Asianet Suvarna News Asianet Suvarna News

ಮಲ್ಯರಂಥ ಆರ್ಥಿಕ ಅಪರಾಧಿಗಳಿಗೆ ಆಶ್ರಯ ನೀಡಬೇಡಿ: ಮೋದಿ

ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾದ ಉದ್ಯಮಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಅವರ ಪ್ರಕರಣಗಳಿಂದ ಪಾಠ ಕಲಿತಿರುವ ಭಾರತ, ಆರ್ಥಿಕ ಅಪರಾಧ ಎಸಗಿದ ಉದ್ಯಮಿಗಳು ದೇಶ ಪ್ರವೇಶಿಸಲು ಅವಕಾಶ ಕೊಡಬೇಡಿ ಎಂದು ಜಿ-20 ಕೂಟದ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿಕೊಂಡಿದೆ.

G20 summit 2018: dont allow to economic offenders such as Vijay Mallya says Modi
Author
Bengaluru, First Published Dec 2, 2018, 11:25 AM IST

ಬ್ಯೂನಸ್‌ ಐರಿಸ್‌ (ಡಿ. 02): ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾದ ಉದ್ಯಮಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಅವರ ಪ್ರಕರಣಗಳಿಂದ ಪಾಠ ಕಲಿತಿರುವ ಭಾರತ, ಆರ್ಥಿಕ ಅಪರಾಧ ಎಸಗಿದ ಉದ್ಯಮಿಗಳು ದೇಶ ಪ್ರವೇಶಿಸಲು ಅವಕಾಶ ಕೊಡಬೇಡಿ ಎಂದು ಜಿ-20 ಕೂಟದ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿಕೊಂಡಿದೆ.

ಅರ್ಜೆಂಟೀನಾದ ಬ್ಯೂನಸ್‌ ಐರಿಸ್‌ನಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ, ಅಂತಾರಾಷ್ಟ್ರೀಯ ಹಣಕಾಸು ಹಾಗೂ ತೆರಿಗೆ ವ್ಯವಸ್ಥೆಗಳ ಕುರಿತು ನಡೆಯುತ್ತಿರುವ ಜಿ-20 ಶೃಂಗದ ಎರಡನೇ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ನಿಟ್ಟಿನಲ್ಲಿ 9 ಅಂಶಗಳ ಅಜೆಂಡಾವೊಂದನ್ನು ಸದಸ್ಯ ರಾಷ್ಟ್ರಗಳ ಮುಂದಿಟ್ಟರು.

ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳನ್ನು ಸಮಗ್ರವಾಗಿ ಎದುರಿಸಲು ಜಿ-20 ರಾಷ್ಟ್ರಗಳ ನಡುವೆ ಬಲಿಷ್ಠ ಹಾಗೂ ಸಕ್ರಿಯ ಸಹಕಾರ ಬೇಕು. ಅಂತಹ ವ್ಯಕ್ತಿಗಳಿಗೆ ಸದಸ್ಯ ರಾಷ್ಟ್ರಗಳು ಪ್ರವೇಶ ನೀಡುವುದನ್ನು ಹಾಗೂ ಆಶ್ರಯ ಒದಗಿಸುವುದನ್ನು ತಪ್ಪಿಸಲು ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ಮನವಿ ಮಾಡಿದರು.

ಅಪರಾಧ ಮೂಲಕ ಗಳಿಸಿದ ಹಣವನ್ನು ಪರಿಣಾಮಕಾರಿಯಾಗಿ ಮುಟ್ಟುಗೋಲು ಹಾಕಿಕೊಳ್ಳಲು, ಪರಾರಿಯಾದ ಅಪರಾಧಿಗಳನ್ನು ವಾಪಸ್‌ ಕಳಿಸಲು, ಅಪರಾಧದಿಂದ ಗಳಿಸಿದ ಹಣವನ್ನು ಹಿಂತಿರುಗಿಸುವ ಕಾನೂನು ಪ್ರಕ್ರಿಯೆಯಲ್ಲಿ ಸಹಕಾರ ಬೇಕು ಎಂದು ಒತ್ತಾಯಿಸಿದರು.

Follow Us:
Download App:
  • android
  • ios