Asianet Suvarna News Asianet Suvarna News

ಲೋ ಬಿಪಿ ಸಮಸ್ಯೆಯೇ..? ಇಲ್ಲಿವೆ ಸಿಂಪಲ್ ಮನೆಮದ್ದು..

ಜನರನ್ನು  ಇಂದು ಹೆಚ್ಚು ಕಾಡುತ್ತಿರುವ ಹೆಚ್ಚು ರಕ್ತದ ಒತ್ತಡ ಸಮಸ್ಯೆಯಂತೆ ಕಡಿಮೆ ರಕ್ತದ ತ್ತಡವೂ ಕೂಡ ಹೆಚ್ಚಿನವರನ್ನು ಕಾಡುತ್ತಿದೆ. ಆದರೆ ಇದು ಅನೇಕರ ಗಮನಕ್ಕೆ ಬರುತ್ತಿಲ್ಲ.  ಲೋ ಬಿಪಿ ಸಮಸ್ಯೆ ಎನ್ನುವುದು ಹೆಚ್ಚಿನವರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಇದರಿಂದ ಮುಂದೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಆದ್ದರಿಂದ ಈ ಆರೋಗ್ಯ ಸಮಸ್ಯೆಯಾದ ಲೋ ಬಿಪಿಗೆ ಕಾರಣ ಹಾಗೂ ಪರಿಹಾರಗಳನ್ನು ಇಲ್ಲಿ ತಿಳಿಸಿಕೊಡುತ್ತೇವೆ.

Home remedies to cure low blood pressure

ಬೆಂಗಳೂರು (ಜ.1): ಜನರನ್ನು  ಇಂದು ಹೆಚ್ಚು ಕಾಡುತ್ತಿರುವ ಹೆಚ್ಚು ರಕ್ತದ ಒತ್ತಡ ಸಮಸ್ಯೆಯಂತೆ ಕಡಿಮೆ ರಕ್ತದ ತ್ತಡವೂ ಕೂಡ ಹೆಚ್ಚಿನವರನ್ನು ಕಾಡುತ್ತಿದೆ. ಆದರೆ ಇದು ಅನೇಕರ ಗಮನಕ್ಕೆ ಬರುತ್ತಿಲ್ಲ.  ಲೋ ಬಿಪಿ ಸಮಸ್ಯೆ ಎನ್ನುವುದು ಹೆಚ್ಚಿನವರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಇದರಿಂದ ಮುಂದೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಆದ್ದರಿಂದ ಈ ಆರೋಗ್ಯ ಸಮಸ್ಯೆಯಾದ ಲೋ ಬಿಪಿಗೆ ಕಾರಣ ಹಾಗೂ ಪರಿಹಾರಗಳನ್ನು ಇಲ್ಲಿ ತಿಳಿಸಿಕೊಡುತ್ತೇವೆ.

ಯಾವಾಗ ಕಾಡುತ್ತದೆ

*ನಿರ್ಜಲೀಕರಣ : ಲೋ ಬಿಪಿಗೆ ಡೀಹೈಡ್ರೇಶನ್ ಒಂದು ಪ್ರಮುಖ ಕಾರಣವಾಗಿದೆ. ಅತ್ಯಂತ ಕಡಿಮೆ ನೀರು ಕುಡಿಯುವುದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ಲೋ ಬಿಪಿ ಸಮಸ್ಯೆಯನ್ನು ತಂದೊಡ್ಡುತ್ತದೆ. ಆದ್ದರಿಂದ ಅತ್ಯಧಿಕ ಪ್ರಮಾಣದಲ್ಲಿ ನೀರಲು ಸೇವನೆ ಮಾಡುವುದರಿಂದ ನಿರ್ಜಲೀಕರಣವನ್ನು ತಡೆಯಬಹುದಾಗಿದೆ. ಇದರಿಂದ ಲೋ ಬಿಪಿ ಸಮಸ್ಯೆಯೂ ಕೂಡ ಕಡಿಮೆಯಾಗುತ್ತದೆ.

ಗರ್ಭಾವಸ್ಥೆಯಲ್ಲಿ : ಗರ್ಭಾವಸ್ಥೆಯಲ್ಲಿ ಲೋ ಬಿಪಿ ಸಮಸ್ಯೆ ಕಾಡುವ ಸಂಭವ ಹೆಚ್ಚಿನದ್ದಾಗಿರುತ್ತದೆ. ಆದ್ದರಿಂದ  ವೇಳೆ ನಿಮ್ಮ ಬಿಪಿಯನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.

ಹೃದಯ ಸಂಬಂಧೀ ಸಮಸ್ಯೆ : ಹೃದಯ ಸಂಬಂಧೀ ಸಮಸ್ಯೆಗಳಿಂದ ಬಳಲುತ್ತಿದ್ದಾಗಲೂ ಕೂಡ ಲೋ ಬಿಪಿ ಸಮಸ್ಯೆಯು ಹೆಚ್ಚು ಕಾಡುತ್ತದೆ. ಆಗಲೂ ಕೂಡ ಹೆಚ್ಚು ಮುನ್ನೆಚ್ಚರಿಕೆಯನ್ನು ವಹಿಸುವುದು ಅಗತ್ಯವಾಗಿರುತ್ತದೆ.

ಪರಿಹಾರ

ಮನೆಮದ್ದು : ಕೆಲ ಮನೆಮದ್ದುಗಳಿಂದ ಕಡಿಮೆ ರಕ್ತದೊತ್ತಡ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ.

*ದಿನವೂ ಒಂದು ಕಪ್ ಬೀಟ್ರೋಟ್ ಜ್ಯೂಸ್ ಕುಡಿಯಬೇಕು

*ಸ್ಟ್ರಾಂಗ್ ಬ್ಲಾಕ್ ಕಾಫಿ ಕುಡಿಯುವುದರಿಂದಲೂ ಕೂಡ ಕಡಿಮೆ ರಕ್ತದ ತ್ತಡ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ.

*ಬಾದಾಮಿಯನ್ನು ಪೇಸ್ಟ್ ಮಾಡಿ ಬೆಚ್ಚಗಿನ ನೀರಿನಲ್ಲಿ ಕುಡಿಯುವುದು ಕೂಡ ಸಹಕಾರಿಯಾಗಬಲ್ಲದು

*ವ್ಯಾಯಾಮ : ನಿತ್ಯವೂ ಕೂಡ ಕೆಲವು ಸರಳ ವ್ಯಾಯಾಮವನ್ನು ಮಾಡುವುದರಿಂದಲೂ ಕೂಡ ಕಡಿಮೆ ರಕ್ತದ ಒತ್ತಡ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ.  

Follow Us:
Download App:
  • android
  • ios