Asianet Suvarna News Asianet Suvarna News

ಕುಂಭಮೇಳದಲ್ಲಿ ಆನೆ, ಕುದುರೆ ಮೆರವಣಿಗೆಗೆ ನಿಷೇಧ!

ಯುಪಿ ಕುಂಭಮೇಳದಲ್ಲಿ ಆನೆ, ಕುದುರೆ ಮೆರವಣಿಗೆಗೆ ನಿಷೇಧ! ಕುಂಭಮೇಳದ ಆಡಳಿತದ ಈ ಕ್ರಮಕ್ಕೆ ನಾಗಾ ಸೇರಿದಂತೆ ಇತರ ಸಾಧುಗಳ ಆಕ್ರೋಶ | 

Elephant and horse march ban in Kumbha Mela 2019
Author
Bengaluru, First Published Dec 26, 2018, 8:40 AM IST

ಲಖನೌ (ಡಿ. 26): ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಸುರಕ್ಷತಾ ದೃಷ್ಟಿಯಿಂದ ಶತಮಾನಗಳ ಹಳೆಯದಾದ ಸಾಂಪ್ರದಾಯಿಕ ಕುದುರೆ ಮತ್ತು ಆನೆ ಮೆರವಣಿಗೆ ಮೇಲೆ ಕುಂಭಮೇಳದ ಆಡಳಿತ ನಿಷೇಧ ಹೇರಿದೆ. ಕುಂಭಮೇಳದ ಆಡಳಿತದ ಈ ಕ್ರಮಕ್ಕೆ ನಾಗಾ ಸೇರಿದಂತೆ ಇತರ ಸಾಧುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಗಾ ಮತ್ತು ಯಮುನಾ ನದಿ ಸಂಗಮವಾಗುವ ಪ್ರದೇಶದಲ್ಲಿ ಪವಿತ್ರ ಸ್ನಾನ ಮಾಡುವುದಷ್ಟೇ ಅಲ್ಲದೆ, ನೂರಾರು ನಾಗಾ ಮುನಿಗಳು ಕುದುರೆ ಮತ್ತು ಆನೆ ಮೆರವಣಿಗೆ ಸಾಗುವುದು ಸಹ ಕುಂಭಮೇಳ ಮತ್ತು ಅರ್ಧಕುಂಭಮೇಳದ ವಿಶೇಷವಾಗಿದೆ.

ಆದರೆ, ಜ.14ರಿಂದ ಮಾ.4ರವರೆಗೂ ನಡೆಯಲಿರುವ ಕುಂಭಮೇಳದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಆನೆ ಮತ್ತು ಕುದುರೆ ಮೆರವಣಿಗೆಗೆ ನಿಷೇಧ ಹೇರಲಾಗಿದೆ ಎಂದು ಮೇಳದ ಭದ್ರತಾ ಉತ್ಸುವಾರಿ ವಹಿಸಿಕೊಂಡಿರುವ ಡಿಐಜಿ ಕೆ.ಪಿ.ಸಿಂಗ್‌ ಘೋಷಣೆ ಮಾಡಿದ್ದಾರೆ. ಆದರೆ, ಇದಕ್ಕೆ ಭಕ್ತಾದಿಗಳು ಮತ್ತು ನಾಗಾ ಸಾಧುಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios