Asianet Suvarna News Asianet Suvarna News

ಅಂತರ್'ರಾಜ್ಯ ವಿನಿಮಯದಡಿ ಮೊದಲ ಕಸಿ ಶಸ್ತ್ರಚಿಕಿತ್ಸೆ

38 ಮತ್ತು 27 ವರ್ಷ ವಯಸ್ಸಿನ ಇಬ್ಬರು ಯುವಕರು ಈ ವಿನಿಮಯ ಕಸಿ ಕಾರ್ಯಕ್ರಮದಡಿ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ನೂತನ ಜೀವನದ ಭರವಸೆ ಪಡೆದವರಾಗಿದ್ದಾರೆ. ಕೇರಳದ 39 ವರ್ಷ ಯುವಕ ಮತ್ತು ಅವರ ಪತ್ನಿ ಹಾಗೂ ಕರ್ನಾಟಕದವರಾದ 27 ವರ್ಷದ ಯುವಕ ಮತ್ತು ಅವರ ತಾಯಿ ನಡುವೆ ಈ ವಿನಿಮಯ ನಡೆದಿದೆ.

Fisrt Transplant surgery in KMC Hospitle

ಮಂಗಳೂರು(ನ.22):  ಮೂತ್ರಪಿಂಡ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ರೋಗಿಗಳಿಗೆ ಇಲ್ಲಿನ ಕೆಎಂಸಿ ಆಸ್ಪತ್ರೆ ಇದೇ ಮೊದಲಬಾರಿಗೆ ಅಂತರ್ ರಾಜ್ಯ ವಿನಿಮಯ ಕಸಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದೆ.

38 ಮತ್ತು 27 ವರ್ಷ ವಯಸ್ಸಿನ ಇಬ್ಬರು ಯುವಕರು ಈ ವಿನಿಮಯ ಕಸಿ ಕಾರ್ಯಕ್ರಮದಡಿ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ನೂತನ ಜೀವನದ ಭರವಸೆ ಪಡೆದವರಾಗಿದ್ದಾರೆ. ಕೇರಳದ 39 ವರ್ಷ ಯುವಕ ಮತ್ತು ಅವರ ಪತ್ನಿ ಹಾಗೂ ಕರ್ನಾಟಕದವರಾದ 27 ವರ್ಷದ ಯುವಕ ಮತ್ತು ಅವರ ತಾಯಿ ನಡುವೆ ಈ ವಿನಿಮಯ ನಡೆದಿದೆ.

ರಕ್ತದ ಗುಂಪು ಹೊಂದಿದ ಕಾರಣ 27 ವರ್ಷದ ಯುವಕನ ತಾಯಿ ತಮ್ಮ ಮಗನಿಗೆ ಮೂತ್ರ ಪಿಂಡ ದಾನ ಮಾಡಲಾಗಿರಲಿಲ್ಲ. ಇದೇ ರೀತಿ 38 ವರ್ಷ ಯುವಕನಿಗೆ ಆತನ ಪತ್ನಿಯಿಂದ ಮೂತ್ರಪಿಂಡ ದಾನ ಮಾಡಲು ಆಗಿರಲಿಲ್ಲ. ವಿನಿಮಯ ಕಸಿ ಕಾರ್ಯಕ್ರಮದ ಬಗ್ಗೆ ಸಲಹೆ ನೀಡಿದ ನಂತರ ಎರಡೂ ಕುಟುಂಬಗಳ ಸದಸ್ಯರ ಪರೀಕ್ಷೆಗಳನ್ನು ನಡೆಸಲಾಗಿ ಅದೃಷ್ಟವಶಾತ್ ವಿನಿಮಯ ಕಸಿ ಮಾಡಿಕೊಳ್ಳಲು ಸಕಾರಾತ್ಮಕ ಫಲಿತಾಂಶಗಳು ಬಂದ ಹಿನ್ನೆಲೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ಮೂತ್ರಪಿಂಡ ರೋಗ ಸಲಹಾತಜ್ಞ ಡಾ.ಸುಶಾಂತ್ ಕುಮಾರ್ ತಿಳಿಸಿದ್ದಾರೆ.

ಸಂಬಂಧಿತ ರಾಜ್ಯಗಳ ಅಧಿಕಾರಿಗಳಿಂದ ಅಗತ್ಯ ಪರವಾನಗಿ ಪಡೆಯಲಾಯಿತು. ಬಳಿಕ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಹಿರಿಯ ಮೂತ್ರರೋಗ ತಜ್ಞ ಡಾ.ಜಿ.ಜಿ. ಲಕ್ಷ್ಮಣ್ ಪ್ರಭು ಮತ್ತು ಡಾ.ಪ್ರಜ್ವಲ್ ರವೀಂದರ್, ಡಾ.ಸನ್ಮಾನ್ ಮತ್ತು ಡಾ. ರಂಜಿತ್ ಶೆಟ್ಟಿ ನೇತೃತ್ವದ ತಂಡ ಯಶಸ್ವಿಯಾಗಿ ಮಾಡಿದೆ.

ಈ ವಿನಿಮಯ ಕಸಿ ಕಾರ್ಯಕ್ರಮದಲ್ಲಿ ಎರಡು ಕುಟುಂಬಗಳ ನಡುವೆ ಅಂಗಗಳ ವಿನಿಮಯ ನಡೆಯುತ್ತದೆ. ರಕ್ತದ ಗುಂಪು ಹೊಂದದ ಮತ್ತು ಅಂಗಾಂಶ ಸೂಕ್ತ ರೀತಿಯಲ್ಲಿ ಹೊಂದಿಕೆಯಾಗದ ಕಾರಣ ಈ ರೀತಿ ವಿನಿಮಯ ಮಾಡಿಕೊಳ್ಳಬಹುದಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸುಪರಿಂಟೆಂಡೆಂಟ್ ಡಾ.ಆನಂದ್ ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios