news
By Suvarna Web desk | 10:10 PM March 13, 2018
ಸನದಿ ಎಂಬ ಪ್ರಮಾಣಿಕ  ದುರದೃಷ್ಟವಂತ ರಾಜಕಾರಣಿ : ಪ್ರಶಂಸೆ ಸಿಕ್ಕರೂ  ಸ್ಥಾನಮಾನ ಸಿಗುತ್ತಿಲ್ಲ

Highlights

2008ರಲ್ಲಿ ಒಮ್ಮೆ ಸ್ವತಃ ಸೋನಿಯಾ ಗಾಂಧಿ ನಿಮ್ಮನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ಮಾಡುತ್ತೇವೆ ಎಂದು ಹೇಳಿ 24 ಗಂಟೆಯೊಳಗೆ ಮಾರ್ಗರೇಟ್ ಆಳ್ವಾ ಹೆಸರು ಪ್ರಕಟವಾಗಿತ್ತಂತೆ

ಮೂರು ಬಾರಿ ಸಂಸದರಾಗಿದ್ದ ಪ್ರೊ. ಐ ಜಿ ಸನದಿ ಈಗಲೂ ಹುಬ್ಬಳ್ಳಿಯಿಂದ ದೆಹಲಿಗೆ ಬರುವುದು ಗೋವಾ ಎಕ್ಸ್‌ಪ್ರೆಸ್

ರೈಲಿನಲ್ಲಿ. ದಿಲ್ಲಿಯಲ್ಲಿ ಸಿಂಪಲ್ ಆಗಿ ರಿಕ್ಷಾದಲ್ಲೇ ಓಡಾಡುವ ಸನದಿ ಸಾಹೇಬರು ಎಷ್ಟೇ ಸೋನಿಯಾ, ರಾಹುಲ್ ಗಾಂಧಿ ಮನೆಗೆ ಎಡತಾಕಿದರೂ ‘ಆಪ್ ತೋ ಬಹುತ್ ಹಿ ಸೀದೇ ಸಾದೆ ಹೋ’ ಎಂದು ಪ್ರಶಂಸೆ ಮಾಡುತ್ತಾರೆಯೇ ವಿನಃ ಯಾವುದೇ ಸ್ಥಾನಮಾನ ಮಾತ್ರ ಕೊಡೋದಿಲ್ಲವಂತೆ. 2008ರಲ್ಲಿ ಒಮ್ಮೆ ಸ್ವತಃ ಸೋನಿಯಾ ಗಾಂಧಿ ನಿಮ್ಮನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ಮಾಡುತ್ತೇವೆ ಎಂದು ಹೇಳಿ 24 ಗಂಟೆಯೊಳಗೆ ಮಾರ್ಗರೇಟ್ ಆಳ್ವಾ ಹೆಸರು ಪ್ರಕಟವಾಗಿತ್ತಂತೆ. ಆದರೆ ಸ್ವಲ್ಪವೂ ಬೇಸರಿಸಿಕೊಳ್ಳದೆ ಓಡಾಡುವ ಸನದಿ ಸಾಹೇಬರು,‘ಅಯ್ಯೋ ಬಿಡ್ರಿ, ನಾನೊಬ್ಬ ಕೋರ್ಟ್‌ನಲ್ಲಿ ಬೇಲಿಫ್ ಆಗಿದ್ದ ತಂದೆಯ ಮಗ. ಪಕ್ಷ ನನಗೆ ಏನೆಲ್ಲ ಕೊಟ್ಟಿದೆ’ ಎಂದು ಹೇಳಿ ನಗುತ್ತಾರೆ. ನೆಹರು ಅವರನ್ನು ನೋಡಿದ್ದ ಸನದಿ, ಇಂದಿರಾ, ರಾಜೀವ್, ಸೋನಿಯಾ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು. ಕಳೆದ ತಿಂಗಳು ರಾಹುಲ್ ಭಾಷಣವನ್ನು ಕೂಡ ಶಿರಹಟ್ಟಿಯಲ್ಲಿ ಭಾಷಾಂತರ ಮಾಡಿದ್ದಾರೆ.

Show Full Article


Recommended


bottom right ad