Asianet Suvarna News Asianet Suvarna News

ಕುತ್ತಿಗೆ ಮಸಾಜ್ ಮಾಡಿಸಿಕೊಳ್ಳುವರೇ ಎಚ್ಚರ: ಹೆಡ್ ಮಸಾಜ್ ವೇಳೆ ಸ್ಪಲ್ಪ ಯಾಮಾರಿದ್ರೂ ತಲೆ ಕಟ್!

ನೀವೂ ಹೇರ್‌ ಕಟಿಂಗ್​ ಸಲೂನ್​ಗೆ ಹೋಗುತ್ತಿರಾ? ಹೆಡ್​​ ಮಸಾಜ್​​ ಕೂಡ ಮಾಡಿಸಿಕೊಳ್ತೀರಾ? ಹಾಗಿದ್ದರೇ ಎಚ್ಚರ ಎಚ್ಚರ. ಏಕೆ ಅಂತೀರಾ ಒಮ್ಮೆ ಈ ಸ್ಟೋರಿ ನೋಡಿ.

Delhi Man Allegedly Suffers Nerve Damage Paralysis After Getting Neck Massage By A Barber

ನವದೆಹಲಿ(ಸೆ.21): ಅರೇ ಇದೇನಪ್ಪಾ ಅಂತ ಶಾಕ್ ಆಯ್ತಾ. ಹೌದು ಈ ಸುದ್ದಿ ನೋಡಿದ್ರೆ ಎಂಥವರೂ ಕೂಡ ಶಾಕ್ ಆಗ್ಲೇಬೇಕು. ನಿಮಗೆ ರಿಲ್ಯಾಕ್ಸ್​​  ತರಬಹುದು ಅಂತ ನೀವೇನಾದರೂ ಹೆಡ್​​ ಮಸಾಜ್ ಮಾಡಿಸಿಕೊಳ್ಳಕ್ಕೆ ಹೋಗಿದ್ರೆ, ನಿಮ್ಮ ಜೀವಕ್ಕೆ ಆಪತ್ತು ಬಂದುಬಿಡುತ್ತೆ. ಯಾಕಂದ್ರೆ ಇದೇ ತರ ಹೆಡ್​​ ಮಸಾಜ್​ ಮಾಡಿಸಿಕೊಳ್ಳಕ್ಕೆ ಹೋಗಿದ್ದವನು ಆಸ್ಪತ್ರೆ ಬೆಡ್​​ ಸೇರಿದ್ದಾನೆ. 

ದೆಹಲಿಯಲ್ಲಿ 54 ವರ್ಷದ ಅಜಯ್ ಕುಮಾರ್ ಎಂಬಾತ ಹೆಡ್​​ ಮಸಾಜ್​ ಮಾಡಿಸಿಕೊಳ್ಳಲು ಹೋಗಿದ್ದಾನೆ. ಸಲೂನ್‌ ಸಿಬ್ಬಂದಿ ಲಟಿಕೆ ತೆಗೆದು, ಕುತ್ತಿಗೆಯಿಂದ ಟಕ್‌ ಟಕ್​ ಎಂದು ಶಬ್ದ ಬರುವವರೆಗೂ ಮಸಾಜ್‌ ಮಾಡಿದ್ದಾನೆ. ಮಸಾಜ್‌ ಸರಿಯಾಗಿದೆ ಎಂದು ಖುಷಿಪಟ್ಟ ಅಜಯ್​'ಗೆ ಶಾಕ್​ ಕಾದಿತ್ತು. ಆತ ಎದ್ದು ನಿಂತಾಗ ಆತನ ಕುತ್ತಿಯ ನರಗಳೇ ಶಕ್ತಿ ಕಳೆದುಕೊಂಡಿದ್ದವು.

ಮಸಾಜ್‌ ವೇಳೆ ತೆಗೆದ ಲಟಿಕೆಯಿಂದ ಬರುತ್ತಂತೆ ಪಾರ್ಶ್ವವಾಯು!

ಹೆಡ್​​ ಮಸಾಜ್​ ಪದೇ ಪದೇ ಮಾಡಿಸುವುದರಿಂದ ಹಾಗೂ ನೆಟಿಕೆ ತೆಗೆಸಿಕೊಳ್ಳುವುದರಿಂದ ಉಸಿರಾಟದಲ್ಲಿ ಏರುಪೇರಾಗಿ ರಕ್ತದೊತ್ತಡ ಹೆಚ್ಚಳವಾಗುವುದರ ಜೊತೆಗೆ ಪಾರ್ಶ್ವವಾಯು ಪೀಡಿತರಾಗುವ ಸಂಭವವೂ ಇದೆ. ಮೆದುಳಿನ ಹಿಂಭಾಗಕ್ಕೆ ರಕ್ತ ಪೂರೈಕೆ ಮಾಡುವ ಪ್ರಮುಖ ನಾಡಿಗೆ ಹಾನಿಯಾಗುವ ಸಂಭವವಿದೆ. ಅಷ್ಟೇ ಅಲ್ಲದೆ ಮಸಾಜ್​ ವೇಳೆ ಸಲೂನ್‌ ಸಿಬ್ಬಂದಿ ಸ್ಪಲ್ಪ ಯಾಮಾರಿದ್ದರೂ ಅಂಗವೈಕಲ್ಯ ಅಥವಾ ಸಾವು ಸಂಭವಿಸುವ ಸಾಧ್ಯತೆ ಇವೆ.

ಒಟ್ಟಿನಲ್ಲಿ ಯಾವದಕ್ಕೂ ಸಲೂನ್​ ಶಾಪ್​ನಲ್ಲಿ ಹೆಡ್​​ ಮಸಾಜ್​ ಮಾಡಿಸಿಕೊಳ್ಳುವ ಗ್ರಾಹಕರು ಇನ್ನು ಮುಂದೆ ಸ್ಪಲ್ಪ ಯೋಚಿಸುವುದು ಒಳ್ಳೆಯದು.

Follow Us:
Download App:
  • android
  • ios