Asianet Suvarna News Asianet Suvarna News

ಇಸ್ಲಾಂಗೆ ಮತಾಂತರಗೊಂಡಿದ್ದ ಹಾದಿಯಾ ತಂದೆ ಬಿಜೆಪಿಗೆ

ಕೇರಳ ಲವ್ ಜಿಹಾದ್ ಪ್ರಕರಣದ ಮೂಲಕ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಯುವತಿ ಹಾದಿಯಾ ತಂದೆ ಅಶೋಕನ್ ಅವರು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Father of Hadiya a Kerala woman who converted to Islam, joins BJP
Author
Thiruvananthapuram, First Published Dec 18, 2018, 2:25 PM IST

26 ವರ್ಷದ ಕೇರಳದ ಯುವತಿ ಹಾದಿಯಾ 2016ರಲ್ಲಿ ಮುಸ್ಲಿಂ ಯುವಕನೊಂದಿಗೆ ಮದುವೆಯಾಗಲು ಮತಾಂತರಗೊಂಡಾಗ ಆಕೆಯ ತಂದೆ ಕೆ. ಎಂ ಅಶೋಕನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೋರ್ಟ್ ಮೆಟ್ಟಿಲೇರಿದ್ದ ಅವರು ತನ್ನ ಮಗಳು 'ಲವ್ ಜಿಹಾದ್'ಗೆ ಗುರಿಯಾಗಿದ್ದಾಳೆ ಎಂದು ಆರೋಪಿಸಿದ್ದರು. ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದ್ದಲ್ಲದೇ, ಪ್ರಕರಣವು ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು. ಈಗ ಅದೇ ಹಾದಿಯಾಳ ತಂದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

‘ನಾನು ಮುಸ್ಲಿಂ, ನಾನು ಬಲವಂತದ ಮತಾಂತರ ಅಗಿಲ್ಲ: ಹಾದಿಯಾ

ಕಮಲ ಪಕ್ಷಕ್ಕೆ ಸೇರ್ಪಡೆಗೊಂಡ ಹಾದಿಯಾ ತಂದೆ ಪ್ರತಿಕ್ರಿಯಿಸುತ್ತಾ ' ಬಿಜೆಪಿಯೊಂದೇ ಹಿಂದೂಗಳ ನಂಬಿಕೆಯನ್ನು ಕಾಪಾಡುತ್ತಿರುವ ರಾಜಕೀಯ ಪಕ್ಷವಾಗಿದೆ' ಎಂದಿದ್ದಾರೆ. ಇತ್ತೀಚೆಗಷ್ಟೇ ನಡೆದ ಶಬರಿಮಲೆ ಹೋರಾಟದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದ ಅಶೋಕನ್ 'ನಾವು ಪಾಲಿಸುವ ಪದ್ಧತಿ ಹಾಗೂ ಸಂಪ್ರದಾಯಗಳನ್ನು ಯಾವತ್ತೂ ನ್ಯಯಾಲಯದ ಮೆಟ್ಟಿಲೇರಲು ಬಿಡಬಾರದು' ಎಂದಿದ್ದಾರೆ. 

ಯಾರು ಈ ಹಾದಿಯಾ?

ಹೋಮಿಯೋಪಥಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಹಿಂದೂ ಹುಡುಗಿ ಹಾದಿಯಾ , ಶಫೀನ್ ಜಹಾನ್ ಎಂಬಾತನ್ನು ಪ್ರೀತಿಸಿ, ಇಸ್ಲಾಮ್'ಗೆ ಮತಾಂತರಗೊಂಡು ಮದುವೆಯಾಗಿದ್ದಳು.   ಹಾದಿಯಾಳ ಪೋಷಕರು ಇದೊಂದು ಲವ್ ಜಿಹಾದ್ ಕೇಸ್ ಎಂದು ಆರೋಪಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಕೋರ್ಟ್ ಹಾದಿಯಾಳ ವಿವಾಹವನ್ನು ಅಮಾನ್ಯಗೊಳಿಸಿ ಆಕೆಯ ಪೋಷಕರ ಸುಪರ್ದಿಗೆ ಒಪ್ಪಿಸಿತ್ತು.   

ಹಾದಿಯಾ ಲವ್ ಜಿಹಾದ್ ಕೇಸ್ : ಮದುವೆ ಮಾನ್ಯ ಮಾಡಿದ ಸುಪ್ರೀಂ ಕೋರ್ಟ್

ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹಾದಿಯಾ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ  ಮತ್ತು ನ್ಯಾ.ಎ.ಎಂ ಕನ್ವಿಲ್ಕರ್  ಹಾಗೂ ಡಿವೈ ಚಂದ್ರಚೂಡ ಅವರಿದ್ದ ನ್ಯಾಯಪೀಠ ಮದುವೆಯನ್ನು ಊರ್ಜಿತಗೊಳಿಸಿದ್ದು, ಅವರಿಬ್ಬರು ಕಾನೂನಿನ ಪ್ರಕಾರವಾಗಿ ವಿವಾಹವಾಗಿದ್ದು, ಇಚ್ಛೆಗೆ ಅನುಗುಣವಾಗಿ ಒಟ್ಟಿಗೆ ಜೀವನ ನಡೆಸಬಹುದು ಎಂದು ಹೇಳಿತ್ತು. ಕೇರಳ ಹೈ ಕೋರ್ಟ್ ಅಮಾನ್ಯ ಮಾಡಿದ್ದ ವಿವಾಹವನ್ನು ಇದೀಗ ಸುಪ್ರೀಂಕೋರ್ಟ್ ಮಾನ್ಯ ಮಾಡಿತ್ತು.

Follow Us:
Download App:
  • android
  • ios