news
By Suvarna Web Desk | 04:38 PM March 12, 2018
ನಲಪಾಡ್'ಗೆ ಇಂದು ಜಾಮೀನು ಸಿಗಲಿಲ್ಲ: ಇನ್ನು 2 ದಿನ ಜೈಲೆ ಗತಿ

Highlights

. 36 ಗಂಟೆಗಳ ನಂತರ ನಲಪಾಡ್'ನನ್ನು ಬಂಧಿಸಲಾಗಿತ್ತು. ಕೆಲ ದಿನ ಚಿಕಿತ್ಸೆ ಪಡೆದಿದ್ದ ವಿದ್ವತ್ ಚೇತರಿಕೆಯ ನಂತರ ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ.

ಬೆಂಗಳೂರು(ಮಾ.22): ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿ ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಇಂದು ಜಾಮೀನು ದೊರೆಯಲಿಲ್ಲ. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಜಾಮೀನು ಅರ್ಜಿಯನ್ನು ಬುಧವಾರಕ್ಕೆ ಕಾಯ್ದಿರಿಸಿದೆ.

ಫೆ.17ರಂದು ಯುಬಿಸಿಟಿಯ ಫರ್ಜಿ ಕಫೆಯಲ್ಲಿ ಕಾಲು ತಗುಲಿದ ವಿಚಾರಕ್ಕಾಗಿ ವಿದ್ವತ್ ಲೋಕನಾಥನ್ ಅವರ ಪುತ್ರ ವಿದ್ವತ್ ಅವರ ಮೇಲೆ ಮೊಹಮದ್ ಹಾಗೂ ಆತನ ಸಹಚರರು ಮನಬಂದಂತೆ ಹಲ್ಲೆ ನಡೆಸಿದ್ದರು. 36 ಗಂಟೆಗಳ ನಂತರ ನಲಪಾಡ್'ನನ್ನು ಬಂಧಿಸಲಾಗಿತ್ತು. ಕೆಲ ದಿನ ಚಿಕಿತ್ಸೆ ಪಡೆದಿದ್ದ ವಿದ್ವತ್ ಚೇತರಿಕೆಯ ನಂತರ ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ.

Show Full Article


Recommended


bottom right ad