Asianet Suvarna News Asianet Suvarna News

ಅತ್ತ ರೈತರ ಆಕ್ರೋಶ ಕೊತ ಕೊತ ಕುದಿತ್ತಿದ್ರೆ, ಇತ್ತ ದೇವೇಗೌಡ ಕುಟುಂಬದ ಆಕ್ರೋಶ ಕಟ್ಟೆ ಒಡೆಯಿತು..!

ಒಂದು ಕಡೆ ಬೆಳಗಾವಿ ಸುವರ್ಣ ಸೌಧದಲ್ಲಿ ಕಬ್ಬು ಬೆಳೆಗಾರಾರ ಆಕ್ರೋಶ ತಾರಕಕ್ಕೇರಿದ್ರೆ, ಮತ್ತೊಂದೆಡೆ ಅನ್ನದಾತರ ಆಕ್ರೋಶವನ್ನ ತಣ್ಣಗಾಗಿಸುವದನ್ನ ಬಿಟ್ಟು ಮತ್ತಷ್ಟು ಪ್ರತಿಭಟನೆಯ ಬಿಸಿಗೆ ತುಪ್ಪ ಸುರಿದ್ದಾರೆ. ರೈತರ ಪ್ರತಿಭಟನೆಗೆ ಸಂಬಂಧ ಸಿಎಂ ಸೇರಿದಂತೆ ಗೌಡರ ಕುಟುಂಬದ ಉಡಾಫೆ ರಿಯಾಕ್ಷನ್ ಗಳು ಹೇಗಿದ್ದವು ನೋಡಿ.

HD Devegowda Family downplay Belagavi Farmers Protest
Author
Bengaluru, First Published Nov 18, 2018, 7:35 PM IST

ಬೆಂಗಳೂರು, [ನ.18]: ಅತ್ತ ಬೆಳಗಾವಿ ಸುವರ್ಣ ಸೌಧದಲ್ಲಿ ಕಬ್ಬು ಬೆಳಗೆರಾರ ಆಕ್ರೋಶ ಕೊತ ಕೊತ ಕುದಿಯುತ್ತಿದ್ರೆ. ಇತ್ತ  ಸಿಎಂ ಸೇರಿದಂತೆ ಗೌಡರ ಕುಟುಂಬದ ಆಕ್ರೋಶದ ಕಟ್ಟೆ ಒಡೆದಿದೆ.

 ಅದರಲ್ಲೂ ಸಿಎಂ ಅಕ್ಷರಶಃ ಕೆಂಡಾಮಂಡಲರಾಗಿದ್ದ ಎಚ್ಡಿಕೆ ಸುವರ್ಣಸೌಧಕ್ಕೆ ಲಾರಿ ನುಗ್ಗಿಸಿದವರು ರೈತರಲ್ಲ ಗೂಂಡಾಗಳು ಎಂದ್ರು. ಅಷ್ಟೇ ಅಲ್ಲ. ಪ್ರತಿಭಟನಾ ನಿರತ ರೈತ ಮಹಿಳೆಗೆ ಇಷ್ಟುದಿನ ಎಲ್ಲಿ ಮಲಗಿದ್ಯಮ್ಮಾ ಎಂಬ ವಿವಾದಾತ್ಮಕ ಹೇಳಿಕೆಯನ್ನೂ ಕೊಟ್ಬಿಟ್ರು.

'ಗಲಾಟೆ ಮಾಡುತ್ತಿರುವ ಕಬ್ಬು ಬೆಳೆಗಾರರು ರೈತರಲ್ಲ, ಅವ್ರು ಗೂಂಡಾಗಳು'

ಇಷ್ಟು ದಿನ ಎಲ್ಲಿ ಮಲಗಿದ್ಯಮ್ಮಾ ಎಂಬ ಸಿಎಂ ಹೇಳಿಕೆಗೆ ರಾಜ್ಯವ್ಯಾಪಿ ಖಂಡನೆ ವ್ಯಕ್ತವಾಗಿದೆ. ಸಿಎಂ ಮಹಿಳೆಯ ಕ್ಷಮೆ ಕೇಳುವಂತೆ ಒತ್ತಾಯ ಕೇಳಿ ಬರ್ತಿವೆ.. ಈ ಮಧ್ಯೆ ರೈತ ಮಹಿಳೆ ಜಯಶ್ರೀ ಕೂಡ ಸಿಎಂಗೆ ತಿರುಗೇಟು ಕೊಟ್ಟರು.

ಇದೆಲ್ಲಾ ಸಿಎಂ ಹೇಳಿಕೆಯ ಹೈಡ್ರಾಮವಾದ್ರೆ. ಇತ್ತ ಮಾಜಿ ಪ್ರಧಾನಿ. ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆ ಇನ್ನೊಂದು ವಿವಾದಕ್ಕೆ ಕಾರಣವಾಯ್ತು. ಆತ್ಮಹತ್ಯೆ ಮಾಡಿಕೊಂಡವರಲ್ಲ ರೈತರಲ್ಲ.. ಕುಮಾರಸ್ವಾಮಿ ಏನ್ ರೈತರ ಮೇಲೆ ಗೋಲಿಬಾರ್ ಮಾಡಿಸಿಲ್ಲ ಎನ್ನುವ ಮೂಲಕ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಎಚ್‌ಡಿಕೆ ನೋಟು ಪ್ರಿಂಟ್ ಮಾಡೋ ಮಿಶಿನ್ ಇಟ್ಟಿದ್ದಾರಾ? ಸಚಿವ ರೇವಣ್ಣ ಉಡಾಫೆ ಉತ್ತರ!

ಎಚ್ಡಿಕೆ,ದೇವೇಗೌಡರು ಅಷ್ಟೇ ಅಲ್ಲ ರೇವಣ್ಣ ಕೂಡ ರೈತರ ಪ್ರತಿಭಟನೆಗೆ ಉಡಾಫೆ ರಿಯಾಕ್ಷನ್  ಕೊಟ್ಟಿದ್ದಾರೆ. ಕಬ್ಬು ಬೆಳೆ ಸಮಸ್ಯೆ ಇಡೀ ರಾಷ್ಟ್ರಕ್ಕೆ ಗೊತ್ತು. ಎಲ್ಲದಕ್ಕೂ ಎಚ್ಡಿಕೆ ಹಿಡ್ಕೊಳ್ಳೋಕೆ ಅವರೇನು ನೋಟ್ ಪ್ರಿಂಟ್ ಮಷಿನ್ ಇಟ್ಟಿದ್ದಾರಾ? ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

Follow Us:
Download App:
  • android
  • ios