Asianet Suvarna News Asianet Suvarna News

ಮೊಮೊ ತಿಂದರೆ ಕ್ಯಾನ್ಸರ್‌ ಬರುತ್ತಾ? ಇದನ್ನು ನಿಷೇಧಿಸಬೇಕಾ?

ಸಾಧಾರಣವಾಗಿ ದಕ್ಷಿಣ ಭಾರತೀಯರಿಗೆ ಈ ತಿಂಡಿಯ ಹೆಸರು ಅಷ್ಟಾಗಿ ಪರಿಚಯ ಇರಲಿಕ್ಕಿಲ್ಲ. ಆದರೆ, ಉತ್ತರ ಭಾರತೀಯರಿಗೆ ಈ ತಿಂಡಿಯ ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯ ಬೀದಿ ಬೀದಿಗಳಲ್ಲಿ ಈ ಖಾದ್ಯವನ್ನು ಮಾರುತ್ತಾರೆ. ಆದರೆ, ಮೊಮೊವನ್ನು ಬಾಯಿಯಲ್ಲಿ ಹಾಕಿಕೊಳ್ಳುವುದಕ್ಕೂ ಮುನ್ನ ಎಚ್ಚರ. ಅದರ ಸೇವನೆಯಿಂದ ಕ್ಯಾನ್ಸರ್‌ ಬರಬಹುದು. ಇಂಥದ್ದೊಂದು ಸುದ್ದಿ ಇದೀಗ ಜನರನ್ನು ಬೆಚ್ಚಿ ಬೀಳಿಸಿದೆ.

Do Momos Cause Cancer

ಜಮ್ಮು- ಕಾಶ್ಮೀರದ ಬಿಜೆಪಿ ರಾಜ್ಯಸಭಾ ಸದಸ್ಯ ರಮೇಶ್‌ ಅರೋರಾ ಅವರು, ಮೊಮೊಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಮೋನೊ​ಸೋಡಿಯಂ ಗ್ಲುಟಮೇನ್‌ (ಎಂಎಸ್‌ಜಿ)ಅಂಶ ಅಧಿಕ​ವಾಗಿದೆ. ಹೀಗಾಗಿ ಬೀದಿ ಬದಿಗೆ ಮೊಮೊ ತಿಂಡಿಗಳನ್ನು ಮಾರುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ​ದ್ದಾ​ರೆ.

ಮೋನೊಸೋಡಿಯಂ ಗ್ಲುಟಮೇನ್‌ ಅನ್ನು ಅಜ್ನಿಮೋಟೋ ಎಂದು ಸಾಮಾನ್ಯವಾಗಿ ಕರೆಯುತ್ತಾರೆ. ಎಲ್ಲಾ ಚೀನಿ ಖಾದ್ಯಗಳಲ್ಲಿಯೂ ಇದನ್ನು ಸೇರಿಸಲಾಗುತ್ತದೆ. ಇದರಿಂದ ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಅಡಗಿರುತ್ತವೆ. ಅವುಗಳ ಸೇವನೆ ಕ್ಯಾನ್ಸರ್‌ಗೂ ಕಾರಣವಾಗ​ಬಲ್ಲದು ಎಂದು ಅರೋರಾ ಹೇಳಿದ್ದರು. ಈ ಸುದ್ದಿ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಆದರೆ, ಈ ವದಂತಿಯನ್ನು ಬೆನ್ನತ್ತಿ ಹೊರಟ ಸಂದರ್ಭದಲ್ಲಿ ಮೊಮೊ ಖಾದ್ಯದಲ್ಲಿ ಎಂಎಸ್‌ಜಿ ಅಂಶ ಕಡಿಮೆ ಪ್ರಮಾಣ​ದ​ಲ್ಲಿ​ದ್ದು, ಅದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂಬ ಸಂಗತಿ ತಿಳಿದು ಬಂದಿದೆ. ದೆಹಲಿಯ ಗಂಗಾರಾಮ್‌ ಆಸ್ಪತ್ರೆಯ ವೈದ್ಯ ನರೇಂದ್ರ ಬನ್ಸಲ್‌ ಅವರನ್ನು ಈ ಬಗ್ಗೆ ಪ್ರಶ್ನೆ ಕೇಳಿದಾಗ, ಅಜ್ನಿ​ಮೋಟೋ ಅಥವಾ ಎಂಎಸ್‌ಜಿಯಲ್ಲಿ ಹೆಚ್ಚಿನ ಸೋಡಿಯಂ ಅಂಶವಿದೆ. ರಕ್ತದ ಒತ್ತಡ, ಹೃದ್ರೋಗಿಗಳು ಇದನ್ನು ತಿನ್ನುವುದು ಸೂಕ್ತವಲ್ಲ. ಆದರೆ, ಅದರಿಂದ ಕ್ಯಾನ್ಸರ್‌ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios