Asianet Suvarna News Asianet Suvarna News

‘ನಾನು ನನ್ನ ಮಗಳನ್ನು ಬದುಕುಳಿಸಬೇಕು, ದಯವಿಟ್ಟು ಸಹಾಯ ಮಾಡಿ’

ಈಕೆ ಕ್ಯಾನ್ಸರನ್ನು ಸೋಲಿಸಬಹುದು, ಆದರೆ ಒಬ್ಬಂಟಿಯಾಗಿ ಸಾಧ್ಯವಿಲ್ಲ, ಇವಳಿಗೆ ನೆರವಿನ ಅಗತ್ಯವಿದೆ, ಸಹೃದಯರಿಂದ ಹಣಕಾಸು ನೆರವು ಸಿಕ್ಕರೆ ಈಕೆ ಬದುಕುಳಿಯಬಹುದು.

#ಹರಿಣಿಗೆ_ಸಹಾಯಮಾಡೋಣ #HelpHarini

I Want To Save My Daughter Please Help

‘ಈ ಮದ್ದನ್ನು ಸೇವಿಸಿದರೆ ನಿನ್ನ ಕೂದಲು ಉದುರುವಿಕೆ ನಿಲ್ಲುತ್ತದೆ, ಆ ಬಳಿಕ ನೀನು ನುಣುಪಾಗಿರುವ, ಸೊಂಟದವರೆಗೆ ಉದ್ದವಿರುವ ಕೂದಲನ್ನು ಹೊಂದಬಹುದು’- ಈ ಮಾತುಗಳನ್ನು ಕೇಳಿದಾಗ,  ಆಸ್ಪತ್ರೆಯ ಹಾಸಿಗೆ ಮೇಲೆ ಬಿದ್ದಿರುವ ಕೂದಲುಗಳನ್ನು ಗಮನಿಸಿ ಮರುಕಪಡುವ, ನನ್ನ ಮಗಳು ನಿರಾಳಳಾಗುತ್ತಾಳೆ.

ನೀಳವಾದ ಕೂದಲು ಆಕೆಗೆ ಬಹಳ ಇಷ್ಟ. ಆಲ್ಬಂ ಫೋಟೋಗಳಲ್ಲಿ ನನ್ನ ನೀಳವಾದ ಕೇಶರಾಶಿಯನ್ನು ನೋಡಿದಾಗ ಆಕೆ ಯಾವಾಗಲೂ, ‘ಅಮ್ಮ ನಾನು ಕೂಡಾ ಬೇಗ ದೊಡ್ಡವಳಾಗಬೇಕು, ನಿನ್ನಂತೆಯೇ ಉದ್ದುದ್ದವಾದ ಕೂದಲನ್ನು ಹೊಂದಬೇಕು’ ಎಂದು ಹೇಳುತ್ತಿದ್ದಳು.

ಹರಿಣಿಗೀಗ ಬರೇ 9 ವರ್ಷ ಪ್ರಾಯ. ಅವಳಿಗೆ ಬ್ಲಡ್ ಕ್ಯಾನ್ಸರ್ ಇದೆ, ಆದರೆ ಅದರ ಬಗ್ಗೆ ಆಕೆಗೆ ಗೊತ್ತಿಲ್ಲ. ಜ್ವರದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗ್ಗಾಗೆ ಭೇಟಿ ನೀಡುತ್ತಿದ್ದೇವೆ ಎಂದು ಆಕೆ ತಿಳಿದುಕೊಂಡಿದ್ದಾಳೆ.

I Want To Save My Daughter Please Help

22 ಬಾರಿ ಕೀಮೋಥೆರಪಿಯಾಗಿದ್ದರೂ, ಕ್ಯಾನ್ಸರ್ ಮಾರಿ ಆಕೆಯನ್ನು ಬಿಟ್ಟುಹೋಗಿಲ್ಲ. ಇನ್ನೂ 8 ಬಾರಿ ಅವಳು ಆ ಚಿಕಿತ್ಸೆಗೊಳಗಾಬೇಕಾಗಿದೆ.. ಈಗ ನನ್ನ ಬಳಿಯಿರುವುದು ಬರೇ ರೂ.10 ಮಾತ್ರ, ಆದರೆ ಆಕೆಯ ಜೀವವನ್ನುಳಿಸಬೇಕಾದರೆ ಕನಿಷ್ಠ ₹10 ಲಕ್ಷವಾದರೂ ಬೇಕು. ನನಗೆ ಬಹಳ ತುರ್ತಾಗಿ ಹಣದ ಅಗತ್ಯವಿದೆ, ಏಕೆಂದರೆ ನಾನವಳನ್ನು ಕಳಬಯಸುವುದಿಲ್ಲ, ನನಗಿರುವ ಒಬ್ಬಳೇ ಮಗು ಅವಳು, ಅವಳೇ ನನ್ನ ಸರ್ವಸ್ವ.. ದಯಮಾಡಿ ಅವಳನ್ನುಳಿಸಲು ನನಗೆ ಸಹಾಯ ಮಾಡಿ.

ನಾನು ಜೆನಿಫರ್,  ಹರಿಣಿಯ ತಾಯಿ.  ನಾನು ನನ್ನ ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಗೃಹಿಣಿಯಾಗಿರುವ ನನ್ನ ಪತಿ ಕೆಲ ತಿಂಗಳುಗಳ ಹಿಂದೆವರೆಗೆ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಸುಮಾರು ₹8000 ಆದಾಯ ಬರುತ್ತಿತ್ತು. ಆದರೆ ನಿರಂತರ ರಜೆಗಳ ಕಾರಣದಿಂದ  ಅವರು ಇದ್ದ ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ನಾನು ಹರಿಣಿಯ ಆರೈಕೆಯಲ್ಲಿ ನಿರತಳಾಗಿದ್ದರೆ, ಅವರು ಬಿಲ್ ಪಾವತಿಸಲು, ಮದ್ದು ಖರೀದಿಸಲು ಹಣ ಸಂಗ್ರಹಿಸಲು ಹರಸಾಹಸ ಪಡುತ್ತಿದ್ದರು.

I Want To Save My Daughter Please Help

ಮಾಡಿದ್ದ ಉಳಿತಾಯ, ಆಪ್ತರಿಂದ ಪಡೆದ ಸಾಲದ ಹಣವೆಲ್ಲವೂ ಕಳೆದ 7 ತಿಂಗಳುಗಳಲ್ಲಿ ಕರಗಿಹೋಗಿದೆ. ಈಗ ನನ್ನ ಬಳಿ ಉಳಿದಿರುವುದು ಏನೂ ಇಲ್ಲ; ನನ್ನ ಮಗಳ ಜೀವನ ಈಗ ಚಿಕಿತ್ಸೆಯ ಮೇಲೆ ಅವಲಂಬಿತವಾಗಿದೆ, ಹಾಗೂ ಚಿಕಿತ್ಸೆಗೆ ದೊಡ್ಡ ಮೊತ್ತದ ಹಣದ ಅಗತ್ಯವಿದೆ. ಮುಂದೇನು ಮಾಡಬೇಕೆಂದು ನನಗೆ ತೋಚುತ್ತಿಲ್ಲ, ಮಗಳನ್ನು ಸಾಯಲು ಬಿಡಲು ಸಾಧ್ಯವೇ?

2017ರ ಏಪ್ರಿಲ್’ನ  ದಿನ ನನಗಿನ್ನೂ ನೆನಪಿದೆ. ಜ್ವರ ಹಾಗೂ ಕೆಮ್ಮು ಕಡಿಮೆಯಾಗದ ಕಾರಣ ನಾವು ಹರಿಣಿಯನ್ನು ಕರೆದುಕೊಂಡು ಆಸ್ಪತ್ರೆಗೆ ಧಾವಿಸಿದ್ದೆವು. ಆದರೆ ನಾವೀಗ ಅನುಭವಿಸುತ್ತಿರುವ ಭಯ-ಚಿಂತೆಯ ಮುಂದೆ ಆಂದಿನ ನೋವು ಏನೇನೂ ಅಲ್ಲ. ಮೂಳೆ-ಮಜ್ಜೆಯ ಪರೀಕ್ಷೆಯ ಬಳಿಕ ಆಕೆಗೆ ಬ್ಲಡ್ ಕ್ಯಾನ್ಸರ್ ಇದೆ ಎಂದು ತಿಳಿದಾಗ ನಮ್ಮ ಉಸಿರೇ ನಿಂತುಹೋದಂತಾಗಿತ್ತು. ನಾನೂ ಆಕೆಯ ಆರೈಕೆ ಮಾಡಬಹುದು, ಆದರೆ ಚಿಕಿತ್ಸೆ ಮತ್ತು ಅದರ ವೆಚ್ಚ..?  ಪ್ರತಿ ಪರಿಚಯಸ್ಥರ ಬಳಿ ಹಣವನ್ನು ಬೇಡಿ ಈವರೆಗೆ ಚಿಕಿತ್ಸೆ ಕೊಡಿಸಿದ್ದಾಯಿತು. ಆದರೆ ಕ್ಯಾನ್ಸರ್ ಎಂಬುವುದು ಮಹಾ ಪೀಡಕ. ನನ್ನ ಮಗಳ ದೇಹವನ್ನು ತೊರೆಯಲು ಅದಕ್ಕೆ ಇನ್ನೂ ಹಣದ ಅಗತ್ಯವಿದೆ. ಅದಕ್ಕಾಗಿ ನಾನೀಗ ನನಗೆ ಪರಿಚಿತರಲ್ಲದವರ, ನನ್ನ ವ್ಯಥೆಯನ್ನು ಓದಿದವರ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದೇನೆ. 

ನನ್ನ ಕಣ್ಮುಂದೆ ನನ್ನ ಮಗಳಿಗೆ ಏನಾಗುತ್ತದೆಯೋ, ಅದು ನನಗಾಗುತ್ತಿರುವ ಅನುಭವ. ಪ್ರತಿ ಸಿರೆಂಜ್ ಹಾಗೂ ಪ್ರತಿ ಪೈಪ್ ನನ್ನ ದೇಹದೊಳಗೆ ತುರುಕಿಸಿದಂತಹ ನೋವು.  ಆಕೆಯ ರಕ್ತ ಪ್ರಮಾಣವನ್ನು ಪ್ರತಿ ವಾರ ಪರೀಕ್ಷಿಸಬೇಕೆಂದು ವೈದ್ಯರು ತಿಳಿಸಿದ್ದಾರೆ. ತಿಂಗಳುಗಟ್ಟಲೇ ಇಷ್ಟೆಲ್ಲಾ ನೋವುಗಳನ್ನು ಅನುಭವಿಸಿದ ಬಳಿಕ, ಹರಿಣಿ ಈಗ ತನ್ನ ಕೈಯನ್ನು ತಾನೇ ಮುಂದೆ ಚಾಚುತ್ತಾಳೆ…ಸೂಜಿ ಚುಚ್ಚಿಸಲು. ಕ್ಯಾನ್ಸರ್ ರೋಗವು ನೀಡಿರುವ ಈ ಜೀವನಕ್ಕೆ ಹೊಂದಿಕೊಂಡಿರುವ ಆಕೆಯ ಬಗ್ಗೆ ನಾನು ಹೆಮ್ಮೆ ಪಡಲೇ ಅಥವಾ ದುಖ:ಪಡಲೇ ಎಂದು ಅರ್ಥವಾಗುತ್ತಿಲ್ಲ…

I Want To Save My Daughter Please Help

ಅವಳ ಮಟ್ಟಿಗೆ ಕೀಮೋಥೆರಪಿ ಚಿಕಿತ್ಸೆಯು ಬಹಳ ಕ್ರೂರವಾಗಿತ್ತು.  2 ಪೈಪ್’ಗಳನ್ನು ಆಕೆಯ ಎದೆಯೊಳಗೆ ನೇರವಾಗಿ ಚುಚ್ಚಲಾಗಿತ್ತು. ಹಣದ ಕೊರತೆಯಿದ್ದುದರಿಂದ ಆ ಪುಟ್ಟ ಬಾಲೆಗೆ ಅನಸ್ತೇಶಿಯಾ ಕೊಡಿಸಲು ಕೂಡಾ ನಮ್ಮಿಂದ ಸಾಧ್ಯವಾಗಲಿಲ್ಲ. ಅದನ್ನು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತಿದೆ.  ಪ್ರತಿಯೊಂದು ಅನಸ್ತೇಶಿಯಾಕ್ಕೆ ₹8000 ಬೇಕು.  ನನ್ನ ಮಗುವು ಅನುಭವಿಸುತ್ತಿರುವ ನರಕಯಾತನೆಯನ್ನು ನೋಡಿದಾಗ ಹೃದಯವೇ ಒಡೆದುಹೋಗುತ್ತಿದೆ.

 ಪ್ರತಿ ಕೀಮೋಥೆರಪಿ ಬಳಿಕ ಆಕೆಯ ಕೂದಲುಗಳು ಉದುರುತ್ತಿವೆ, ಸೇವಿಸಿದ ಆಹಾರವೆಲ್ಲಾ ವಾಂತಿಯಾಗುತ್ತಿದೆ. ಆಕೆಯ ಹಲ್ಲುಗಳೆಲ್ಲವೂ ಕಂದು ಬಣ್ಣಕ್ಕೆ ತಿರುಗಿವೆ, ಹೊಟ್ಟೆಯೂ ಉಬ್ಬಲು ಆರಂಭಿಸಿದೆ. ಅವಳು ಆ ತರಹ ಕಾಣುತ್ತಿರುವುದು ಆಕೆಯಿಂದಲೇ ನೋಡಲಾಗುತ್ತಿಲ್ಲ… ನಾನೇಕೆ ಇಷ್ಟು ಕೆಟ್ಟದ್ದಾಗಿ ಕಾಣುತ್ತಿದ್ದೇನೆಂದು ಆಕೆ ನನ್ನನ್ನು ಪ್ರಶ್ನಿಸುತ್ತಾಳೆ. ನೀನಿನ್ನು ಸುಂದರವಾದ ಏಂಜೆಲ್ ತರಹ ಕಾಣುತ್ತಿರುವೆ ಎಂದು ಹೇಳಿ ಸಂತೈಸಲು ನಾನು ಪ್ರಯತ್ನಿಸುತ್ತೇನೆ…

ಪ್ರತಿ ಬಾರಿಯು ಆಕೆಯ  ಚಿಕಿತ್ಸೆಗೆ ಬಳಸುವ 5 ಎಂಎಲ್’ನ ಔಷಧಿಯ ಬೆಲೆ ಬರೋಬ್ಬರೀ ₹49,400. ಇನ್ನೂ 8 ಕಿಮೋಥೆರಪಿಗಳು ನಡೆಸಬೇಕೆಂದು ವೈದ್ಯರು ಹೇಳಿದ್ದಾರೆ.  ಈವರೆಗೆ ಸುಮಾರು ₹14 ಲಕ್ಷ ರೂ.ವನ್ನು ನಾವು ಖರ್ಚು ಮಾಡಿದ್ದೇವೆ. ಇನ್ನು ಖರ್ಚು ಮಾಡಲು ಒಂದು ನಯಾಪೈಸೆಯೂ ಉಳಿದಿಲ್ಲ ಎಂದು ಹೇಳಲು ನನಗೀಗ ನಾಚಿಕೆಯಾಗುತ್ತಿಲ್ಲ. ನನಗಿರುವವಳು ಒಬ್ಬಳೇ ಮಗಳು, ಇತರ ಅಮ್ಮಂದಿರ ಹಾಗೇ, ನನಗವಳೇ ಸರ್ವಸ್ವ. ನಾನವಳನ್ನು ಬದುಕುಳಿಸಬಯಸುತ್ತೇನೆ. ಅದಕ್ಕೆ ದಯಾಮಾಡಿ ನನಗೆ ಸಹಾಯಮಾಡಿ. ನಾನು ನಿಮಗೆ ಚಿರ ಋಣಿಯಾಗಿರುತ್ತೇನೆ.

ನಾನು ನಾಳೆ ಮತ್ತೊಮ್ಮೆ ಆಕೆಯ ರಕ್ತ ಪರೀಕ್ಷೆ ಮಾಡಬೇಕು. ಅದಕ್ಕೂ ನನ್ನ ಬಳಿ ಹಣವಿಲ್ಲ. ಕ್ಯಾನ್ಸರ್ ರೋಗದ ವಿರುದ್ಧ ಹೇಗೆ ಹೋರಾಡಲಿ?

ಕೆಟ್ಟೋ (Ketto) ಮೂಲಕ ದೇಣಿಗೆ ನೀಡಿ ನೀವು ಕೂಡಾ ಜೆನಿಫರ್ಗೆ ಸಹಾಯ ಮಾಡಬಹುದು

 

Follow Us:
Download App:
  • android
  • ios