Asianet Suvarna News Asianet Suvarna News

ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆಯ ಮುಂಜಾಗೃತಾ ಕ್ರಮಗಳೇನು ?

ಬಂಡೀಪುರ ಕಚೇರಿಯಲ್ಲಿ ಸೋಮವಾರ ಸಂಜೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಬಂಡೀಪುರ ಹುಲಿ ಯೋಜನೆ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಅಂಬಾಡಿ ಮಾಧವ್ ಮುಂಜಾಗೃತ ಸಭೆ ನಡೆಸಿದ್ದಾರೆ. ಸಹಾಯಕ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿಗಳ ಸಭೆಯಲ್ಲಿ ಬೆಂಕಿ ಬೀಳದಂತೆ ತಡೆವ ಮುಂಜಾಗೃತ ಕ್ರಮ, ಬೆಂಕಿ ತಡೆಗೆ ಬೇಕಾಗುವ ಅಗತ್ಯ ವಸ್ತು ಹಾಗೂ ಸಿಬ್ಬಂದಿ ನೇಮಕದ ಬಗ್ಗೆ ಪ್ರಾಸ್ತಾವನೆ ಸಲ್ಲಿಸಿ ಎಂದು ಅವರು ಸೂಚನೆ ನೀಡಿದ್ದಾರೆ.

Forest Departmnent  Alert to fire Incident

ಚಾಮರಾಜನಗರ (ನ.22):  ಕಳೆದ ಬೇಸಿಗೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿಗೆ ಸಾವಿರಾರು ಹೆಕ್ಟೇರ್ ಕಾಡು ಭಸ್ಮ ಹಾಗೂ ಅಧಿಕಾರಿ ಬೆಂಕಿಗಾಹುತಿಯಾದ ಕಾರಣ ಈ ಭಾರಿ ಬೇಸಿಗೆಗೆ ಮುನ್ನವೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಬಂಡೀಪುರ ಕಚೇರಿಯಲ್ಲಿ ಸೋಮವಾರ ಸಂಜೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಬಂಡೀಪುರ ಹುಲಿ ಯೋಜನೆ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಅಂಬಾಡಿ ಮಾಧವ್ ಮುಂಜಾಗೃತ ಸಭೆ ನಡೆಸಿದ್ದಾರೆ. ಸಹಾಯಕ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿಗಳ ಸಭೆಯಲ್ಲಿ ಬೆಂಕಿ ಬೀಳದಂತೆ ತಡೆವ ಮುಂಜಾಗೃತ ಕ್ರಮ, ಬೆಂಕಿ ತಡೆಗೆ ಬೇಕಾಗುವ ಅಗತ್ಯ ವಸ್ತು ಹಾಗೂ ಸಿಬ್ಬಂದಿ ನೇಮಕದ ಬಗ್ಗೆ ಪ್ರಾಸ್ತಾವನೆ ಸಲ್ಲಿಸಿ ಎಂದು ಅವರು ಸೂಚನೆ ನೀಡಿದ್ದಾರೆ.

ಬೆಂಕಿ ಹರಡುವಿಕೆ ತಡೆ ಸಂಬಂಧ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ವಲಯಗಳಲ್ಲಿ ಪೈರ್‌ಲೈನ್ ಸಂಪೂರ್ಣವಾಗಿರಬೇಕು. ಹೊಸ ವರ್ಷದ ದಿನಗಳಲ್ಲಿ ಫೈರ್‌ಲೈನ್ ಮಾಡಬೇಕು ಎನ್ನುವ ಅಧಿಕಾರಿ ವಿರುದ್ಧ ಕ್ರಮ ಖಚಿತ. ಈ ವರ್ಷದ ಅಂತ್ಯದೊಳಗೆ ಫೈರ್‌ಲೈನ್ ಮಾಡುವ ಜೊತೆಗೆ ಜಂಗಲ್ ಕಟಿಂಗ್ ಕೂಡ ಆಗಿರಬೇಕು. ಅಗತ್ಯವಿರುವ ವಲಯಗಳಲ್ಲಿ ಫೈರ್ ವಾಚರ್ ಎಷ್ಟು ಮಂದಿ ಬೇಕು ಹಾಗೂ ಟವರ್ ಲೋಕೇಶನ್ ಬಗ್ಗೆ ಖಚಿತಪಡಿಸಬೇಕು. ಫೈರ್‌ವಾಚರ್ ಹಾಗೂ ವಾಹನಗಳು ಹೆಚ್ಚುವರಿಯಾಗಿ ಬೇಕಿದ್ದರೆ ಈಗಲೇ ಪ್ರಾಸ್ತಾವನೆ ಸಲ್ಲಿಸಬೇಕು. ವಾಟರ್ ಕ್ಯಾನ್, ಫೈರ್ ಚಾಕೆಟ್ ಬಗ್ಗೆಯೂ ಅಗತ್ಯದ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದರು.

ಸೂಚನೆ ನೀಡಿದ ಸಿಎಫ್!: ಈ ಬಾರಿ ಬಂಡೀಪುರ ಕಾಡಲ್ಲಿ ಉತ್ತಮ ಮಳೆಯಾಗಿದೆ. ಕೆರೆ-ಕಟ್ಟೆಗಳು ಬಹುತೇಕ ತುಂಬಿವೆ. ಬೆಂಕಿ ತಡೆ ಸಂಬಂಧ ಬೇಸಿಗೆ ಆರಂಭಕ್ಕೂ ಮುನ್ನ ಇಲಾಖೆ ಸ್ಪಂದಿಸುವ ಭರವಸೆ ನೀಡಿರುವ ಕಾರಣ ಅಧಿಕಾರಿಗಳು ಸಬೂಬು ಹೇಳದೆ ಬೆಂಕಿ ಬೀಳದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ವರ್ಷದ ಅಂತ್ಯದೊಳಗೆ ಫೈರ್‌ಲೈನ್, ಜಂಗಲ್ ಕಟಿಂಗ್ ಮುಗಿಸದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಸಭೆಯಲ್ಲಿ ಸಹಾಯಕ ಸಂರಕ್ಷಣಾ ಧಿಕಾರಿಗಳಾದ ಮರಿಯಪ್ಪ ಅಂತೋಣಿ, ಕೆ. ಪರಮೇಶ್, ರವಿಕುಮಾರ್, ಅರಣ್ಯಾಧಿಕಾರಿಗಳಾದ ಪುಟ್ಟ ಸ್ವಾಮಿ, ಸಂದೀಪ್, ನವೀನ್ ಕುಮಾರ್ ಸಭೆಯಲ್ಲಿದ್ದರು.

Follow Us:
Download App:
  • android
  • ios