news
By Suvarna Web Desk | 10:09 PM May 19, 2017
ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ನಾನು ಸಿದ್ಧ

Highlights

ನಾನು ಸೀನಿಯರ್ ಇರಬಹುದು, ದರೆ ಆಯ್ಕೆ ಮಾಡುವವರಿಗೆ ಅದು ಗೊತ್ತಿರಬೇಕಲ್ಲ ಅನ್ನುವ ಮೂಲಕ ನಾನು ಕೆಪಿಸಿಸಿ ಅಧ್ಯಕ್ಷ ಅನ್ನುವ ಭಾವನೆಯನ್ನು ವ್ಯಕ್ತಪಡಿಸಿದರು.

ಹಾಸನ(ಮೇ.19): ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಒಪ್ಪಿಕೊಂಡು ನಿಭಾಯಿಸಲು ಸಿದ್ದ ಎಂದು ಆರೋಗ್ಯ ಸಚಿವ ರಮೇಶ್​ಕುಮಾರ್​ ತಿಳಿಸಿದ್ದಾರೆ.

ಹಾಸನದ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಸೀನಿಯರ್​ ಇರಬಹುದು, ಆದರೆ ಆಯ್ಕೆ ಮಾಡುವವರಿಗೆ ಅದು ಗೊತ್ತಿರಬೇಕಲ್ಲ ಅನ್ನುವ ಮೂಲಕ ನಾನು ಕೆಪಿಸಿಸಿ ಅಧ್ಯಕ್ಷ ಅನ್ನುವ ಭಾವನೆಯನ್ನು ವ್ಯಕ್ತಪಡಿಸಿದರು.

ಅಧ್ಯಕ್ಷ ಸ್ಥಾನದ ಬಗ್ಗೆ ಇರೋ ಗೊಂದಲದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾರ್ಡ್​ವೇರ್​​ ಅಂಗಡಿಗೆ ನೊಣ ಬರುತ್ತವೆಯಾ? ಮಿಠಾಯಿ ಅಂಗಡಿಗೆ ನೊಣ ಬರೋದು ಸಹಜ. ರಾಜಕೀಯ ಪಕ್ಷ, ಸ್ಥಾನದ ವಿಷಯ ಬಂದಾಗ ಗೊಂದಲ ಸಾಮಾನ್ಯ ಅಂದರು. ಒಂದು ಸ್ಥಾನಕ್ಕೆ 6-7 ಆಕಾಂಕ್ಷಿಗಳಿದ್ದಾರೆ, ನನ್​ ಹೆಸರನ್ನು ನೀವಾದ್ರು ಶಿಫಾರಸ್ಸು ಮಾಡಿ ಅಂತಾ ಹಾಸ್ಯದಾಟಿಯಲ್ಲಿ ಹೇಳಿದರು.

Show Full Article


Recommended


bottom right ad