು ಹಣವನ್ನು ನೀಡಲಾಗುತ್ತದೆ.

Follow Us:
Download App:
  • android
  • ios