Asianet Suvarna News Asianet Suvarna News

ಪಂಚ ಫಲಿತಾಂಶ, ಕರ್ನಾಟಕದಲ್ಲಿ ಈ ರಾಜಕೀಯ ಬೆಳವಣಿಗೆ ಪಕ್ಕಾ

ಪಂಚ ರಾಜ್ಯಗಳ ಫಲಿತಾಂಶಕ್ಕೆ ಇಡೀ ದೇಶವೆ ಕಾಯುವ ಪರಿಸ್ಥಿತಿ ಎದುರಾಗಿದೆ.  2019ರ ಲೋಕಸಭಾ ಚುನಾವಣೆಗ ದಿಕ್ಸೂಚಿ ಎಂದೆ ಕರೆಸಿಕೊಂಡಿರುವ ಪಂಚ ರಾಜ್ಯಗಳ ಚುನಾವಣೆಗೆ ಮತದಾನ ಮುಗಿದಿದೆ. ಪ್ರಮುಖ ಮಾಧ್ಯಮ ಸಂಸ್ಥೆಗಳು ಮತದಾನೋತ್ತರ ಚುನಾವಣಾ ಫಲಿತಾಂಶ ಪ್ರಕಟ  ಮಾಡಿವೆ. ಹಾಗಾದರೆ ಈ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಯಾವ ಪರಿಣಾಮ ಬೀರಲಿದೆ?

five state assembly elections 2018 exit poll prediction effects on Karnataka Politics
Author
Bengaluru, First Published Dec 7, 2018, 10:13 PM IST

ಬೆಂಗಳೂರು[ಡಿ.07]  ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಎದುರಾಗಿದ್ದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಸರ್ಕಾರ ರಚನೆ ಮಾಡಿಕೊಂಡು 6 ತಿಂಗಳೂ ಕಳೆದಿವೆ. ದೋಸ್ತಿ ಸರ್ಕಾರ ಆಡಳಿತವನ್ನು ನಡೆಸುತ್ತಿದೆ. ಆದರೆ ಲೋಕಸಭೆ ಚುನಾವಣೆಗೆ ಇನ್ನೊಂದು 5 ತಿಂಗಳು ಬಾಕಿ ಇರುವಾಗ 5 ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆದಿದೆ. ಹಾಗಾದರೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಬಹುದು?

1. ಆಪರೇಶನ್‌ ಕಮಲಕ್ಕೆ ಬ್ರೇಕ್:  ಸಮೀಕ್ಷಾ ವರದಿ ಹೇಳುವಂತೆ ಬಿಜೆಪಿಗೆ ಹಿನ್ನಡೆ ಆಗಿದ್ದೆ ಆದಲ್ಲಿ ರಾಜ್ಯ ರಾಜಕಾರಣದಲ್ಲಿ ಆಗಾಗ ಏಳುತ್ತಿರುವ ಆಪರೇಶನ್ ಕಮಲದ ಕೂಗಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ.

2. ಕಾಂಗ್ರೆಸ್‌ ಗೆ ಸಂಘಟನೆ ಬಲ: ಜೆಡಿಎಸ್‌ನೊಂದಿಗೆ ಕೈ ಜೋಡಿಸಿ ಸಂಘಟನೆಯಲ್ಲಿ ಹಿಂದೆ ಬಿದ್ದಿರುವ ಕಾಂಗ್ರೆಸ್ ಸೋತರೂ ಅಥವಾ ಗೆದ್ದರೂ ಎಚ್ಚೆತ್ತುಕೊಂಡು ಲೋಕಸಭಾ ಚುನಾವಣೆಗೆ ಸಿದ್ಧವಾಗಬಹುದು.

ಮೈತ್ರಿ ಸರ್ಕಾರ ಉರುಳಿಸಲು ಇವರಿಬ್ಬರೇ ಸಾಕಂತೆ: ಯಾರವರು..?

3. ಮೈತ್ರಿಗೆ ಬಲ: ದೋಸ್ತಿಗಳು ಮತ್ತಷ್ಟು ಗಟ್ಟಿಯಾಗಿ ಮುಂದಿನ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ತೀರ್ಮಾನಕ್ಕೆ ಬರಬಹುದು.

4.ಬಿಜೆಪಿ ನಾಯಕತ್ವ ಬದಲಾವಣೆ: ಬಿಜೆಪಿಯಲ್ಲಿ ಅಲ್ಲಲ್ಲಿ ಕೇಳಿ ಬರುತ್ತಿರುವ ನಾಯಕತ್ವ ಬದಲಾವಣೆ ಕೂಗು ಜೋರಾಗಿ ಯುವ ನಾಯಕತ್ವಕ್ಕೆ ಬೇಡಿಕೆ ಶುರುವಾಗಬಹುದು.

5. ಜೆಡಿಎಸ್‌ಗೆ ಆಯ್ಕೆ ಸಮಸ್ಯೆ: ಒಂದು ವೇಳೆ ಕಾಂಗ್ರೆಸ್‌ ಒಟ್ಟಾಗಿ ಚುನಾವಣೆ ಎದುರಿಸಲು ಬಂದರೂ ಜೆಡಿಎಸ್ ಹಿಂದೆ ಸರಿಯಬಹುದು. ಅಧಿಕಾರ ಕಂಡಿರುವ ಪಕ್ಷ  ತನಗೆ ಇಂತಿಷ್ಟು ವಿಧಾನಸಭಾ ಸೀಟು ಬಿಟ್ಟುಕೊಡುವಂತೆ ಪಟ್ಟು ಹಿಡಿದು ಕೂರಬಹುದು.

Follow Us:
Download App:
  • android
  • ios