Asianet Suvarna News Asianet Suvarna News

ರಾಜ್ಯ ಸರ್ಕಾರದ ವಿರುದ್ಧ  ರೋಹಿಣಿ ಮತ್ತೆ ಕಾನೂನು ಸಮರ?

ಕಳೆದ ಮೂರು ದಿನಗಳಲ್ಲಿ ರಾಜ್ಯ ಸರಕಾರ ವರ್ಗಾವಣೆ ಪರ್ವ ನಡೆಸಿದೆ. ಇದೀಗ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿರುವುದು ಸಹಜವಾಗಿಯೇ ಅನೇಕ ಪ್ರಶ್ನೆ ಎತ್ತಿದೆ.

ias officer rohini sindhuri will start legal battle against Karnataka Govt
Author
Bengaluru, First Published Feb 22, 2019, 5:52 PM IST

ಬೆಂಗಳೂರು[ಫೆ.22] ರೋಹಿಣಿ ಸಿಂಧೂರಿ ಅವರನ್ನು ಹಾಸನ ಜಿಲ್ಲಾಧಿಕಾರಿ ಸ್ಥಾನದಿಂದ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದರೂ ರೋಹಿಣಿ ಕಾನೂನು ಹೋರಾಟ ಆರಂಭ ಮಾಡುತ್ತಾರೋ ಎಂಬ ಮಾತು ಕೇಳಿ ಬಂದಿದೆ.

ಈ ಹಿಂದೆ ಸಹ ಸರ್ಕಾರದ ವರ್ಗಾವಣೆ ವಿರುದ್ಧ ರೋಹಿಣಿ ನ್ಯಾಯಾಲಯದ ಮೆಟ್ಟಿಲು ಏರಿ ಜಯ ಕಂಡಿದ್ದರು.  2017 ಜುಲೈ 14 ರಿಂದ ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.

ಖಡಕ್ ಡಿಸಿ, ಜನ ಮೆಚ್ಚಿದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ

ಅವಧಿ ಪೂರ್ಣವಾಗುವ ಮುನ್ನ ವರ್ಗಾವಣೆ ಮಾಡಿದ್ದಕ್ಕೆ ಕಾನೂನು ಹೋರಾಟ ಮಾಡಿ ರೋಹಿಣಿ ಗೆದ್ದಿದ್ದರು. 2018 ರ ‌ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಅಂದರೆ ಕಳೆದ ವರ್ಷ ಫೆಬ್ರವರಿ 22 ರಂದು  ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ  ಸರ್ಕಾರದ  ವರ್ಗಾವಣೆ ಆದೇಶವನ್ನು ಚುನಾವಣಾ ಆಯೋಗ ರದ್ದು ಮಾಡಿತ್ತು.

ಸಚಿವ ರೇವಣ್ಣ ಬೆಂಬಲಿಗನಿಗೆ ಡಿಸಿ ರೋಹಿಣಿ ಕೊಟ್ಟ ‘ಮರಳೇಟು’

ಮತ್ತೆ ಮಾರ್ಚ್ 5 ರಂದು ಹಳೆ ಆದೇಶ ರದ್ದು ಮಾಡಿ ಮತ್ತೆ ಮಾರ್ಚ್ 7ರಂದು ಮತ್ತೊಮ್ಮೆ ವರ್ಗಾವಣೆ ಆದೇಶ ನೀಡಲಾಗಿತ್ತು. ಸರ್ಕಾರದ ವರ್ಗಾವಣೆ ಪ್ರಶ್ನಿಸಿ  ಕಾನೂನು ಹೋರಾಟಕ್ಕಿಳಿದಿದ್ದ ರೋಹಿಣಿ ಜೂನ್ 25 ರಂದು ಹಾಸನ ಡಿಸಿಯಾಗಿ ಮತ್ತೆ ಬಂದಿದ್ದರು.

 

 

Follow Us:
Download App:
  • android
  • ios