Asianet Suvarna News Asianet Suvarna News

Fact check: ಹಕ್ಕಿಯಂತೆ ಹಾರುವ ಬೆನ್ನಿನಲ್ಲಿ ರೆಕ್ಕೆ ಇರುವ ಮಗು ನೋಡಿ!

ನಾಲ್ಕು ಕಾಲು, ಒಂದು ತಲೆ ಎರಡು ದೇಹ ಹೀಗೆ ಚಿತ್ರ ವಿಚಿತ್ರವಾದ ಮನುಷ್ಯರು ಜನ್ಮ ತಾಳುವುದುಂಟು. ಆದರೆ ರೆಕ್ಕೆ ಇರುವ ಮನುಷ್ಯನನ್ನು ನೋಡಿದ್ದೀರಾ? ಈ ಹುಡುಗನಿಗೆ ಹುಟ್ಟುತ್ತಲೇ ರೆಕ್ಕೆ ಇದೆ. ಈ ರೆಕ್ಕೆ ಬಳಸಿ ಈತ ಹಕ್ಕಿಯಂತೆ ಹಾರುತ್ತಾನೆ. ಪ್ರಕೃತಿಯ ಸೃಷ್ಟಿಯೇ ವಿಸ್ಮಯಕಾರಿ ಎಂದು ಬೆನ್ನಿನಲ್ಲಿ ರೆಕ್ಕೆ ಇರುವ ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

fact check of this boy has wings with which he can fly
Author
Bengaluru, First Published Oct 11, 2019, 9:37 AM IST

ನಾಲ್ಕು ಕಾಲು, ಒಂದು ತಲೆ ಎರಡು ದೇಹ ಹೀಗೆ ಚಿತ್ರ ವಿಚಿತ್ರವಾದ ಮನುಷ್ಯರು ಜನ್ಮ ತಾಳುವುದುಂಟು. ಆದರೆ ರೆಕ್ಕೆ ಇರುವ ಮನುಷ್ಯನನ್ನು ನೋಡಿದ್ದೀರಾ? ಈ ಹುಡುಗನಿಗೆ ಹುಟ್ಟುತ್ತಲೇ ರೆಕ್ಕೆ ಇದೆ. ಈ ರೆಕ್ಕೆ ಬಳಸಿ ಈತ ಹಕ್ಕಿಯಂತೆ ಹಾರುತ್ತಾನೆ. ಪ್ರಕೃತಿಯ ಸೃಷ್ಟಿಯೇ ವಿಸ್ಮಯಕಾರಿ ಎಂದು ಬೆನ್ನಿನಲ್ಲಿ ರೆಕ್ಕೆ ಇರುವ ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿದೆ.

fact check: ಚೀನಾದೊಳಗೆ ನುಗ್ಗಿ ಪಹರೆ ನಡೆಸಿದ್ರಾ ಭಾರತೀಯ ಸೈನಿಕರು?

3 ನಿಮಿಷ ಇರುವ ಈ ವಿಡಿಯೋದಲ್ಲಿ ಪುಟ್ಟಮಗುವೊಂದು ರೆಕ್ಕೆ ಬಡಿಯುತ್ತಾ ಮೇಲೆ ಹಾರಲು ಪ್ರಯತ್ನಿಸುತ್ತಾ, ಕೊನೆಗೆ ಯಶಸ್ವಿಯೂ ಆಗುತ್ತದೆ. ಪ್ರಕೃತಿಯ ಸೃಷ್ಟಿಯೇ ವಿಸ್ಮಯ, ಯಾರೂ ಊಹಿಸಲಾಗದು ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಇದನ್ನು ಶೇರ್‌ ಮಾಡಲಾಗುತ್ತಿದೆ.

ಆದರೆ ನಿಜಕ್ಕೂ ರೆಕ್ಕೆ ಇರುವ ಮಗು ಜನಿಸಿದೆಯೇ ಎಂದು ಬೂಮ್‌ ಲೈವ್‌ ಪರಿಶೀಲಿಸಿದಾಗ ಯಾವುದೋ ಸಿನಿಮಾದ ವಿಡಿಯೋವನ್ನು ಬಳಸಿಕೊಂಡು ಹೀಗೆ ಸುಳ್ಳುಸುದ್ದಿ ಹರಡಲಾಗುತ್ತಿದೆ ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ 2009ರಲ್ಲಿ ಬಿಡುಗಡೆಯಾದ ಪ್ರೆಂಚ್‌ ಸಿನಿಮಾ ‘ರಿಖಿ’ಯಲ್ಲಿರುವ ದೃಶ್ಯ ಬಳಸಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹುಟ್ಟುತ್ತಲೇ ವಿಕೃತವಾಗಿ ಜನಿಸಿದ ಮಗುವನ್ನು ಅದರ ಪೋಷಕರು ಹೇಗೆ ನಿಭಾಯಿಸುತ್ತಾರೆಂಬುದೇ ಈ ಸಿನಿಮಾದ ಕಥೆ. ಅಲ್ಲದೆ ಬೂಮ್‌ ಸಿನಿಮಾ ನಿರ್ದೇಶಕರಾದ ಅಜೋನ್‌ ಅವರನ್ನು ಸಂಪರ್ಕಿಸಿ ಈ ಬಗ್ಗೆ ಸ್ಪಷ್ಟನೆ ಪಡೆದಿದೆ.

- ವೈರಲ್  ಚೆಕ್ 

Follow Us:
Download App:
  • android
  • ios