news
By Suvarna web Desk | 05:13 AM February 08, 2017
ವೈದ್ಯರಿಗೇ ಶಾಕ್!: ಅಬ್ಬಾ...! ನಾಯಿಯ ಹೊಟ್ಟೆಯೊಳಗಿತ್ತು 8 ಒಳ ಉಡುಪುಗಳು, 62 ಹೇರ್ ಬ್ಯಾಂಡ್!

Highlights

ನಾಯಿಗಳು ಮಾಂಸ, ಮೀನು ತಿನ್ನುವುದನ್ನು ಕೇಳಿದ್ದೇವೆ ಆದರೆ ಇಲ್ಲೊಂದು ನಾಯಿ ತಿನ್ನುವ ಹಾಗೂ ಧರಿಸುವ ವಸ್ತುಗಳನ್ನು ಕನ್ಫ್ಯೂಸ್ ಮಾಡಿಕೊಂಡಿದೆ. ಯಾಕೆಂದರೆ ಈ ನಾಯಿಯ ಹೊಟ್ಟೆಯಲ್ಲಿ ಪತ್ತೆಯಾಗಿದ್ದು ಬರೋಬ್ಬರಿ 8 ಒಳ ಉಡುಪುಗಳು ಹಾಗೂ 62 ಹೇರ್ ಬ್ಯಾಂಡ್, 4 ರಬ್ಬರ್ ಬ್ಯಾಂಡ್'ಗಳುಗಳು ಪತ್ತೆಯಾಗಿವೆ.

ಜಾರ್ಖಂಡ್(ಫೆ.08):ನಾಯಿಗಳು ಮಾಂಸ, ಮೀನು ತಿನ್ನುವುದನ್ನು ಕೇಳಿದ್ದೇವೆ ಆದರೆ ಇಲ್ಲೊಂದು ನಾಯಿ ತಿನ್ನುವ ಹಾಗೂ ಧರಿಸುವ ವಸ್ತುಗಳನ್ನು ಕನ್ಫ್ಯೂಸ್ ಮಾಡಿಕೊಂಡಿದೆ. ಯಾಕೆಂದರೆ ಈ ನಾಯಿಯ ಹೊಟ್ಟೆಯಲ್ಲಿ ಪತ್ತೆಯಾಗಿದ್ದು ಬರೋಬ್ಬರಿ 8 ಒಳ ಉಡುಪುಗಳು ಹಾಗೂ 62 ಹೇರ್ ಬ್ಯಾಂಡ್, 4 ರಬ್ಬರ್ ಬ್ಯಾಂಡ್'ಗಳುಗಳು ಪತ್ತೆಯಾಗಿವೆ.

ಈ ಘಟನೆ ಜಾರ್ಖಂಡ್'ನಲ್ಲಿ ನಡೆದಿದ್ದು, ಟೀಕಿ ಹೆಸರಿನ ಶಾಂತ ಸ್ವಭಾವದ ನಾಯಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದೆ. ಮೇಲಾಗಿ ತಿಂದ ಆಹಾರವೂ ಜೀರ್ಣಗೊಳ್ಳುತ್ತಿರಲಿಲ್ಲ. ಇದರಿಂದ ಗಾಬರಿಗೊಂಡ ಮಾಲಿಕ ನಾಯಿಯನ್ನು ಚಿಕಿತ್ಸೆಗಾಗಿ ವೈದ್ಯರ ಬಳಿ ಕೊಂಡೊಯ್ದಿದ್ದಾನೆ. ಪರಿಶೀಲಿಸಿದ ವೈದ್ಯರು ನಾಯಿಯ X-Ray ಹಾಗೂ ಸ್ಕ್ಯಾನ್ ಮಾಡಿದ್ದಾರೆ. ಆದರೆ ವರದಿ ಕಂಡ ಡಾಕ್ಟರ್ ಮಾತ್ರ ತಬ್ಬಿಬ್ಬಾಗಿದ್ದಾರೆ. ಯಾಕೆಂದರೆ ಟೀಕಿಯ ಹೊಟ್ಟೆಯೊಳಗೆ ಸೇರಿದ್ದು ಬರೋಬ್ಬರಿ 8 ಒಳ ಉಡುಪುಗಳು ಹಾಗೂ 62 ಹೇರ್ ಬ್ಯಾಂಡ್, 4 ರಬ್ಬರ್ ಬ್ಯಾಂಡ್'ಗಳು. ಇವು ಜೀರ್ಣವಾಗದೇ ಇದ್ದ ಕಾರಣ ವಿಧಿ ಇಲ್ಲದ ವೈದ್ಯರು ಆಪರೇಷನ್ ನಡೆಸಿ ಈಗ ಹೊರ ತೆಗೆದಿದ್ದಾರೆ.

 

 

Show Full Article


Recommended


bottom right ad