news
By Suvarna Web Desk | 10:59 AM April 21, 2017
ಪ್ಯಾನ್ ಕಾರ್ಡ್’ಗೆ ಆಧಾರ್ ಕಡ್ಡಾಯ: ಕೇಂದ್ರದ ವಿರುದ್ಧ ಸುಪ್ರೀಂ ಗರಂ

Highlights

ನಾವು ಆಧಾರ್ ಕಾರ್ಡನ್ನು ಐಚ್ಛಿಕವೆಂದು ಆದೇಶ ಹೊರಡಿಸಿರುವ ಹೊರತಾಗಿಯೂ ನೀವು ಅದನ್ನು ಕಡ್ಡಾಯ ಮಾಡಿರುವುದು ಏಕೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ (ಏ.21): ಪ್ಯಾನ್ ಕಾರ್ಡ್ ಪಡೆಯಲು ಆಧಾರ್ ಕಾರ್ಡನ್ನು ಕಡ್ಡಾಯ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಸಿಡಿಮಿಡಿಗೊಂಡಿದೆ.

ನಾವು ಆಧಾರ್ ಕಾರ್ಡನ್ನು ಐಚ್ಛಿಕವೆಂದು ಆದೇಶ ಹೊರಡಿಸಿರುವ ಹೊರತಾಗಿಯೂ ನೀವು ಅದನ್ನು ಕಡ್ಡಾಯ ಮಾಡಿರುವುದು ಏಕೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಬ್ಯಾಂಕ್ ಖಾತೆ ತೆರೆಯಲು, ಪಾಸ್ಪೋರ್ಟ್ ಪಡೆಯಲು, ಮೊಬೈಲ್ ಸಂಪರ್ಕ ಪಡೆಯಲು ಸರ್ಕಾರ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಬಹುದು ಎಂದು ಕಳೆದ ತಿಂಗಳು ಸುಪ್ರೀ ಕೋರ್ಟ್ ಹೇಳಿತ್ತು. ಆದರೆ ಪ್ಯಾನ್ ಕಾರ್ಡ್ ಅಥವಾ ಕಲ್ಯಾಣ ಯೋಜನೆಗಳಿಗೆ ಅದನ್ನು ಕಡ್ಡಾಯಗೊಳಿಸುವಂತಿಲ್ಲವೆಂದು ಸುಪ್ರೀಂ ಹೇಳಿತ್ತು.

Show Full Article

Recommended

bottom right ad