news
By Suvarna Web Desk | 07:26 PM January 12, 2018
ಆಧಾರ್'ಗೆ ಸಿಮ್ ಸಂಪರ್ಕಿಸಲು ಹೋಗಿ ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಭೂಪ

Highlights

ಗ್ರಾಹಕರು ಮೊಬೈಲ್ ಕಂಪನಿಗಳ ಸೇವಾ ಕೇಂದ್ರಗಳಿಗೆ ತೆರಳಿ ಈ ಪ್ರಕ್ರಿಯೆ ಪೂರ್ತಿಗೊಳಿಸುವುದು ಕಷ್ಟವಾಗುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ಇತ್ತೀಚಿಗೆ ಆತಂಕ ವ್ಯಕ್ತಪಡಿಸಿತ್ತು

ಜೈಪುರ(ಜ.12):  ಆಧಾರ್'ಗೆ ಮೊಬೈಲ್ ಸಿಮ್ ಸಂಪರ್ಕಿಸಲು ಹೋಗಿ ವ್ಯಕ್ತಿಯೊಬ್ಬರು 1.10 ಲಕ್ಷ ರೂ. ಕಳೆದುಕೊಂಡ ಘಟನೆ ಜೈಪುರದ ಬಾಪು ನಗರದಲ್ಲಿ ನಡೆದಿದೆ.

ಬಾಪುನಗರದ ಬ್ರಿಜ್'ವಾನಿ ಎಂಬುವವರಿಗೆ ವ್ಯಕ್ತಿಯೊಬ್ಬ ತಮ್ಮ ಮೊಬೈಲ್'ಗೆ  ಆಧಾರ್ ಜೋಡಿಸುವುದಾಗಿ ತಿಳಿಸಿ ಮೊಬೈಲ್ ಸಿಮ್ ಹಾಗೂ ಆಧಾರ್ ಸಂಖ್ಯೆಯನ್ನು ಪಡೆದುಕೊಂಡಿದ್ದಾನೆ. ತದ ನಂತರ ಹಳೆಯ ಸಿಮ್ ಅನ್ನು ನಿಷ್ಕ್ರಿಸುವ ಬದಲು ಹೊಸ ಸಿಮ್ ನೀಡಿದ್ದಾನೆ.  ಬ್ರಿಜ್'ವಾನಿ ಅವರ ಹಳೆಯ ಸಿಮ್ ಬಳಸಿದ ಆ ವ್ಯಕ್ತಿ 1.10 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದಾನೆ. ಮರು ದಿನ ಬ್ಯಾಂಕಿಗೆ ಹೋದ ನಂತರವಷ್ಟೆ ಬ್ರಿಜ್'ವಾನಿ ಹಣ ಕಳೆದುಕೊಂಡಿರುವುದು ಗೊತ್ತಾಗಿದೆ.

ಸರ್ಕಾರದ ನಿರ್ದೇಶನದ ಪ್ರಕಾರ ಮೊಬೈಲ್ ಬಳಕೆದಾರರು ತಮ್ಮ ಸಿಮ್'ಗಳನ್ನು ಮಾರ್ಚ್‌ 31ರೊಳಗೆ ಆಧಾರ್‌ಗೆ ಜೋಡಿಸುವುದು ಕಡ್ಡಾಯವಾಗಿದೆ. ಗ್ರಾಹಕರು ಮೊಬೈಲ್ ಕಂಪನಿಗಳ ಸೇವಾ ಕೇಂದ್ರಗಳಿಗೆ ತೆರಳಿ ಈ ಪ್ರಕ್ರಿಯೆ ಪೂರ್ತಿಗೊಳಿಸುವುದು ಕಷ್ಟವಾಗುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ಇತ್ತೀಚಿಗೆ ಆತಂಕ ವ್ಯಕ್ತಪಡಿಸಿತ್ತು. ದೇಶದಲ್ಲಿ 50 ಕೋಟಿಗೂ ಅಧಿಕ ಮೊಬೈಲ್‌ ಚಂದಾದಾರರು ಆಧಾರ್‌ಗೆ ಸಂಪರ್ಕಿಸಬೇಕಿದೆ.

Show Full Article


Recommended


bottom right ad