Asianet Suvarna News Asianet Suvarna News

ಅಂಬಿ-ಸುಮಲತಾ ಮದುವೆ ಸ್ವಾರಸ್ಯಕರ ಪ್ರಸಂಗ ಬಿಚ್ಚಿಟ್ಟ ಡಿಕೆಶಿ

ಅಂಬರೀಷ್ ಹಾಗೂ ಸುಮಲತಾ ಅವರ ವಿವಾಹದ ಬಗ್ಗೆ ಸಚಿವ ಡಿ.ಕೆ ಶಿವಕುಮಾರ್ ಅವರು ಸ್ವಾರಸ್ಯಕರ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. 

DK Shivakumar Talk About Ambareesh Marriage
Author
Bengaluru, First Published Nov 26, 2018, 8:55 AM IST

ಬೆಂಗಳೂರು :  ಮದು​ವೆ​ಯಾ​ಗಲು ಹಿಂಜ​ರಿ​ಯು​ತ್ತಿದ್ದ ಅಂಬ​ರೀಷ್‌ ಅವ​ರನ್ನು ಮದು​ವೆ​ಯಾ​ಗಲು ಮಾಜಿ ಸಚಿವ ದಿವಂಗತ ಎಚ್‌.ಸಿ. ಶ್ರೀಕಂಠಯ್ಯ ಅವರು ಮನ​ವೊ​ಲಿ​ಸಿ​ದ​ರಂತೆ. ಆದಿ​ಚುಂಚ​ನ​ಗಿರಿ ಶ್ರೀಗಳ ಸೂಚ​ನೆಯೂ ಇದೆ. ಇಡೀ ಸಮು​ದಾಯ ನೀನು ಸುಮ​ಲತಾ ಅವ​ರನ್ನು ಮದು​ವೆ​ಯಾ​ಗ​ಬೇಕು ಎಂದು ಬಯ​ಸು​ತ್ತಿದೆ ಎಂದು ಒತ್ತಡ ನಿರ್ಮಾಣ ಮಾಡಿದ್ದ​ರಂತೆ.

ಇಂತ​ಹ​ದೊಂದು ಸ್ವಾರ​ಸ್ಯ​ಕರ ಘಟ​ನೆ​ಯನ್ನು ಜಲ​ಸಂಪ​ನ್ಮೂಲ ಸಚಿವ ಡಿ.ಕೆ. ಶಿವ​ಕು​ಮಾರ್‌ ಭಾನು​ವಾರ ಸ್ಮರಿ​ಸಿ​ದ​ರು.

ಅಂಬ​ರೀಷ್‌ ಅವರ ಪಾರ್ಥಿವ ಶರೀರ ಇಡ​ಲಾ​ಗಿದ್ದ ಕಂಠೀ​ರವ ಕ್ರೀಡಾಂಗ​ಣದ ಬಳಿ ಮಾಧ್ಯ​ಮ​ದ​ವರೊಂದಿಗೆ ಮಾತ​ನಾ​ಡಿದ ಶಿವ​ಕು​ಮಾರ್‌ ಅವರು, ಬಂಗಾ​ರಪ್ಪ ಅವರು ಮುಖ್ಯ​ಮಂತ್ರಿ​ಯಾ​ಗಿದ್ದ ಸಂದ​ರ್ಭ​ದಲ್ಲಿ ಅಂಬ​ರೀಷ್‌ ಹಾಗೂ ಸುಮ​ಲತಾ ಮದು​ವೆಗೆ ನಡೆದ ರಾಜಿ-ಖಬೂ​ಲಿ​ಯಲ್ಲಿ ತಾವೂ ಬಾಗಿ​ಯಾ​ಗಿ​ದ್ದನ್ನು ವಿವ​ರಿ​ಸಿ​ದ್ದು ಹೀಗೆ.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸಂಪುಟದಲ್ಲಿ ಸಚಿವನಾಗಿದ್ದ ಅವಧಿ. ಕಾರ್ಯ​ಕ್ರ​ಮ​ವೊಂದರ ಪ್ರಯುಕ್ತ ಎಲ್ಲರು ಮಂಗಳೂರಿಗೆ ಹೊರಟಿದ್ದರು. ದಿವಂಗತ ಮಾಜಿ ಸಚಿವ ಎಚ್‌.ಸಿ. ಶ್ರೀಕಂಠಯ್ಯ ಅವ​ರೊಂದಿಗೆ ಮಂಗ​ಳೂ​ರಿಗೆ ಸಚಿವನಾಗಿದ್ದರಿಂದ ನಾನು ಹೇಳಿ ಹೋಗಿದ್ದೆ. ಅಂದು ಸಾಯಂಕಾಲ ಶ್ರೀಕಂಠಯ್ಯ ಅವರು, ಅಂಬರೀಶ್‌, ಅಪ್ಪಾಜಿ ನಾಯಕರ್‌, ಶ್ರೀಪತಿರಾಯ ಸೇರಿ ನಾಲ್ಕೈದು ಜನ ಮಾತನಾಡುತ್ತಾ ಕುಳಿತಿದ್ದೆವು.

ಆಗ ಶ್ರೀಕಂಠಯ್ಯ ಅವರು ಅಂಬ​ರೀಷ್‌ ಮದುವೆ ವಿಚಾರ ಪ್ರಸ್ತಾ​ಪಿ​ಸಿ​ದರು. ನಿನಗೆ 39 ವರ್ಷ ವಯಸ್ಸಾಯ್ತು. ಯಾವಾಗ ಮದುವೆ ಆಗ್ತೀಯಾ ಹೇಳು ಎಂದು ಗದರಿಸುವ ಧ್ವನಿಯಲ್ಲಿಯೇ ಕೇಳಿದರು. ಯಾಕೆ ಆ ಹುಡುಗಿ (ಸುಮಾಲತಾ)ಯನ್ನು ಕಾಡಿಸ್ತೀಯಾ? ಆದಷ್ಟುಬೇಗ ಮದುವೆ ಆಗು ಎಂದು ಗದರಿಸಿದರು. ನಿನ್ನ ಮದುವೆ ವಿಚಾರ ಮಾತನಾಡೋಕೆ ಎಲ್ಲರನ್ನು ಇಲ್ಲಿಗೆ ಕರೆಸಿದ್ದೇನೆ. ಇವತ್ತು ಎರಡಲ್ಲಿ ಒಂದು ತೀರ್ಮಾನ ಆಗಬೇಕು. ಆದಿಚುಂಚನಗಿರಿ ಸ್ವಾಮಿಗಳು ಕೂಡ ಹೇಳಿದ್ದಾರೆ. ಆದ್ದರಿಂದ ನಾವೆಲ್ಲಾ ಇಲ್ಲಿ ಸೇರಿದ್ದೇವೆ ಎಂದು ಒತ್ತಾಯಿಸಿದರು.

ಶ್ರೀಕಂಠಯ್ಯ ಅವರ ಮಾತಿಗೆ ಒಪ್ಪಿಗೆ ಸೂಚಿಸಿದ ಅಂಬರೀಶ್‌ ‘ಆಯ್ತು ಅಣ್ಣಯ್ಯ ಮದುವೆ ಆಗ್ತೇನೆ’ ಎಂದು ಒಪ್ಪಿಗೆ ಸೂಚಿಸಿ ಒಂದು ವಾರದಲ್ಲಿ ಅಂತಿಮ ತೀರ್ಮಾನ ತಿಳಿಸುವುದಾಗಿ ಹೇಳಿದರು. ಅಂದು ನನಗೆ ಅಂಬರೀಶ್‌ ಅವರ ಬಳಿ ಜೋರು ಮಾಡಿ ಮಾತನಾಡುವ ಶಕ್ತಿ ಇರಲಿಲ್ಲ. ಆದರೆ ಶ್ರೀಕಂಠಯ್ಯನವರು ದೊಡ್ಡ ಜಗಳವನ್ನೇ ಮಾಡಿದ್ದರು. ತಮ್ಮ ಹಾಗೂ ಸುಮಲತಾ ಮದು​ವೆಗೆ ಇಡೀ ಸಮಾಜ ಬಯ​ಸು​ತ್ತಿದೆ ಎಂಬು​ದನ್ನು ಅರಿತ ಅಂಬಿ ಮದುವೆಗೆ ಅಂತಿಮವಾಗಿ ಒಪ್ಪಿಗೆ ನೀಡಿದರು ಎಂದು ಶಿವ​ಕು​ಮಾರ್‌ ವಿವ​ರಿ​ಸಿ​ದ​ರು.

Follow Us:
Download App:
  • android
  • ios