news
By Suvarna Web Desk | 01:12 PM July 17, 2017
ಪರಪ್ಪನ ಅಗ್ರಹಾರದ ಅಸಲಿಯತ್ತು ಬಿಚ್ಚಿಟ್ಟ ಡಿಜಿಪಿ ರೂಪಾಗೆ ಎತ್ತಂಗಡಿ ಶಿಕ್ಷೆ!

Highlights

ಪರಪ್ಪನ ಅಗ್ರಹಾರದ ನೈಜತೆ ಬಹಿರಂಗಪಡಿಸಿದ ಬಂದೀಖಾನೆ ಡಿಜಿಪಿ ಡಿ. ರೂಪಾ ಸೇರಿದಂತೆ ಒಟ್ಟು ಐವರು ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಎತ್ತಂಗಡಿ ಶಿಕ್ಷೆ ನೀಡಿದೆ.

ಬೆಂಗಳೂರು(ಜು.17): ಪರಪ್ಪನ ಅಗ್ರಹಾರದ ನೈಜತೆ ಬಹಿರಂಗಪಡಿಸಿದ ಬಂದೀಖಾನೆ ಡಿಜಿಪಿ ಡಿ. ರೂಪಾ ಸೇರಿದಂತೆ ಒಟ್ಟು ಐವರು ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಎತ್ತಂಗಡಿ ಶಿಕ್ಷೆ ನೀಡಿದೆ.

ಬಂದೀಖಾನೆ ಡಿಜಿಪಿ ಹುದ್ದೆಯಲ್ಲಿದ್ದ ಡಿ. ರೂಪಾ ಅವರು ಕೆಲ ದಿನಗಳ ಹಿಂದಷ್ಟೇ ಪರಪ್ಪನ ಅಗ್ರಹಾರದಲ್ಲಿರುವ ವಾಸ್ತವತೆಯನ್ನು ಬಹಿರಂಗಗೊಳಿಸಿದ್ದರು. ಈ ವಿಚಾರ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ ಈ ಬೆಳವಣಿಗೆಗಳ ಹಿಂದೆಯೇ ಅವರನ್ನು ಏಕಾಏಕಿ ಟ್ರಾಫಿಕ್ ಅಮಿಷನರ್ ಆಗಿ ಅವರನ್ನು ಟ್ರಾನ್ಸ್ಫರ್ ಮಾಡಲಾಗಿದೆ.

ಇಷ್ಟೇ ಅಲ್ಲದೆ ಬಂದೀಖಾನೆ ಡಿಜಿಪಿ ಸತ್ಯನಾರಾಯಣರಾವ್ ಅವರನ್ನೂ ಎತ್ತಂಗಡಿ ಮಾಡಲಾಗಿದ್ದು, ಅವರಿಗೆ ಯಾಔಉದೇ ಬಸಲಿ ಹುದ್ದೆ ನೀಡಿಲ್ಲ. ಇದರೊಂದಿಗೆ ಎಂ. ಎನ್ ರೆಡ್ಡಿ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾವಣೆ ಮಾಡಿದ್ದರೆ, ಮೇಘರಿಕ್'ರನ್ನು ಬಂದೀಖಾನೆಯ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ. ಎ. ಎಸ್. ಎನ್ ಮೂರ್ತಿಯವರನ್ನು ಫಾರೆಸ್ಟ್ ಸೆಲ್'ನ ಎಡಿಜಿಪಿಯಾಗಿ ವರ್ಗಾವಣೆ ಮಾಡಿದ್ದರೆ ಅಮೃತ್'ಪಾಲ್'ರನ್ನು ಗುಪ್ತಚರ ಇಲಾಖೆಯ ಡಿಜಿಪಿಯಾಗಿ ವರ್ಗಾಯಿಸಲಾಗಿದೆ ಎಂದು ದಾಖಲೆಗಳಿಂದ ಬಯಲಾಗಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ಈ ದಾಖಲೆಗಳ ಪ್ರತಿ ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ.

 

Show Full Article


Recommended


bottom right ad