Asianet Suvarna News Asianet Suvarna News

ಇದೇನು ತಮಾಷೆಯಲ್ಲ ಸುವರ್ಣನ್ಯೂಸ್, ಅಂದ್ರು ಎಲ್ ಸಾಲ್ವಡಾರ್ ಪ್ರೆಸಿಡೆಂಟ್!

ಎಲ್ ಸಾಲ್ವಡಾರ್‌  ಅಧ್ಯಕ್ಷರ ಸೆಲ್ಫೀ ವೈರಲ್| ಸುವರ್ಣ ನ್ಯೂಸ್ ವರದಿ ಟ್ವೀಟ್ ಮಾಡಿದ ಎಲ್ ಸಾಲ್ವಡಾರ್‌ ಅಧ್ಯಕ್ಷ| ಟ್ವೀಟ್ ಬೆನ್ನಲ್ಲೇ ಕನ್ನಡ ವರದಿಗೆ ಸಿಕ್ತು ಭಾರೀ ಲೈಕ್ಸ್| ಮಧ್ಯ ಅಮೆರಿಕಾದ ಪುಟ್ಟ ನಾಡಿನಲ್ಲಿ ಕನ್ನಡದ ಕಂಪು| ಎಲ್ ಸಾಲ್ವಡಾರ್‌ ಎಲ್ಲಿದೆ? ಇಲ್ಲಿದೆ ವಿವರ

El Salvador Prez Nayib Bukele tweets UNSelfie Kannada news south India
Author
Bangalore, First Published Sep 28, 2019, 2:53 PM IST

ಸಾನ್ ಸಾಲ್ವಡಾರ್[ಸೆ.28]: ಎಲ್ ಸಾಲ್ವಡಾರ್‌ ದೇಶದಲ್ಲೂ ಸದ್ದು ಮಾಡಿದ ಸುವರ್ಣ ನ್ಯೂಸ್ ಡಾಟ್ ಕಾಂ. ಹೌದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಎಲ್‌ ಸಾಲ್ವಡಾರ್‌ ಅಧ್ಯಕ್ಷ ನಯೀಬ್‌ ಬುಕೆಲೆ ತಮ್ಮ ಚೊಚ್ಚಲ ಬಾರಿಗೆ ಭಾಷಣಕ್ಕೂ ಮೊದಲು ತೆಗೆದುಕೊಂಡ ಸೆಲ್ಫೀ ಭಾರೀ ವೈರಲ್ ಆಗಿತ್ತು. ಈ ಸುದ್ದಿಯನ್ನು ಸುವರ್ಣ ನ್ಯೂಸ್ ಡಾಟ್ ಕಾಂ ಕೂಡಾ ಪ್ರಕಟಿಸಿತ್ತು. 

ವಿಶ್ವಸಂಸ್ಥೆ ಭಾಷಣ ಮುನ್ನ ಸಾಲ್ವಡಾರ್‌ನ ಪ್ರಧಾನಿ ಸೆಲ್ಫೀ ವೈರಲ್!

ಈ ಸುದ್ದಿಯನ್ನು ಅಧ್ಯಕ್ಷ ನಯೀಬ್‌ ಬುಕೆಲೆ ತಮ್ಮ ಟ್ವಿಟರ್ ಖಾತೆಯಲ್ಲಿ 'ಇದೇನು ತಮಾಷೆ ಅಲ್ಲ' ಎಂದು ಶೇರ್ ಮಾಡಿಕೊಂಡಿದ್ದಾರೆ. ಈ ಟ್ವೀಟ್ ಅನ್ನು ಸಾವಿರಾರು ಮಂದಿ ಲೈಕ್ ಹಾಗೂ ರೀಟ್ವಿಟ್ ಮಾಡಿದ್ದಾರೆ. ಅಲ್ಲದೇ ಸ್ಪ್ಯಾನಿಶ್ ಭಾಷೆಯಲ್ಲೇ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕನ್ನಡದ ಕಂಪು ಸಾಗರಗಳಾಚೆಗಿನ ಪುಟ್ಟ ದೇಶ ಎಲ್ ಸಾಲ್ವಡಾರ್‌ ನಲ್ಲೂ ಹಬ್ಬಿದೆ.

ಎಲ್ಲಿದೆ ಎಲ್ ಸಾಲ್ವಡಾರ್‌? ಇಲ್ಲಿನ ವಿಶೇಷತೆಗಳೇನು?

ಜ್ವಾಲಾಮುಖಿಗಳ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಎಲ್ ಸಾಲ್ವಡಾರ್‌  ಮಧ್ಯ ಅಮೆರಿಕಾದ ಒಂದು ಪುಟ್ಟ ದೇಶ. ಪುಟ್ಟ ರಾಷ್ಟ್ರವಾಗಿದ್ದರೂ, ಸುಮಾರು 6.34 ಮಿಲಿಯನ್ ಜನರಿರುವ ಇದು ಮಧ್ಯ ಅಮೆರಿಕಾದ ಅತಿಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದೆ. 21,041 ಸ್ಕ್ವೇರ್ ಕಿ. ಮೀ ವಿಸ್ತೀರ್ಣ ಹೊಂದಿರುವ ಈ ಚಿಕ್ಕ ದೇಶದ ರಾಷ್ಟ್ರೀಯ ಭಾಷೆ ಸ್ಪ್ಯಾನಿಶ್. 

ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ 2/3 ರಷ್ಟು ಜನರು ಕೃಷಿಕರು. ಮುಸುಕಿನ ಜೋಳ, ಕಬ್ಬು, ಭತ್ತ ಹಾಗೂ ಗೋಧಿ ಇಲ್ಲಿನ ಆಹಾರ ಬೆಳೆಗಳಾದರೆ, ಕಾಫಿ ವಾಣಿಜ್ಯ ಬೆಳೆ. ಇನ್ನು ಇಲ್ಲಿನ ಅತಿ ದೊಡ್ಡ ನಗರವಾಗಿರುವ ಸಾನ್ ಸಾಲ್ವಡಾರ್ ಈ ದೇಶದ ರಾಜಧಾನಿ.

"

ಸದ್ಯ ಅಧ್ಯಕ್ಷ ನಯೀಬ್‌ ಬುಕೆಲೆಯ ಒಂದು ಸೆಲ್ಫೀಯಿಂದಾಗಿ ಎಲ್ ಸಾಲ್ವಡಾರ್‌ ಎಂಬ ಪುಟ್ಟ ದೇಶ ಇಡೀ ವಿಶ್ವದ ಗಮನ ಸೆಳೆದಿದೆ. ಹೀಗಿರುವಾಗ ಈ ಪುಟ್ಟ ದೇಶದಲ್ಲಿ ಕನ್ನಡದ ಕಂಪೂ ಹಬ್ಬಿದೆ ಎಂಬುವುದು ಮತ್ತೊಂದು ಹೆಮ್ಮೆ.

Follow Us:
Download App:
  • android
  • ios