Asianet Suvarna News Asianet Suvarna News

ಬೇಬಿ ಪೌಡರ್‌ನಿಂದ ಕ್ಯಾನ್ಸರ್, ಮಹಿಳೆಗೆ ಸಿಕ್ತು 200 ಕೋಟಿ ರೂ. ಪರಿಹಾರ!

ಬೇಬಿ ಪೌಡರ್‌ನಿಂದ ಶ್ವಾಸಕೋಶದ ಕ್ಯಾನ್ಸರ್| ಬೇಬಿ ಪೌಡರ್ ಕಂಪೆನಿ ವಿರುದ್ಧ ಕೇಸ್ ದಾಖಲಿಸಿದ ಮಹಿಳೆ| ಎರಡು ವರ್ಷಗಳ ನ್ಯಾಯಾಂಗ ಹೋರಾಟ ನಡೆಸಿದ ಮಹಿಳೆಗೆ ಸಿಕ್ತು ಜಯ| 200 ಕೋಟಿ ರೂ. ಪರಿಹಾರ ನೀಡುವಂತೆ ಕಂಪೆನಿಗೆ ಆದೇಶಿಸಿದ ಕೋರ್ಟ್

Idaho woman wins 40 million dollar in lawsuit over baby powder linked cancer
Author
Bangalore, First Published Oct 2, 2019, 12:54 PM IST

ಲಾಸ್ ಏಂಜಲೀಸ್[ಅ.02]: ಲಾಸ್ ಏಂಜಲೀಸ್ ನ ನ್ಯಾಯಾಲಯವೊಂದರಲ್ಲಿ 71 ವರ್ಷದ ಮಹಿಳೆ, ನ್ಯಾನ್ಸಿ ಕ್ಯಾಬಿಬಿ ಎಂಬಾಕೆಗೆ ಬಹುದೊಡ್ಡ ಜಯ ಲಭಿಸಿದೆ. ಕಳೆದೆರಡು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ ನ್ಯಾನ್ಸಿ ವಿರುದ್ಧ ಪ್ರಸಿದ್ಧ ಫಾರ್ಮಾಸ್ಯುಟಿಕಲ್ ಹಾಗೂ ಗ್ರಾಹಕರ ಫೇವರಿಟ್ ಪ್ರಾಡಕ್ಸ್ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಗೆ ಹಿನ್ನಡೆಯಾಗಿದೆ. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ 40.3 ಮಿಲಿಯನ್ ಡಾಲರ್ ಅಂದರೆ ಸುಮಾರು 2,86,00,00,000[286 ಕೋಟಿ] ರೂಪಾಯಿ ಮೊತ್ತವನ್ನು ನ್ಯಾನ್ಸಿಗೆ ಪರಿಹಾರವಾಗಿ ನೀಡಬೇಕೆಂದು ಕಂಪೆನಿಗೆ ಅದೇಶಿಸಿದೆ.

ಭಯವೇ ನಮ್ಮನ್ನು ಬದುಕಿಸುವ ಸಂಜೀವಿನಿ ನೋಡೋಣ, ದೇವರಿದ್ದಾನೆ!

2017ರಲ್ಲಿ ಕಂಪೆನಿ ವಿರುದ್ಧ ಕೇಸ್ ದಾಖಲು

ನ್ಯಾನ್ಸಿ ಕಂಪೆನಿ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ್ದರು. ತಮ್ಮ ದೂರಿನಲ್ಲಿ ಕಂಪೆನಿಯ 'ಬೇಬಿ ಟಾಕಮ್ ಪೌಡರ್' ಬಳಸಿ ತನಗೆ ಮೆಸೊಥೆಲಿಯೋಮಾ[ಶ್ವಾಸಕೋಶದ ಕ್ಯಾನ್ಸರ್] ಉಂಟಾಗಿದೆ ಎಂದು ತಿಳಿಸಿದ್ದರು. 2017ರಲ್ಲಿ ನ್ಯಾನ್ಸಿಗೆ ತಾನು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಚಾರ ಗೊತ್ತಾಗಿದೆ. ಇದಕ್ಕಾಗಿ ಸರ್ಜರಿ, ಕೀಮೋಥೆರಪಿ, ರೇಡಿಯೇಶನ್ ಹಾಗೂ ಇಮ್ಯುನೋಥೆರಪಿ ಕೂಡಾ ಮಾಡಿಸಿಕೊಂಡಿದ್ದಾರೆ.

ಖಾಕಿಯೊಳಗಿನ ತಾಯಿಕರುಳು: ಕ್ಯಾನ್ಸರ್ ರೋಗಿಗಳ ವಿಗ್‌ಗಾಗಿ ತಲೆ ಬೋಳಿಸಿದಳು!

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಶುಕ್ರವಾರದಂದು ನ್ಯಾನ್ಸಿ ಪರ ತೀರ್ಪು ಪ್ರಕಟಿಸಿದೆ. ಹೀಗಿದ್ದರೂ ನ್ಯಾನ್ಸಿಗೆ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಿದ್ದು ಹೇಗೆ ಎಂಬ ವಿಚಾರ ಈವರೆಗೂ ಬಯಲಾಗಿಲ್ಲ. ಆದರೆ ಎಲ್ಲಾ ಸಾಕ್ಷಿಗಳೂ ನ್ಯಾನ್ಸಿ ಪರವಾಗಿದ್ದವು. ಇನ್ನು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿ ವಿರುದ್ಧ ಇಂತಹ ಆರೋಪ ಕೇಳಿ ಬಂದಿದ್ದು ಇದು ಮೊದಲಲ್ಲ. ಕಂಪೆನಿಯ ಬೇಬಿ ಪೌಡರ್ ನಿಂದ ಶ್ವಾಸಕೋಶ ಹಾಗೂ ಅಂಡಾಶಯ ಕ್ಯಾನ್ಸರ್ ಉಂಟಾಗಿದೆ ಎಂದು 14 ಸಾವಿರಕ್ಕೂ ಅಧಿಕ ದೂರುಗಳು ಕೇಳಿ ಬಂದಿವೆ.

ಜಾನ್ಸನ್ & ಜಾನ್ಸನ್ ಬೇಬಿ ಶಾಂಪೂವಿನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ?

Follow Us:
Download App:
  • android
  • ios