Asianet Suvarna News Asianet Suvarna News

ವಾಟ್ಸಾಪ್ ವಿಡಿಯೋ ಕರೆ ಮೂಲಕ ವಿಚ್ಛೇದನ

ವಾಟ್ಸಾಪ್‌ನಲ್ಲಿ ಮೆಸೇಜ್, ಕಾಲ್, ಫೋಟೋ, ವಿಡಿಯೋ ಶೇರ್ ಮಾಡುವುದೆಲ್ಲಾ ಗೊತ್ತು. ಆದರೆ ಡಿವೋರ್ಸ್ ಮಾಡೋದು ಕೇಳಿದ್ದೀರಾ? ಇಂತದ್ದೊಂದು ಅಪರೂಪದ ಪ್ರಸಂಗ ನಡೆದಿದೆ. ಏನಿದು ಪ್ರಸಂಗ ಇಲ್ಲಿದೆ ನೋಡಿ. 

Husband in Nagpur, wife in US, court grants divorce via WhatsApp video call
Author
Bengaluru, First Published Jan 18, 2019, 9:57 AM IST

ನಾಗ್ಪುರ (ಜ. 18): ವಿಚ್ಛೇದನ ಪ್ರಕರಣ ವಿಚಾರಣೆಯನ್ನು ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಇತ್ಯರ್ಥ ಪಡೆಸಿದ ಪ್ರಸಂಗ ನಾಗ್ಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. 2013 ರಲ್ಲಿ ಸತಿ-ಪತಿಗಳಾಗಿದ್ದ ಅರ್ಜಿದಾರರು, ಅಮೆರಿಕದ ಮಿಚಿಗನ್‌ನಲ್ಲಿ ಕೆಲಸ ಮಾಡುತ್ತಿದ್ದರಾದರೂ, ವಿಚ್ಛೇದನ ಬಯಸಿ ನಾಗ್ಪುರದ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ದರು.

ನಿರೀಕ್ಷೆಯಂತೆ ಕೋರ್ಟ್ ವಿಚಾರಣೆಗೆ ಕರೆದಿದ್ದು, ಪತಿ ಹಾಜರಾದರು. ಆದರೆ 35 ವರ್ಷದ ಪತ್ನಿ ತಾನು ಶಿಕ್ಷಣ ಮುಂದುವರಿಸಿರುವ ಸಂಸ್ಥೆಯಲ್ಲಿ ದೀರ್ಘ ರಜೆ ನೀಡುವುದಿಲ್ಲ. ಆ ಕಾರಣಕ್ಕಾಗಿ ವಾಟ್ಸಾಪ್ ವಿಡಿಯೋ ಮೂಲಕ ವಿಚಾರಣೆ ನಡೆಸಿ ಎಂದು ಕೋರಿದ್ದರು. ಅದೇ ಪ್ರಕಾರ, ನ್ಯಾ.ಸ್ವಾತಿ ಚೌಹಾಣ್ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಅಮೆರಿಕದಲ್ಲಿದ್ದ ಪತ್ನಿಯನ್ನೂ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. 

Follow Us:
Download App:
  • android
  • ios