Asianet Suvarna News Asianet Suvarna News

Be Alert: ಪಾಕ್ ಕುತಂತ್ರಗಳಿಗೆ ಎಚ್ಚರಿಕೆಯೇ ನಿತಿನ್ ಗೋಖಲೆ ಮಂತ್ರ!

ವಿಂಗ್ ಕಮಾಂಡರ್ ಅಭಿನಂದನ್ ಬರುವಿಕೆಗೆ ಕಾದಿದೆ ಭಾರತ| ಬಾಲಾಕೋಟ್ ಸರ್ಜಿಕಲ್ ದಾಳಿಯ ನಂತರದ ಬೆಳವಣಿಗೆಗಳೇನು?| ರಕ್ಷಣಾ ತಜ್ಞ ನಿತಿನ್ ಗೋಖಲೆ ವಿಶೇಷ ಲೇಖನ| ಬಾಲಾಕೋಟ್ ದಾಳಿ ಸಂಘನಾತ್ಮಕ ಮತ್ತು ವ್ಯೂಹಾತ್ಮಕ ಯೋಜನೆಗೆ ಉದಾಹರಣೆ| ಪಾಕ್ ನಡೆ ಕುರಿತು ಎಚ್ಚರಿಕೆ ಅಗತ್ಯ ಅಂತಾರೆ ನಿತಿನ್ ಗೋಖಲೆ|

Defense Analyst Nitin Gokhale Caution on Pakistan Policies Against India
Author
Bengaluru, First Published Mar 1, 2019, 3:50 PM IST

ನಿತಿನ್ ಗೋಖಲೆ

ನವದೆಹಲಿ(ಮಾ.01): ಬಾಲಾಕೋಟ್ ವಾಯುದಾಳಿ ಬಳಿಕ ಇಡೀ ದೇಶ ವಾಯುಸೇನೆಯ ದಿಟ್ಟ ದಾಳಿಯನ್ನು ಸಂಭ್ರಮಿಸುತ್ತಿದೆ. ಪಾಕ್ ನೆಲಕ್ಕೆ ನುಗ್ಗುವ ಛಾತಿ ತೋರಿದ ಭಾರತೀಯ ವಾಯುಸೇನಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ಮಧ್ಯೆ ಬಾಲಾಕೋಟ್ ವಾಯುದಾಳಿ ಮತ್ತು ತದನಂತರದ ಭಾರತ-ಪಾಕ್ ನಡುವಿನ ಬಿಗುವಿನ ವಾತಾವರಣ ಕುರಿತು ಜನಪ್ರಿಯ ರಕ್ಷಣಾ ತಜ್ಞ ‘ಡಿಫೆನ್ಸ್ ಆ್ಯಂಡ್ ಸೆಕ್ಯುರಿಟಿ ಅಲರ್ಟ್’ ಕಾರ್ಯನಿರ್ವಾಹಕ ಸಂಪಾದಕ ನಿತಿನ್ ಗೋಖಲೆ ವಿಶೇಷ ಲೇಖನ ಬರೆದಿದ್ದಾರೆ.

ಓವರ್ ಟು ನಿತಿನ್ ಗೋಖಲೆ:

‘ಬಾಲಾಕೋಟ್ ವಾಯುದಾಳಿ ಸಂಘಟನಾತ್ಮಕ ಮತ್ತು ವ್ಯೂಹಾತ್ಮಕ ಯೋಜನಯೆ ಯಶಸ್ವಿ ಪ್ರದರ್ಶನವಾಗಿದ್ದು, ಇದಕ್ಕೆ ಭಾರತೀಯ ವಾಯುಸೇನೆಗೆ ವಿಶೇಷ ಅಭಿನಂದನೆಗಳು. ಭಾರತ ಅತ್ಯಂತ ಸೂಕ್ಷ್ಮವಾಗಿ ತನ್ನ ಟಾರ್ಗೆಟ್ ಗುರುತು ಮಾಡಿಕೊಂಡಿತ್ತು. ಅದರಂತೆ ಪಾಕ್ ನೆಲಕ್ಕೆ ನುಗ್ಗಿ ಜೆಇಎಂ ಕ್ಯಾಂಪ್‌ನ್ನು ಧ್ವಂಸಗೊಳಿಸಲಾಯಿತು. ಈ ದಾಳಿಗಾಘಿ ಮಿರಾಜ್-2000ನ್ನು ಬಳಸಿಕೊಂಡಿದ್ದೂ ಕೂಡ ವಾಯುಸೇನೆಯ ಚಾತುರ್ಯಕ್ಕೆ ಸಾಕ್ಷಿ.

1971 ರ ಬಳಿಕ ಸುಮಾರು 38 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ವಾಯುಸೇನೆ ಮೂಲಕ ಸರ್ಜಿಕಲ್ ದಾಳಿ ನಡೆಸುವ ಛಾತಿ ತೋರಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನಾರ್ಹರು.

ದಾಳಿಯ ಯೋಜನೆಗೆ ಅಂತಿಮ ಒಪ್ಪಿಗೆ ನೀಡಿದ್ದು ಪ್ರಧಾನಿ ಮೋದಿ ಅವರೇ ಹೌದಾರೂ, ಸಮಯ, ದಿನಾಂಕ ಮತ್ತು ದಾಳಿಯ ಸ್ಥಳದ ಕುರಿತು ನಿರ್ಧಾರ ಕೈಗೊಳ್ಳಲು ವಾಯುಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಇದು ಪ್ರಧಾನಿ ಮೋದಿ ಸೇನೆ ಮೇಲೆ ಇಟ್ಟ ನಂಬಿಕೆಗೆ ಸಾಕ್ಷಿಯಂತಿದೆ.

ಬಾಲಾಕೋಟ್ ದಾಳಿ ಹಲವು ರೀತಿಯಿಂದ ಭಾರತಕ್ಕೆ ವರದಾನವಾಗಿ ಪರಿಣಮಿಸಿತು. ಮೊದಲನೇಯದಾಗಿ ಮತ್ತ ಭಾರತದ ಮೇಲೆ ದಾಳಿ ಮಾಡಲು ಯೋಜಿಸುತ್ತಿದ್ದ ಜೆಎಎಂ ಕ್ಯಾಂಪ್‌ನ್ನೇ ಧ್ವಂಸಗೊಳಿಸಿ ಭವಿಷ್ಯದ ಸಂಭಾವ್ಯ ದಾಳಿಯನ್ನು ತಪ್ಪಿಸಿದೆ.

ಎರಡನೇಯದಾಗಿ ಪಾಕ್ ನೆಲದಲ್ಲಿ ಉಗ್ರರ ಅಡಗುತಾಣಗಳಿವೆ ಎಂಬುದನ್ನು ಮತ್ತ್ಮೊಮೆ ವಿಶ್ವ ವೇದಿಕೆಗೆ ಮನದಟ್ಟು ಮಾಡಿಕೊಡುವಲ್ಲಿ ಭಾರತ ಯಶಸ್ವಿಯಾಗಿದೆ. ಇದರಿಂದ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಶ್ವದ ಪ್ರಮುಖ ದೇಶಗಳು ಪಾಕಿಸ್ತಾನದ ಮೇಲೆ ಒತ್ತಡ ಹಾಕಿದವು. ಇದರ ಪರಿಣಾಮವಾಗಿಯೇ ಮಸೂದ್ ಅಜರ್ ನೆಲೆಗಳ ಮೇಲೆ ಪಾಕಿಸ್ತಾನ ದಾಳಿ ಮಾಡಿದೆ.

ಆದರೆ ಈ ಎಲ್ಲ ಬೆಳವಣಿಗೆಗಳ ಹೊರತಾಗಿಯೂ ಪಾಕಿಸ್ತಾನವನ್ನು ನಂಬಬಹುದು ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ಮುಗ್ಧತೆಯಾಗಲಿದೆ. ಕಾರಣ ಪಾಕ್‌ನ ಭಯೋತ್ಪಾದನೆ ಪರ ಮತ್ತು ಭಾರತ ವಿರೋಧಿ ನೀತಿ ಕುರಿತು ಅರಿವಿರದ ಒಂದೇ ಒಂದು ರಾಷ್ಟ್ರ ಈ ಭೂಮಿ ಮೇಲಿಲ್ಲ.

ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನ ತಾನು ಶಾಂತಿಗೆ ಬದ್ಧ ಎಂದು ಹೇಳುತ್ತಿದೆ. ಆದರೆ ಶಾಂತಿ ಮತ್ತು ಪಾಕಿಸ್ತಾನ ಎಂದರೆ ‘ಎತ್ತಣ ಮಾಮರ ಎತ್ತಣ ಕೋಗಿಲೆ’ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈ ಹಿನ್ನೆಲೆಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಬರುವಿಕೆಯ ಸಂಭ್ರಮದ ಮಧ್ಯೆಯೂ ಪಾಕಿಸ್ತಾನದ ಮುಂದಿನ ನಡೆ ಕುರಿತು ಎಚ್ಚರಿಕೆಯಿಂದಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು’.

Follow Us:
Download App:
  • android
  • ios